ನವದೆಹಲಿ : ಭಾರತದಲ್ಲಿ ಕೊರೊನಾ ಆರಂಭವಾದ ದಿನಗಳಿಂದ ಜನರ ಸಾವು, ನೋವು, ನರಳಾಟಗಳು ನಡೆಯುತ್ತಲೇ ಇದೆ. ಆದರೆ ಈಗ ಮತ್ತೆ ಈ ಪ್ರಕರಣಗಳು ಹೆಚ್ಚುತ್ತಿದ್ದು. ಜನರಲ್ಲಿ ಆತಂತ ಹೆಚ್ಚಾಗಿದೆ. ದೇಶದಲ್ಲಿ ಹೊಸದಾಗಿ 45,083 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದೆ.
ಕೋರೋನಾ ಪ್ರಕರಣ ಏರಿಕೆಯ ಜೋತೆಗೆ ಸಾವಿನ ಸಂಖ್ಯೆಯು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಕೊರೊನಾದಿಂದ 460 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳು 3,26,95,030 ಇದ್ದು ಸೋಂಕು ಪ್ರಕರಣಗಳು ಸತತ ಐದನೇ ದಿನವೂ ಏರಿಕೆಯಾಗಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಈವರೆಗೆ ಒಟ್ಟು 4,37,830 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ 3,68,558 ಸಕ್ರಿಯ ಪ್ರಕರಣಗಳು ಇದ್ದು ಇದು ಒಟ್ಟು ಸೋಂಕಿನ ಪ್ರಕರಣದ ಶೇ 1.13ರಷ್ಟು ಆಗಿದೆ. ಗುಣಮುಖರಾಗುವವರ ಪ್ರಮಾಣ ಶೇ 97.53 ಇದೆ ಎಂದು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: Kerala Corona Updates : ಕೇರಳದಲ್ಲಿ ನಿಲ್ಲದ ಕೊರೊನಾ ಆರ್ಭಟ : ಇಂದು 31,265 ಮಂದಿಗೆ ಕೊರೊನಾ ಸೋಂಕು