ಮಂಗಳೂರು : ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ ದಂಪತಿಗಳಿಬ್ಬರು ಭಯದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಚಿತ್ರಾಪುರದಲ್ಲಿ ನಡೆದಿದೆ.

ಪಡುಬಿದ್ರಿ ಮೂಲದ ರಮೇಶ್ ಸುವರ್ಣ ( 45 ವರ್ಷ) ಮತ್ತು ಗುಣ ಆರ್.ಸುವರ್ಣ (35 ವರ್ಷ) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಚಿತ್ರಾಪುರದ ರೆಹೆಜಾ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ದಂಪತಿ ಕಳೆದೊಂದು ವಾರದ ಹಿಂದೆ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದರಿಂದಾಗಿ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿತ್ತು. ಇದರಿಂದ ಹೆದರಿದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್, ಹಿಂದೂ ಸಂಘಟನೆಯ ಮುಖಂಡರಾದ ಶರಣ್ ಪಂಪ್ ವೆಲ್ ಹಾಗೂ ಸತ್ಯಜಿತ್ ಸುರತ್ಕಲ್ ಅವರಿಗೂ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಅಂತ್ಯಕ್ರೀಯೆಗಾಗಿ ಒಂದು ಲಕ್ಷ ರೂಪಾಯಿ ಹಣವನ್ನು ಇಟ್ಟಿದ್ದೇವೆ. ಅಲ್ಲದೇ ಮನೆಯಲ್ಲಿರುವ ಪೀಠೋಪಕರಣಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಬಡವರಿಗೆ ಹಂಚಿ ಎಂದು ವಾಯ್ಸ್ ಮೆಸೇಜ್ ಕಳುಹಿಸಿದ್ದರು.
ಕಮಿಷನರ್ ಶಶಿಕುಮಾರ್ ಅವರಿಗೆ ಮೆಸೇಜ್ ಬರುತ್ತಿದ್ದಂತೆಯೇ ಅಲರ್ಟ್ ಆಗಿದ್ದಾರೆ. ಕೂಡಲೇ ಸುರತ್ಕಲ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ತೆರಳುವಾಗಲೇ ರಮೇಶ್ ಹಾಗೂ ಗುಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ಸುವರ್ಣ ಅವರು ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ. ಸಾವಿನಗೂ ಮುನ್ನ ಗುಣ ಆರ್.ಸುವರ್ಣ ತಮ್ಮ ಸಾವಿನ ಕುರಿತು ಡೆತ್ ನೋಟ್ ಬರೆದಿದ್ದಾರೆ. ತಾನು ಬಾಲ್ಯದಿಂದಲೂ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮಕ್ಕಳಾಗಿಲ್ಲ ಅನ್ನೋ ನೋವು ನಮ್ಮನ್ನು ಕಾಡುತ್ತಿದೆ. ಎಲ್ಲಿ ಹೋದರೂ ಮಕ್ಕಳ ಬಗ್ಗೆಯೇ ಕೇಳುತ್ತಾರೆ ಎಂದು ನೋವನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ದ.ಕ, ಉಡುಪಿಯಲ್ಲಿ ನಿಯಂತ್ರಣಕ್ಕೆ ಬರ್ತಿಲ್ಲಾ ಕೊರೊನಾ : ಈ ನಿಯಮಗಳನ್ನು ಪಾಲಿಸಿ ಅಂತಿದೆ ಆರೋಗ್ಯ ಇಲಾಖೆ
ಅಲ್ಲದೇ ಕಳೆದ ಹತ್ತು ದಿನಗಳಿಂದ ಕೋವಿಡ್ ಸೋಂಕಿಗೆ ತುತ್ತಾಗಿದ್ದೇಔಎ. ಬ್ಲಾಕ್ ಫಂಗಸ್ ಭಯ ನಮ್ಮನ್ನು ಕಾಡುತ್ತಿದೆ. ನನ್ನ ಗಂಡನಿಗೂ ಕೂಡ ಕೋವಿಡ್ ಲಕ್ಷಣ ಕಂಡು ಬಂದಿದೆ. ನನ್ನ ತಂದೆ, ತಾಯಿ, ತಮ್ಮನಿಗೂ ಕೋವಿಡ್ ಸೋಂಕು ತಗುಲಿದ್ದು, ಅವರು ಗುಣಮುಖರಾಗಿದ್ದಾರೆ. ಆದರೆ ನಮ್ಮ ಅಂತ್ಯಕ್ರೀಯೆಗೆ ಅವರಿಗೆ ತೊಂದರೆ ಕೊಡಬಾರದು. ಅಂತ್ಯಕ್ರೀಯೆ ಯನ್ನು ಹಿಂದೂ ಪದ್ದತಿಯಂತೆ ನಡೆಸಿ ಎಂದಿದ್ದು, ಮನೆ ಮಾಲೀಕರಿಗೂ ಕೂಡ ಕ್ಷಮೆ ಕೋರಿದ್ದಾರೆ. ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Mangalore : ಭಾರೀ ಪ್ರಮಾಣ ಸ್ಫೋಟಕ ಪತ್ತೆ : ಆರೋಪಿ ಬಂಧನ