ನೀ ಸಿಗೋವರೆಗೂ ಸಿನಿಮಾಗೆ ಸಜ್ಜಾದ ಶಿವಣ್ಣ: ಲವ್ವರ್ ಬಾಯ್ ಪಾತ್ರಕ್ಕೆ ಶುಭಹಾರೈಸಿದ ಸುದೀಪ್!

ಕನ್ನಡದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ತಮ್ಮ 124 ನೇ ಸಿನಿಮಾಗೆ ಸಜ್ಜಾಗಿದ್ದು, ನೀ ಸಿಗೋವರೆಗೂ ಎಂಬ ಸಿನಿಮಾ ಮೂಲಕ ಮತ್ತೊಮ್ಮೆ ಲವ್ವರ್ ಬಾಯ್ ಇಮೇಜ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಮುಹೂರ್ತ ನೆರವೇರಿದ್ದು, ಅಭಿನಯ ಚಕ್ರವರ್ತಿ ಸುದೀಪ್ ಕ್ಲ್ಯಾಪ್ ಮಾಡುವ ಮೂಲಕ ಶಿವಣ್ಣ ಸಿನಿಮಾಗೆ ಶುಭಹಾರೈಸಿದ್ದಾರೆ. ನಾಯಕಿಯಾಗಿ ಮೆಹ್ರಿನ್ ಫಿರ್ಜಾದಾ ನಟಿಸುತ್ತಿದ್ದು, ತೆಲುಗಿನ ರವಿ ಧುಲಿಪುಡಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ನೀ ಸಿಗೋವರೆಗೂ ಲವ್ ಸ್ಟೋರಿಯಾಗಿದ್ದು, ನಿರ್ದೇಶಕರ ಆಸೆಯಂತೆ ಇಂತಹದೊಂದು ಚಿತ್ರದಲ್ಲಿ ನಟಿಸಲು ಸಿದ್ಧವಾಗಿದ್ದೇನೆ. ಎಲ್ಲರನ್ನು ಕನೆಕ್ಟ್ ಮಾಡುವಂತ ಕಥೆ ಸಿನಿಮಾ ದಲ್ಲಿದೆ ಎಂದು ಶಿವಣ್ಣ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದ್ದಾರೆ. ನನ್ನ ಆರಂಭದ ಸಿನಿಮಾಗಳಿಗೆ ಶಿವಣ್ಣ ಕ್ಯ್ಲಾಪ್ ಮಾಡಿದ್ದರು. ನನ್ನ ಸಿನಿಜರ್ನಿಯಲ್ಲಿ ಶಿವಣ್ಣನ ಪಾತ್ರವೂ ಇದೆ ಎಂದು ಸುದೀಪ್ ಶಿವಣ್ಣರನ್ನು ಹೊಗಳಿದ್ದಾರೆ. ಶಿವಣ್ಣನ ಆನಂದ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ನಿರ್ಮಾಪಕ ನಾರಾಲಶ್ರೀನಿವಾಸ್ ರೆಡ್ಡಿ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

ಸಿನಿಮಾದಲ್ಲಿ ರಾಬರ್ಟ್ ಸಿನಿಮಾದ ಮೂಲಕ ಪ್ರಸಿದ್ಧಿ ಪಡೆದ ಗಾಯಕಿ ಮಂಗ್ಲಿ ಸಹ ಬಣ್ಣ ಹಚ್ಚುತ್ತಿದ್ದು, ನಾಸಿರ್, ಸಂಪತ್, ಸಾಧುಕೋಕಿಲ್ ತಾರಾಗಣದಲ್ಲಿದ್ದಾರೆ. ಚರಣ್ ಸಂಗೀತವಿರುವ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.

ಇದನ್ನೂ ಓದಿ : ಆನ್ ಲೈನ್ ಕಲಿಕೆ ಪ್ರೋತ್ಸಾಹಿಸಲು ದೊಡ್ಮನೆ ಪ್ರಯತ್ನ: ಡಾ.ರಾಜ್ ಕುಮಾರ್ ಲರ್ನಿಂಗ್ ಆಪ್ ರಿಲೀಸ್!

ಇದನ್ನೂ ಓದಿ : ಬಹುದಿನಗಳ ಬಳಿಕ ಮೌನಮುರಿದ ಶಿಲ್ಪಾ ಶೆಟ್ಟಿ: ವಿಡಿಯೋದಲ್ಲಿ ಕುಂದ್ರಾ ಪತ್ನಿ ಹೇಳಿದ್ದೇನು ಗೊತ್ತಾ?!

Comments are closed.