ಬೆಂಗಳೂರು : ಕೊರೊನಾ ಮಹಾಮಾರಿ ಮತ್ತೆ ರಾಜ್ಯದಲ್ಲಿ ಆರ್ಭಟ ಮುಂದುವರಿಸಿದೆ. ಇಂದು ಒಂದೇ ದಿನ ಬರೋಬ್ಬರಿ 204 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 6345ಕ್ಕೆ ಏರಿಕೆಯಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ಇಂದು ಕೂಡ ಜಿಲ್ಲೆಯಲ್ಲಿ ಬರೋಬ್ಬರಿ 66 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇನ್ನು ಕಳೆದೆರಡು ದಿನಗಳಿಂದಲೂ ಯಾವುದೇ ಪ್ರಕರಣ ದಾಖಲಾಗಿಲ್ಲದ ಉಡುಪಿ ಜಿಲ್ಲೆಯಲ್ಲಿಂದು ಮತ್ತೆ ಕೊರೊನಾ ತನ್ನ ಆರ್ಭಟ ಮುಂದುವರಿಸಿದೆ. ಜಿಲ್ಲೆಯಲ್ಲಿ 22 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಒಂದೇ ದಿನ 4 ಮಂದಿಯನ್ನು ಬಲಿ ಪಡೆದಿರುವ ಕೊರೊನಾ ಮಹಮಾರಿ ಸಿಲಿಕಾನ್ ಸಿಟಿಯಲ್ಲಿ ಶಾಕ್ ಕೊಟ್ಟಿದೆ. ಬೆಂಗಳೂರಲ್ಲಿಂದು 17 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇನ್ನು ಕಲಬುರಗಿ ಜಿಲ್ಲೆಯಲ್ಲಿ 16, ರಾಯಚೂರು ಜಿಲ್ಲೆಯಲ್ಲಿ 15, ಬೀದರ್ ಜಿಲ್ಲೆಯಲ್ಲಿ 14, ಶಿವಮೊಗ್ಗ ಜಿಲ್ಲೆಯಲ್ಲಿ 10, ದಾವಣಗೆರೆಯಲ್ಲಿ 9, ಕೋಲಾರ 6, ಮೈಸೂರು 5, ರಾಮನಗರ 5, ಬಾಗಲಕೋಟೆಯಲ್ಲಿ 3, ಉತ್ತರ ಕನ್ನಡ 2, ದಕ್ಷಿಣ ಕನ್ನಡ 2, ಹಾಸನ 2, ಧಾರವಾಡ 2, ಬೆಂಗಳೂರು ಗ್ರಾಮಾಂತರ 1, ಚಿಕ್ಕಮಗಳೂರು 1, ಕೊಪ್ಪಳದಲ್ಲಿ ಓರ್ವ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. . ರಾಜ್ಯದಲ್ಲಿಂದು ಒಂದೇ ದಿನ 4 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಡೆಡ್ಲಿ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.
ಉಡುಪಿ 22, ಯಾದಗಿರಿ 66 ಮಂದಿಗೆ ಸೋಂಕು : ರಾಜ್ಯದಲ್ಲಿ ಮತ್ತೆ ಡೆಡ್ಲಿ ಕೊರೊನಾ ಸೋಂಕಿನ ಆರ್ಭಟ
- Advertisement -