“ಆನ್ ಲೈನ್ ಕ್ಲಾಸ್” ಯೂ ಟರ್ನ್ ಹೊಡೆದ ಸಚಿವ ಸುರೇಶ್ ಕುಮಾರ್

0

ಬೆಂಗಳೂರು : ರಾಜ್ಯದಲ್ಲಿ 1 ರಿಂದ 7ನೇ ತರಗತಿ ವರೆಗೆ ಆನ್ ಲೈನ್ ಶಿಕ್ಷಣವನ್ನು ರದ್ದುಪಡಿಸಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಂತಹದ್ದೊಂದು ಮಹತ್ವದ ತೀರ್ಮಾನಕೈಗೊಳ್ಳಲಾಗಿದೆ ಎಂದು ಜನರು ಖುಷಿಯಾಗಿದ್ರು. ಆದ್ರೆ ಮಧ್ಯಾಹ್ನ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಯೂಟರ್ನ್ ಹೊಡೆದಿದ್ದಾರೆ.

ಹೌದು, ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಖಾಸಗಿ ಶಾಲೆಗಳು ಆನ್ ಲೈನ್ ತರಗತಿ ಆರಂಭಿಸಿದ್ದವು. ಪುಟಾಣಿ ಮಕ್ಕಳಿಗೆ ಆನ್ ಲೈನ್ ತರಗತಿ ಕುರಿತು ರಾಜ್ಯದಾದ್ಯಂತ ಪೋಷಕರು ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ 1 ರಿಂದ 7ನೇ ತರಗತಿಯವರೆಗೆ ಆನ್ ಲೈನ್ ಶಿಕ್ಷಣವನ್ನು ರದ್ದು ಪಡಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದರು. ಆದ್ರೆ ಮಧ್ಯಾಹ್ನವಾಗುತ್ತಲೇ ಶಿಕ್ಷಣ ಸಚಿವರ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಕೇವಲ 1 ರಿಂದ 5ನೇ ತರಗತಿಯವರೆಗೆ ಮಾತ್ರವೇ ಆನ್ ಲೈನ್ ಶಿಕ್ಷಣವನ್ನು ರದ್ದು ಮಾಡಲಾಗಿದೆ. ಆದರೆ 7ನೇ ತರಗತಿಯ ವರೆಗೂ ನಿಷೇಧವನ್ನು ವಿಸ್ತರಣೆಯನ್ನು ಮಾಡಿಲ್ಲ. ಸಚಿವ ಸಂಪುಟದ ಸಭೆಯಲ್ಲಿ ಆನ್ ಲೈನ್ ಶಿಕ್ಷಣದ ಕುರಿತು ಚರ್ಚೆ ನಡೆಸಲಾಗಿದೆ. ಒಂದಿಬ್ಬರು ಸಚಿವರು 7ನೇ ತರಗತಿಯ ವರೆಗೂ ರದ್ದು ಮಾಡುವಂತೆ ಸಲಹೆ ನೀಡಿದ್ದಾರೆ. ಆದ್ರೆ ಸಭೆಯಲ್ಲಿ ಈ ಕುರಿತು ಯಾವುದೇ ನಿರ್ಣಯಕೈಗೊಂಡಿಲ್ಲ ಎಂದಿದ್ದಾರೆ. ಶಿಕ್ಷಣ ಸಚಿವರ ಟ್ವೀಟ್ ಹಲವು ಗೊಂದಲಗಳಿಗೆ ಎಡೆಮಾಡಿಕೊಟ್ಟಿದ್ದು, ಸಚಿವರೇ ಖುದ್ದು ಆನ್ ಲೈನ್ ಶಿಕ್ಷಣವನ್ನು ಬೆಂಬಲಿಸುತ್ತಿದ್ಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ.

Leave A Reply

Your email address will not be published.