Coronavirus Omicron :ದೇಶದಲ್ಲಿ ಕೊರೊನಾ ಆರ್ಭಟ ಮಿತಿಮೀರಿದೆ. ಒಂದೇ ದಿನದಲ್ಲಿ ದೇಶದಲ್ಲಿ 2,68,833 ಹೊಸ ಪ್ರಕರಣಗಳು ವರದಿಯಾಗಿವೆ. ಇದರ ಜೊತೆಯಲ್ಲಿ ಕಳೆದ 24 ಗಂಟೆಗಳಲ್ಲಿ 402 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 4,85,752ಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ 14.7 ಪ್ರತಿಶತದಿಂದ 16.66 ಪ್ರತಿಶತಕ್ಕೆ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ 1,22,684 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಪ್ರಸ್ತುತ 14,17,820 ಸಕ್ರಿಯ ಪ್ರಕರಣಗಳು ಇವೆ. ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 6,041ಕ್ಕೆ ಏರಿಕೆ ಕಂಡಿದೆ.
ಇತ್ತ ಮುಂಬೈನಲ್ಲಿ ಶುಕ್ರವಾರ 11,317 ದೈನಂದಿನ ಪ್ರಕರಣಗಳು ವರದಿಯಾಗಿವೆ.ಈ ಮೂಲಕ ಪಾಸಿಟಿವಿಟಿ ದರದಲ್ಲಿ 21.7 ಶೇಕಡಾದಿಂದ 20 ಪ್ರತಿಶತಕ್ಕೆ ಇಳಿಕೆ ಕಂಡಿದೆ. ಶುಕ್ರವಾರ ಮುಂಬೈನಲ್ಲಿ 54,924 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಇನ್ನು ದೆಹಲಿಯಲ್ಲಿ ಶುಕ್ರವಾರ 24,383 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಈ ನಡುವೆ ಭಾರತವು ಕೋವಿಡ್ 19 ಮೂರನೇ ಅಲೆ ಹೊಸ್ತಿಲಲ್ಲಿದೆ. ಏತನ್ಮಧ್ಯೆ ಕೇಂದ್ರ ಸರ್ಕಾರ ಬಜೆಟ್ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಕೋವಿಡ್ 19 ಮಾರ್ಗಸೂಚಿಗಳನ್ನು ಪಾಲಿಸುತ್ತಾ 24 ಸಾವಿರ ಜನರು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನು ಓದಿ : Covid-19 Updates : ಕರ್ನಾಟಕದಲ್ಲಿಂದು 28723 ಮಂದಿಗೆ ಕೊರೊನಾ : ಮೈಸೂರು, ದ.ಕ, ಉಡುಪಿಯಲ್ಲಿ ದಾಖಲೆಯ ಕೇಸ್
ಇದನ್ನೂ ಓದಿ : Karnataka extends Covid rules :ಕೋವಿಡ್ ಮಾರ್ಗಸೂಚಿ ಪಾಲನೆ ಅವಧಿ ವಿಸ್ತರಿಸಿದ ರಾಜ್ಯ ಸರ್ಕಾರ
ಇದನ್ನೂ ಓದಿ : ಲಸಿಕೆ ಸ್ವೀಕರಿಸದವರ ಪಾಲಿಗೆ ‘ಓಮಿಕ್ರಾನ್’ ಅಪಾಯಕಾರಿ : ವಿಶ್ವ ಆರೋಗ್ಯ ಸಂಸ್ಥೆ
ಇದನ್ನೂ ಓದಿ : nimhans recruitment 2022 : ನಿಮ್ಹಾನ್ಸ್ ಸಂಸ್ಥೆಯಲ್ಲಿ ಅಟೆಂಡರ್ ಹುದ್ದೆಗೆ ಅರ್ಜಿ ಆಹ್ವಾನ; ಜವಾಬ್ದಾರಿ, ಕೆಲಸದ ವಿವರ ಇಲ್ಲಿದೆ
Coronavirus Omicron India Live: India reports over 2.68 lakh fresh Covid cases; Omicron cases now at 6,041