Karnataka Covid-19 live Updates : ಮತ್ತೆ ಕೊರೋನಾ ಸೋಂಕಿನಲ್ಲಿ ಕರ್ನಾಟಕದ ದಾಖಲೆ : ಒಂದೇ ದಿನ ದಾಖಲಾಯ್ತು 50,210 ಪ್ರಕರಣ

ಬೆಂಗಳೂರು : ರಾಜ್ಯದಲ್ಲಿ ಉದ್ದಿಮೆಗಳ ಒತ್ತಡಕ್ಕೆ ಮಣಿದು ವೀಕೆಂಡ್ ಕರ್ಪ್ಯೂ ಸಡಿಲಿಸಿದ ಸರ್ಕಾರ ಇದಕ್ಕಾಗಿ ಭಾರಿ ಬೆಲೆ ತೆರೆಬೇಕಾದ ಮುನ್ಸೂಚನೆ ಲಭ್ಯವಾಗಿದ್ದು, ರಾಜ್ಯದಲ್ಲಿ ರವಿವಾರ ಒಟ್ಟು ಕೊರೋನಾ ಪ್ರಕರಣಗಳು ಬರೋಬ್ಬರಿ 50 ಸಾವಿರದ ಗಡಿ ದಾಟಿದೆ. ಇನ್ನೇನು ಎರಡು ವಾರದಲ್ಲಿ ರಾಜ್ಯದಲ್ಲಿ ಕೊರೋನಾ ಪ್ರಭಾವ ತಗ್ಗಲಿದೆ ಎಂದು ಆರೋಗ್ಯ ಸಚಿವರು ಭರವಸೆ ನೀಡಿದ ದಿನವೇ ರಾಜ್ಯದಲ್ಲಿ 50 ಸಾವಿರ ಕೊರೋನಾ ಪ್ರಕರಣಗಳು (Karnataka Covid-19 live Updates) ದಾಖಲಾಗಿದೆ.

ರಾಜ್ಯದಲ್ಲಿ ಇಂದು ಒಟ್ಟು 50,210 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು19 ಜನರು ಕೊರೋನಾಗೆ ಬಲಿಯಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಇಂದು ಒಟ್ಟು 26299 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಇಂದು 8 ಜನರು ಕೊರೋನಾಕ್ಕೆ ಸಾವನ್ನಪ್ಪಿದ್ದರೇ, ರಾಜ್ಯದಲ್ಲಿ 11 ಜನರು ಕೊರೋನಾಕ್ಕೆ ಉಸಿರು ಚೆಲ್ಲಿದ್ದಾರೆ. ಇಂದು ರಾಜ್ಯದ ಕೊರೋನ ಪಾಸಿಟಿವಿಟಿ ರೇಟ್ 22.77 ರಷ್ಟಿದೆ. ಸಾವಿನ ಪ್ರಮಾಣ ಕೇವಲ 0.03 ರಷ್ಟಿದೆ. ಕೊರೋನಾ ಮೊದಲನೇ ಅಲೆಯ ಬಳಿಕ ಇದೇ ಮೊದಲ‌ ಬಾರಿಗೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿದಾಟಿದೆ.

ಸರ್ಕಾರ ಶುಕ್ರವಾರ ಕೋವಿಡ್ ತಂತ್ರಜ್ಞರು, ಅಧಿಕಾರಿಗಳು ಹಾಗೂ ಸಚಿವರ ಜೊತೆ ಸಭೆ ನಡೆಸಿದ್ದ ಸಿಎಂ ಉದ್ದಿಮೆಗಳು ಹಾಗೂ ವ್ಯಾಪಾರಸ್ಥರ ಒತ್ತಡಕ್ಕೆ ಮಣಿದು ಶುಕ್ರವಾರ ಸಂಜೆಯಿಂದಲೇ ಜಾರಿಯಾಗುವಂತೆ ವೀಕೆಂಡ್ ಕರ್ಪ್ಯೂ ರದ್ದುಗೊಳಿಸಿ ಆದೇಶ ಹೊರಡಿಸಿದ್ದರು. ಸರ್ಕಾರ ವೀಕೆಂಡ್ ಕರ್ಪ್ಯೂ ರದ್ದುಗೊಳಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಪ್ರಕರಣಗಳು 50 ಸಾವಿರದ ಗಡಿ ದಾಟಿದ್ದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಹೊಸದಾಗಿ 167 ಓಮೈಕ್ರಾನ್ ಪ್ರಕರಣಗಳು ಕೂಡ ದಾಖಲಾಗಿವೆ.

ಇನ್ನು ಬೆಳ್ಳಂಬೆಳಗ್ಗೆ ಮಾತನಾಡಿದ್ದ. ಡಾ.ಸುಧಾಕರ್ ರಾಜ್ಯದಲ್ಲಿ ಇನ್ನೆರಡು ವಾರದಲ್ಲಿ ಕೊರೋನಾ ಪ್ರಕರಣಗಳಲ್ಲಿ ಇಳಿಕೆಯಾಗಲಿದೆ. ಐಸಿಎಂಆರ್ ಸೂಚನೆಯಂತೆ ಇನ್ನು ಕೊರೋನಾ ಗುಣಲಕ್ಷಣ ಇದ್ದವರಿಗಷ್ಟೇ ಟೆಸ್ಟ್ ನಡೆಸಲಾಗುತ್ತದೆ ಎಂದೆಲ್ಲ ಮಾಹಿತಿ ನೀಡಿದ್ದರು.ಅಲ್ಲದೇ ಸಿಎಂ ತಜ್ಞರೊಂದಿಗೆ ಚರ್ಚಿಸಿ ಸಾಕಷ್ಟು ವಿಶ್ಲೇಷಿಸಿದ ಬಳಿಕವೇ ನಿರ್ಣಯ ಕೈಗೊಂಡಿದ್ದಾರೆ ಎಂದೆಲ್ಲ ಸಮಜಾಯಿಸಿ ನೀಡಿದ್ದರು.

ಆದರೆ ಈಗ ಮತ್ತೆ ಕೊರೋನಾ ಪ್ರಕರಣಗಳಲ್ಲಿ ಏರಿಕೆ ಆರಂಭವಾಗಿದೆ. ಒಂದೆಡೆ ಸರ್ಕಾರ ಉದ್ದಿಮೆಗಳ ಒತ್ತಡಕ್ಕೆ ಮಣಿದು ವೀಕೆಂಡ್ ಕರ್ಪ್ಯೂ ಸಡಿಲಿಸಿದೆ. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ಶಾಲೆಗಳು ಕೊರೋನಾ ಸ್ಪೆಡರ್ ಗಳಾಗುತ್ತಿದ್ದರೂ ಶಾಲೆಗಳನ್ನು ಮುಚ್ಚಲು ಮನಸ್ಸು ಮಾಡುತ್ತಿಲ್ಲ. ಈ‌ ಮಧ್ಯೆ ಪ್ರತಿನಿತ್ಯ ಕರ್ನಾಟಕ ದಾಖಲೆಯ ಕೊರೋನಾ ಪ್ರಕರಣ ದಾಖಲಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ.

ಇದನ್ನೂ ಓದಿ : ಕಾರ್, ಹಣ, ಚಿನ್ನ ಆಯ್ತು ಈಗ ಮಾರ್ಜಾಲ ಸರದಿ : ಬೆಕ್ಕಿನ ಕಳ್ಳರನ್ನು ಹುಡುಕಲು ಖಾಕಿ ಮೊರೆ ಹೋದ ಮಾಲೀಕ

ಇದನ್ನೂ ಓದಿ : ವೀಕೆಂಡ್ ಕರ್ಪ್ಯೂ ಆಯ್ತು ಈಗ ನೈಟ್ ಕರ್ಪ್ಯೂ ಸರದಿ: ಸಿಎಂ ಮೇಲೆ ಒತ್ತಡ ತಂತ್ರಕ್ಕೆ ಸಿದ್ಧವಾಯ್ತು ಮಾಸ್ಟರ್ ಪ್ಲ್ಯಾನ್

( Coronavirus Omicron variant in Karnataka covid-19 live updates: Karnataka reports 50,210 new case, positivity rate at 22.77%)

Comments are closed.