ಸೋಮವಾರ, ಜೂನ್ 16, 2025
HomeCorona UpdatesCoronavirus pandemic : ದೇಶದಲ್ಲಿ ಒಂದೇ ದಿನ 2.35 ಲಕ್ಷ ದೈನಂದಿನ ಕೋವಿಡ್​​ ಪ್ರಕರಣ ಧೃಡ

Coronavirus pandemic : ದೇಶದಲ್ಲಿ ಒಂದೇ ದಿನ 2.35 ಲಕ್ಷ ದೈನಂದಿನ ಕೋವಿಡ್​​ ಪ್ರಕರಣ ಧೃಡ

- Advertisement -

Coronavirus pandemic : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,35,532 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದೊಂದು ದಿನದಲ್ಲಿ 871 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ಇನ್ನು ಇದರ ಜೊತೆಯಲ್ಲಿ ಕಳೆದ 24 ಗಂಟೆಗಳಲ್ಲಿ 3,35,939 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಈ ಮೂಲಕ ಒಟ್ಟು ರಿಕವರಿ ಪ್ರಮಾಣ 93.60 ಪ್ರತಿಶತವಾಗಿದೆ . ದೇಶದಲ್ಲಿ ಒಟ್ಟು ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 3,83,60,710 ಆಗಿದೆ.


ಭಾರತದಲ್ಲಿ ಕೋವಿಡ್​ 19ನ ಒಟ್ಟು ಸಕ್ರಿಯ ಪ್ರಕರಣಗಳು 20,04,333 ಇವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 4.91 ಪ್ರತಿಶತವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ಮಾಹಿತಿ ನೀಡಿವೆ.


ದೇಶದಲ್ಲಿ ಈವರೆಗೆ ಒಟ್ಟು 4,93,198 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.2020ರ ಮಾರ್ಚ್​ ತಿಂಗಳಲ್ಲಿ ದೇಶದಲ್ಲಿ ಕೋವಿಡ್​ ಮೊದಲ ಸಾವು ವರದಿಯಾಗಿತ್ತು. ದೇಶದಲ್ಲಿ ದೈನಂದಿನ ಪಾಸಿಟಿವಿಟಿ ದರ 13.39 ಪ್ರತಿಶತವಾಗಿದೆ.


ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ ನೀಡಿರುವ ಮಾಹಿತಿಯ ಪ್ರಕಾರ ಶುಕ್ರವಾರದವರೆಗೆ ಒಟ್ಟು 72,57,74,705 ಸ್ಯಾಂಪಲ್​​ಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಶುಕ್ರವಾರದಂದು 17,59,434 ಸ್ಯಾಂಪಲ್​​ಗಳನ್ನು ಪರೀಕ್ಷೆ ಮಾಡಲಾಗಿದೆ.

ಇದನ್ನು ಓದಿ : Rayan Raj Sarja : ಅಪ್ಪನ ಸ್ನೇಹಕ್ಕೆ ಜೀವ ತುಂಬಿದ ಮಗ ರಾಯನ್‌ ಸರ್ಜಾ : ಮೇಘನಾ ರಾಜ್ ಸರ್ಜಾ ಶೇರ್ ಮಾಡಿದ್ರು ಸ್ಪೆಶಲ್ ಪೋಟೋ

ಇದನ್ನೂ ಓದಿ : Nagarjuna Slams Media : ಈ ಕಾರಣಕ್ಕೆ ಮಾಧ್ಯಮಗಳ ಮೇಲೆ ಕೆಂಡಾಮಂಡಲರಾದ ಸೂಪರ್​ ಸ್ಟಾರ್​ ನಾಗಾರ್ಜುನ

Coronavirus pandemic: India reports over 2.35 lakh new cases with positivity rate at 13.39%; 871 deaths

RELATED ARTICLES

Most Popular