Postpartum Depression : ಬಾಣಂತಿ ಸನ್ನಿಯಿಂದ ಬಳಲುತ್ತಿದ್ದರಾ ಬಿಎಸ್​ವೈ ಮೊಮ್ಮಗಳು ಡಾ. ಸೌಂದರ್ಯ

Postpartum Depression :ಸಂಪತ್ತಿಗೇನು ಕೊರತೆ ಇರಲಿಲ್ಲ, ಬಹುಶಃ ಕಷ್ಟವನ್ನು ನೋಡಿಯೇ ಇರಲಿಕ್ಕಿಲ್ಲ. ವಿದ್ಯಾವಂತೆ, ಕೈಯಲ್ಲೊಂದು ವೈದ್ಯ ವೃತ್ತಿ, ಚಂದದ ಸಂಸಾರ, ಮುದ್ದಾದ ಮಗು… ಇವೆಲ್ಲ ಇದ್ದರೂ ಕೂಡ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವಸಂತ ನಗರದ ಕ್ರೆಸೆಂಟ್​​​ ರಸ್ತೆಯಲ್ಲಿ ಇರುವ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 30 ವರ್ಷದ ಸೌಂದರ್ಯ ಮೃತದೇಹ ಪತ್ತೆಯಾಗಿತ್ತು.


ಡಾ. ಸೌಂದರ್ಯ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪರ ಪುತ್ರಿ ಪದ್ಮಾವತಿ ಅವರ ಮಗಳು. ಕಳೆದ ವರ್ಷ ಮಗುವಿಗೆ ಜನ್ಮ ನೀಡಿದ್ದ ಸೌಂದರ್ಯ ಸಾವಿಗೆ ನಿಖರವಾದ ಕಾರಣ ಯಾರಿಗೂ ತಿಳಿದುಬಂದಿಲ್ಲ. ಆದರೆ ಒಂದು ಮೂಲದ ಪ್ರಕಾರ ಸೌಂದರ್ಯ ಹೆರಿಗೆಯ ಬಳಿಕ ಬಾಣಂತಿ ಸನ್ನಿಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೀಗಾಗಿಯೇ ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.


ಏನಿದು ಬಾಣಂತಿ ಸನ್ನಿ..?
ಇದು ಹೆರಿಗೆಯ ಬಳಿಕ ಮಹಿಳೆಯರಲ್ಲಿ ಕಾಡುವ ಸಾಮಾನ್ಯ ಮಾನಸಿಕ ಖಿನ್ನತೆಯಾಗಿದೆ.ಹೆಚ್ಚಿನವರಲ್ಲಿ ಬಾಣಂತಿ ಸನ್ನಿ ಹೆರಿಗೆಯಾದ ಎರಡು ವಾರಗಳವರೆಗೆ ಇರುತ್ತದೆ. ಈ ಸಮಸ್ಯೆಗೆ ಒಳಗಾದವರು ಖಿನ್ನತೆಗೊಳಗಾಗುತ್ತಾರೆ. ಅವರಿಗೆ ಯಾರು ಕರೆದರೂ ಲಕ್ಷ್ಯಕ್ಕೆ ಇರುವುದಿಲ್ಲ.ಮಗು ಅತ್ತರೂ ಕಿವಿಗೆ ಹಾಕಿಕೊಳ್ಳುವುದಿಲ್ಲ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ

.
ಹೆರಿಗೆಯ ಬಳಿಕ ಮಹಿಳೆಯ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವ ಆರೋಗ್ಯ ಸಮಸ್ಯೆಯನ್ನೇ ನಾವು ಬಾಣಂತಿ ಸನ್ನಿ ಎನ್ನಬಹುದು. ಬಹುತೇಕವಾಗಿ ಇದು ಕೆಲವೇ ವಾರಗಳಲ್ಲಿ ವಾಸಿಯಾಗುತ್ತದೆ. ಆದರೆ ಇನ್ನೂ ಕೆಲವರಲ್ಲಿ ಇದು ಸ್ಕಿಜೋಫ್ರೇನಿಯಾ ಮತ್ತು ಅಫೆಕ್ಟಿವ್ ಡಿಸಾರ್ಡರ್ ಆಗಿ ಬದಲಾಗುತ್ತಾ ಹೋಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಆತ್ಮಹತ್ಯೆಯಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.
ಬಾಣಂತಿ ಸನ್ನಿ ಹೆಚ್ಚಾಗಿ ಚೊಚ್ಚಲ ಹೆರಿಗೆಯ ಸಂದರ್ಭದಲ್ಲಿ ಅಥವಾ ಇಷ್ಟವಿಲ್ಲದ ಗರ್ಭದಾರಣೆಯ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಹೊರತುಪಡಿಸಿ ಮಹಿಳೆಯು ಮೊದಲೇ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದರೆ ಅಥವಾ ಕುಟುಂಬಸ್ಥರಲ್ಲಿ ಯಾರಾದರೂ ಮಾನಸಿಕ ಕಾಯಿಲೆಯವರಾಗಿದ್ದರೆ ಅನುವಂಶೀಯವಾಗಿ ಇದು ಬರಬಹುದು. ಗರ್ಭಾವಸ್ಥೆಯ ಸಂದರ್ಭದಲ್ಲಿ ಗರ್ಭಿಣಿಯು ಆರೋಗ್ಯವನ್ನು ಕಾಪಾಡಿಕೊಳ್ಳದೇ ಇದ್ದಲ್ಲಿ, ಅನಾರೋಗ್ಯ ಪೀಡಿತ ಮಗು ಜನಿಸಿದ ಸಂದರ್ಭದಲ್ಲಿಯೂ ಬಾಣಂತಿ ಸನ್ನಿ ಕಾಡುತ್ತದೆ.


ಬಾಣಂತಿ ಸನ್ನಿಗೆ ಚಿಕಿತ್ಸೆ ಇಲ್ಲವೇ..?
ಬಾಣಂತಿ ಸನ್ನಿಗೆ ನೀವು ವೈದ್ಯರನ್ನು ಅದರಲ್ಲೂ ವಿಶೇಷವಾಗಿ ಮನೋವೈದ್ಯರನ್ನು ಭೇಟಿಯಾಗದ ಹೊರತು ಬೇರೆ ಉತ್ತಮ ಮಾರ್ಗಗಳಿಲ್ಲ. ಕುಟುಂಬಸ್ಥರಾಗಿ ನೀವು ಸನ್ನಿಯಿಂದ ಬಳಲುತ್ತಿರುವ ಬಾಣಂತಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು. ಮಗುವಿನ ಶುಶ್ರೂಷೆ ಮಾಡಲು ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕು. ಆದರೂ ಇದು ತಹಬಧಿಗೆ ಬಾರದ ಹಂತಕ್ಕೆ ತಲುಪಿದರೆ ಇಸಿಟಿ ನೀಡಬೇಕಾಗುತ್ತದೆ.

did soundarya was suffering from postpartum depression..?

ಇದನ್ನು ಓದಿ : Rayan Raj Sarja : ಅಪ್ಪನ ಸ್ನೇಹಕ್ಕೆ ಜೀವ ತುಂಬಿದ ಮಗ ರಾಯನ್‌ ಸರ್ಜಾ : ಮೇಘನಾ ರಾಜ್ ಸರ್ಜಾ ಶೇರ್ ಮಾಡಿದ್ರು ಸ್ಪೆಶಲ್ ಪೋಟೋ

ಇದನ್ನೂ ಓದಿ : Yadiyurappa grand daughter suicide : ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು

Comments are closed.