ಸೋಮವಾರ, ಏಪ್ರಿಲ್ 28, 2025
HomeCorona UpdatesCoronavirus : ದೇಶದಲ್ಲಿ ಮತ್ತೆ ಮಹಾಮಾರಿ ಸ್ಫೋಟ: ಒಂದೇ ದಿನದಲ್ಲಿ 3.47 ಲಕ್ಷ ಹೊಸ...

Coronavirus : ದೇಶದಲ್ಲಿ ಮತ್ತೆ ಮಹಾಮಾರಿ ಸ್ಫೋಟ: ಒಂದೇ ದಿನದಲ್ಲಿ 3.47 ಲಕ್ಷ ಹೊಸ ಪ್ರಕರಣ ವರದಿ

- Advertisement -

Coronavirus  :ದೇಶದಲ್ಲಿ ಕೊರೊನಾ ಮಹಾಮಾರಿ ಸ್ಫೋಟಗೊಂಡಿದೆ.ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಬರೋಬ್ಬರಿ 3,47,254 ಕೊರೊನಾ ಕೇಸುಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,51,777 ಮಂದಿ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ರಿಕವರಿ ದರ 93.69 ಪ್ರತಿಶತವಾಗಿದೆ. ಹಾಗೂ ದೇಶದಲ್ಲಿ ಒಟ್ಟು ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 3,60,58,806ಕ್ಕೆ ತಲುಪಿದೆ.


ದೇಶದಲ್ಲಿ ಪ್ರಸ್ತುತ 20,18,825 ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ದೇಶದಲ್ಲಿ ಕೊರೊನಾದಿಂದ ಮೊದಲ ಸಾವು 2020ರ ಮಾರ್ಚ್ ತಿಂಗಳಲ್ಲಿ ಸಂಭವಿಸಿತ್ತು. ಇದೀಗ ಕೊರೊನಾದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 4,88,396ಕ್ಕೆ ಏರಿಕೆ ಕಂಡಿದೆ.


ಇನ್ನು ಇತ್ತ ಓಮಿಕ್ರಾನ್​ ರೂಪಾಂತರಿಯ ಪ್ರಕರಣಗಳು 9692ಕ್ಕೆ ಏರಿಕೆ ಕಂಡಿವೆ. ಈ ಮೂಲಕ ದೇಶದಲ್ಲಿ ಓಮಿಕ್ರಾನ್​ ಪ್ರಕಣಗಳ ಸಂಖ್ಯೆ ನಿನ್ನೆಯಿಂದ 4.36 ಪ್ರತಿಶತ ಏರಿಕೆ ಕಂಡಂತಾಗಿದೆ. ಇದರ ಜೊತೆಯಲ್ಲಿ ದೇಶದಲ್ಲಿ ದೈನಂದಿನ ಕೋವಿಡ್​ ಪ್ರಕರಣಗಳ ಪಾಸಿಟಿವಿಟಿ ದರವು 17.94 ಪ್ರತಿಶತವಾಗಿದೆ.


ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದೇಶದಲ್ಲಿ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆಯು 29,722ರಷ್ಟು ಏರಿಕೆ ಕಂಡಿದೆ. ಗುರುವಾರ ದೇಶದಲ್ಲಿ 3,17,532 ಕೊರೊನಾ ಪ್ರಕರಣಗಳು ವರದಿಯಾಗಿದ್ದವು.
ಐಸಿಎಂಆರ್​ ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಈವರೆಗೆ 71,15,38,938 ಸ್ಯಾಂಪಲ್​ಗಳನ್ನು ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 19,35,912 ಸ್ಯಾಂಪಲ್​ಗಳನ್ನು ಗುರುವಾರ ಪರೀಕ್ಷೆ ಮಾಡಲಾಗಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ.

Coronavirus pandemic Updates: India adds 3.47 lakh new cases with positivity rate at 17.94%; 703 fatalities

ಇದನ್ನು ಓದಿ : T20 World Cup 2022 ವೇಳಾಪಟ್ಟಿ ಪ್ರಕಟ : ಭಾರತಕ್ಕೆ ಪಾಕಿಸ್ತಾನ ಮೊದಲ ಎದುರಾಳಿ

ಇದನ್ನೂ ಓದಿ : Siddaramaiah outrage : ಕೊರೋನಾ ಚಿಕಿತ್ಸೆ ಹೊಣೆ ಖಾಸಗಿಯವರಿಗೆ, ಸರ್ಕಾರ ನಿದ್ರೆಗೆ : ಚಾಟಿ ಬೀಸಿದ ಸಿದ್ಧರಾಮಯ್ಯ

RELATED ARTICLES

Most Popular