police corona positive : ಕೊರೋನಾ ಮೂರನೇ ಅಲೆಗೆ ನಲುಗಿದ ಖಾಕಿ ಪಡೆ : ಸಿಲಿಕಾನ್ ಸಿಟಿಯಲ್ಲಿ 1234 ಪೊಲೀಸರಿಗೆ ಸೋಂಕು

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕೊರೋನಾ ಮೂರನೇ ಅಲೆಯ ಪ್ರಭಾವ ಜೋರಾಗಿದ್ದು, ಶಾಲಾ ಮಕ್ಕಳು ಹಾಗೂ ಪೊಲೀಸರು ಹೆಚ್ಚು ಕೊರೋನಾಗೆ ತುತ್ತಾಗುತ್ತಿದ್ದಾರೆ. ಶಾಲೆಗಳಲ್ಲಿ ಆಫ್ ಲೈನ್ ತರಗತಿಗಳು ಕೊರೋನಾ ಹಂಚಲು ಸಹಕಾರಿಯಾಗುತ್ತಿದ್ದರೇ, ಪೊಲೀಸರಿಗೆ ( 1234 police corona positive )ಭದ್ರತಾ ಕಾರ್ಯವೇ ಶಾಪವಾಗುತ್ತಿದೆ.

ನಗರದಲ್ಲಿ ಮಾರುಕಟ್ಟೆ ಸೇರಿದಂತೆ ಜನನಿಬಿಡ ಸ್ಥಳದಲ್ಲಿ ಕೆಲಸ ನಿರ್ವಹಿಸುವ ಪೊಲೀಸರಿಗೆ ಹೆಚ್ಚು ಕೊರೋನಾ ಸೋಂಕು ತಗುಲುತ್ತಿದ್ದು, ನಗರದಾದ್ಯಂತ ಕಮೀಷನರ್ಬಕಮಲ್ ಪಂತ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಕೂಡ ಕೊರೋನಾಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದಾರೆ. ಇದುವರೆಗೂ ಬೆಂಗಳೂರು ಮಹಾನಗರದಲ್ಲಿ 1234 ಮಂದಿ ಪೊಲೀಸ್ ಸಿಬ್ಬಂದಿಗೆ ಕರೋನ ಸೋಂಕು ದೃಢಪಟ್ಟಿದೆ. ಈ ಪೊಲೀಸ್ ಸಿಬ್ಬಂದಿಗಳು ಕೆಲವರು ಮನೆಯಲ್ಲೇ ಐಸೋಲೇಟ್ ಆಗಿದ್ದರೇ ಇನ್ನು ಹಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಮೂರನೇ ಅಲೆಯ ಕರೋನ ಸೋಂಕಿಗೆ ಪೊಲೀಸ್ ಇಲಾಖೆಯಲ್ಲಿ ಅದೃಷ್ಟವಶಾತ್ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.‌ಎರಡು ಮತ್ತು ಒಂದನೇ ಅಲೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿ ಕೊರೋನಾಕ್ಕೆ ಪ್ರಾಣ ಕಳೆದುಕೊಂಡಿದ್ದರು.

ನಗರದಲ್ಲಿ ಈಗಾಗಲೇ ಕರೋನ ಸೋಂಕಿಗೆ ತುತ್ತಾಗಿ 189 ಮಂದಿ ಪೊಲೀಸರು ಚೇತರಿಸಿಕೊಂಡಿದ್ದಾರೆ. ಸದ್ಯ ಬೆಂಗಳೂರು ಪೊಲೀಸ್ ಸಿಬ್ಬಂದಿಯಲ್ಲಿ 1045 ಕರೋನ ಆಕ್ಟೀವ್ ಕೇಸ್ ಗಳಿವೆ. ಆಕ್ಟೀವ್ 1045 ಮಂದಿ ಪೊಲೀಸರು ಕೂಡ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಕೆಲವೇ ಕೆಲವು ಸಿಬ್ಬಂದಿ ಉಸಿರಾಟದ ಸಮಸ್ಯೆ ಕಾರಣಕ್ಕೆ ಆಸ್ಪತ್ರೆ ಮೊರೆ ಹೋಗಿದ್ದಾರೆ. ಇನ್ನು ಪೊಲೀಸ್ ಇಲಾಖೆ ಕರೋನ ಸೋಂಕಿಗೆ ತುತ್ತಾದ ಪೊಲೀಸ್ ಸಿಬ್ಬಂದಿಗೆ ರಜೆ ನೀಡಿ ಹೋಂ ಐಸೋಲೇಷನ್ ಗೆ ಸೂಚಿಸಿದೆ. ನಗರದ ಬಹುತೇಕ ಎಲ್ಲಾ ಪೊಲೀಸ್ ಠಾಣೆ ಸಿಬ್ಬಂದಿಗಳೂ ಕೊರೋನಾಕ್ಕೆ ತುತ್ತಾಗಿದ್ದು ಹಲವು ಪೊಲೀಸ್ ಠಾಣೆಯಲ್ಲಿ 15 ಕ್ಕೂ ಹೆಚ್ಚು ಸಿಬ್ಬಂದಿ ಕೊರೋನಾ ಅಲೆಯಲ್ಲಿ ಸಿಲುಕಿದ್ದಾರೆ.

ಯಾವುದೇ ಠಾಣೆಯ ಒರ್ವ ಸಿಬ್ಬಂದಿಯಲ್ಲಿ ಕರೋನ ಸೋಂಕು ದೃಢವಾದ್ರೆ ಇಡೀ ಠಾಣೆಯ ಎಲ್ಲಾ ಸಿಬ್ಬಂದಿಗೂ ಕರೋನ ಪರೀಕ್ಷೆ ಹಾಗೂ ಪೊಲೀಸ್ ಠಾಣೆಯ ಸ್ಯಾನಿಟೈಸೇಷನ್ ಕಾರ್ಯ ನಡೆಸಲಾಗುತ್ತಿದೆ. ಅಲ್ಲದೇ ಸಿಬ್ಬಂದಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ, 60 ವರ್ಷಕ್ಕೆ ಮೇಲ್ಟಟ್ಟ ಅಥವಾ ಹಿರಿಯ ಪೊಲೀಸ್ ಸಿಬ್ಬಂದಿಗಳು ಆದಷ್ಟು ಕಚೇರಿಯಲ್ಲಿ ಕಾರ್ಯ ನಿರ್ವಹಿಸಿ. ಮಹಿಳಾ ಸಿಬ್ಬಂದಿ ಹಾಗೂ ಗರ್ಭಿಣಿ, ತಾಯಂದಿರು ಅಗತ್ಯಬಿದ್ದರೇ ವರ್ಕ್ ಫ್ರಂ ಹೋಂ ಪಡೆದುಕೊಂಡು ಕಾಳಜಿ ವಹಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ : ಆದಾಯ ಬರುತ್ತಿಲ್ಲ, ಸಂಬಳಕ್ಕೂ ದುಡ್ಡಿಲ್ಲ: ಇದು ಬಿಎಂಟಿಸಿಯ ಕಣ್ಣೀರ ಕತೆ

ಇದನ್ನೂ ಓದಿ : ಆರೋಗ್ಯ ಇಲಾಖೆ, ಬಿಬಿಎಂಪಿಗೆ ಶಾಕ್ : ನಗರದ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿದೆ ರೋಗಿಗಳ ದಾಖಲಾತಿ

(Covid -19 3rd wave effect police department, 1234 police corona positive in Bangalore)

Comments are closed.