New Covid-19 cases :ಭಾರತದಲ್ಲಿ ಕೊರೊನಾ ಮೂರನೇ ಅಲೆಯ ಭಯದ ನಡುವೆಯೆ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ 2,58,089 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಪ್ರಸ್ತುತ 16,56,341 ಹೊಸ ಕೋವಿಡ್ ಪ್ರಕರಣಗಳು ಇವೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,51,740 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ (New Covid-19 cases) ಗುಣಮುಖರಾದವರ ಒಟ್ಟು ಸಂಖ್ಯೆ 3,52,37,461 ಆಗಿದೆ. ಇನ್ನು ದೇಶದಲ್ಲಿ ಓಮಿಕ್ರಾನ್ ರೂಪಾಂತರಿ ಪ್ರಕರಣಗಳ ಸಂಖ್ಯೆ 8209ಕ್ಕೆ ಏರಿಕೆ ಕಂಡಿದೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 1738 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ನಂತರದ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳದಲ್ಲಿ 1672, ರಾಜಸ್ಥಾನದಲ್ಲಿ 1276, ದೆಹಲಿಯಲ್ಲಿ 549 ಹಾಗೂ ಕರ್ನಾಟಕದಲ್ಲಿ 536 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ತಜ್ಞರ ಪ್ರಕಾರ, ಪ್ರತಿಯೊಂದು ಮಾದರಿಯ ಜೀನೋಮ್ ಅನುಕ್ರಮವನ್ನು ಕೈಗೊಳ್ಳಲು ಸಾಧ್ಯವಿಲ್ಲ ಆದರೆ ಈ ಪ್ರಸ್ತುತ ತರಂಗವು ಹೆಚ್ಚಾಗಿ ಓಮಿಕ್ರಾನ್ ರೂಪಾಂತರಿಯನ್ನು ಒಳಗೊಂಡಿದೆ ಎಂದು ತಿಳಿದುಬಂದಿದೆ.ದೈನಂದಿನ ಪ್ರಕರಣಗಳನ್ನು ನೋಡಿದಾಗ ದೆಹಲಿ ಹಾಗೂ ಮುಂಬೈನಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ ಎಂದು ತಿಳಿದುಬಂದಿದೆ. ಆದರೆ ಪಾಸಿಟಿವಿಟಿ ದರದಲ್ಲಿ ಯಾವುದೇ ಬದಲಾವಣೆಗಳು ಕಂಡುಬಾರದೇ ಇರೋದನ್ನು ನೋಡಿದರೆ ಕೊರೊನಾ ಮೂರನೇ ಅಲೆಯು ಈ ಎರಡು ನಗರಳಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅಂದಾಜಿಸಬಹುದಾಗಿದೆ. ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ 1 ವರ್ಷ ಪೂರೈಸಿದ್ದು ಇಲ್ಲಿಯವರೆಗೆ 157 ಕೋಟಿಗೂ ಅಧಿಕ ಡೋಸ್ಗಳನ್ನು ನೀಡಲಾಗಿದೆ.
ಇದನ್ನು ಓದಿ : CM Meeting : ಕೊರೋನಾ ತಡೆಗೆ ಮಾರ್ಗಸೂಚಿ : ಸಿಎಂ ಸಭೆಗೆ ತಾಂತ್ರಿಕ ಸಮಿತಿ ಶಿಫಾರಸ್ಸುಗಳ ವಿವರ ಇಲ್ಲಿದೆ
ಇದನ್ನೂ ಓದಿ : omicron and corona : ಕೊರೊನಾ ಹಾಗೂ ಓಮೈಕ್ರಾನ್ ಹೆಚ್ಚಳದ ನಡುವೆ ಹೊರಬಿತ್ತು ಸಮಾಧಾನದ ಸಂಗತಿ
ಇದನ್ನೂ ಓದಿ : ಕೊರೋನಾ ತಡೆಗೆ ಮಾರ್ಗಸೂಚಿ : ಸಿಎಂ ಸಭೆಗೆ ತಾಂತ್ರಿಕ ಸಮಿತಿ ಶಿಫಾರಸ್ಸುಗಳ ವಿವರ ಇಲ್ಲಿದೆ
( Coronavirus pandemic Updates: India logs 2.58 lakh new Covid-19 cases, 385 deaths in a day )