CM Meeting : ಕೊರೋನಾ ತಡೆಗೆ ಮಾರ್ಗಸೂಚಿ : ಸಿಎಂ ಸಭೆಗೆ ತಾಂತ್ರಿಕ ಸಮಿತಿ ಶಿಫಾರಸ್ಸುಗಳ ವಿವರ ಇಲ್ಲಿದೆ

ಬೆಂಗಳೂರು : ರಾಜ್ಯದಲ್ಲಿ ಓಮೈಕ್ರಾನ್ ಪ್ರಕರಣಗಳು 500 ಗಡಿ ದಾಟಿದ್ದರೇ, ಕೊರೋನಾ ಪ್ರಕರಣಗಳು 50 ಸಾವಿರದ ಅಂಚಿನಲ್ಲಿವೆ. ಹೀಗಾಗಿ ರಾಜ್ಯ ಸರ್ಕಾರ ಈಗಾಗಲೇ ರಾಜ್ಯದಲ್ಲಿ ನೈಟ್ ಕರ್ಪ್ಯೂ, ವೀಕೆಂಡ್ ಕರ್ಪ್ಯೂ ಹಾಗೂ ಶೇಕಡಾ 50 ರಷ್ಟು ಹಾಜರಾತಿಯ ಕಠಿಣ ನಿಯಮ ರೂಪಿಸಿದೆ. ಎರಡು ವಾರಗಳ ಕಾಲ ಜಾರಿಯಲ್ಲಿದ್ದ ಈ ನಿಯಮಗಳು ಬುಧವಾರಕ್ಕೆ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಹಾಗೂ ರಾಜ್ಯದಲ್ಲಿ ಮತ್ತಷ್ಟು ಪ್ರಕರಣಗಳು ಹೆಚ್ಚಿ ಪಾಸಿಟಿವಿಟಿ ರೇಟ್ ಏರಿಕೆಯಾಗಿರೋದರಿಂದ ಸಿಎಂ ನೇತೃತ್ವದಲ್ಲಿ ಕೊರೋನಾ ಕಾಲದಲ್ಲಿ ಕೈಗೊಳ್ಳಬೇಕಾದ ನಿಯಮಗಳ ಕುರಿತು ( Technical Committee’s recommendations ) ತುರ್ತು ಸಭೆ ಸಂಜೆ (CM Meeting) ನಡೆಯಲಿದೆ.

ಸಿಎಂ ಕರೆದಿರುವ ಈ ವರ್ಚುವಲ್ ಸಭೆಯಲ್ಲಿ, ಆರೋಗ್ಯ ಸಚಿವರು, ಪ್ರಾಥಮಿಕ,ಪ್ರೌಢಶಿಕ್ಷಣ ಹಾಗೂ ಉನ್ನತ ಶಿಕ್ಷಣ ಸಚಿವರು, ಹಿರಿಯ ಅಧಿಕಾರಿಗಳು, ಕೊವೀಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಇನ್ನು ಸಿಎಂ ನಡೆಸಲಿರುವ ಸಭೆಗೂ ( CM Meeting ) ಮುನ್ನ ತಾಂತ್ರಿಕ ಸಲಹಾ ಸಮಿತಿ ಸಭೆ ಹಿರಿಯ ವೈದ್ಯರಾದ ಡಾ.ಸುದರ್ಶನ್ ಬಲ್ಲಾಳ ಸೇರಿದಂತೆ ಹಲವು ತಜ್ಞರು ಸಭೆಯ ನೇತೃತ್ವ ವಹಿಸಿದ್ದಾರೆ. ಇನ್ನು ಈ ಸಭೆಯಲ್ಲಿ 7 ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಇನ್ನು ತಾಂತ್ರಿಕ ಸಮಿತಿ ಯಾವುದೇ ಕಠಿಣ ನಿಯಮ ಜಾರಿಗೊಳಿಸುವ ಚರ್ಚೆ ನಡೆಸಿಲ್ಲ ಎನ್ನಲಾಗಿದ್ದು, ಈಗಿರುವ ನಿಯಮಗಳನ್ನೇ ತಿಂಗಳ ಅಂತ್ಯದವರೆಗೆ ಜಾರಿಯಲ್ಲಿ ಇಡಲು ಚರ್ಚೆ ನಡೆದಿದೆ. ಅಲ್ಲದೇ ಸದ್ಯಕ್ಕೆ ರಾಜ್ಯದಲ್ಲಿ ಸೋಂಕು ಏರಿದ್ರೂ ಆಸ್ಪತ್ರೆ ದಾಖಲಾತಿ ಕಡಿಮೆ ಇದೆ. ಹೀಗಾಗಿ ಟಫ್ ರೂಲ್ಸ್ ನ ಅಗತ್ಯತೆ ಸದ್ಯಕ್ಕೆ ಇಲ್ಲ ಎಂದು ಅಭಿಪ್ರಾಯಪಟ್ಟಿರುವ ಸಲಹಾ ಸಮಿತಿ ಯಾವ ಯಾವ ಅಂಶಗಳನ್ನು ಪಟ್ಟಿ‌ಮಾಡಿದೆ ಅನ್ನೋದನ್ನು ಗಮನಿಸೋದಾದರೇ,

  1. ಒಮಿಕ್ರಾನ್ ವೈರಸ್ ಪತ್ತೆ ಮಾಡುವ ಕಿಟ್ ಒಮಿಶ್ಯೂರ್ ಖರೀದಿಸುವುದು
  2. ಮಕ್ಕಳ ಚಿಕಿತ್ಸೆ, ಆರೈಕೆ ಗೆ ಮಾರ್ಗಸೂಚಿ ಪ್ರಕಟಿಸುವುದು
  3. ಆಯುರ್-ರಕ್ಷಾ ಕಿಟ್ ಖರೀದಿ ಮಾಡುವುದು
  4. ಮಕ್ಕಳಿಗೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ ಮೀಸಲಿಡುವುದು
  5. ಮಕ್ಕಳಿಗೆ ಹೋಮ್ ಐಸೋಲೇಷನ್ ಕಿಟ್ ನಲ್ಲಿ ಯಾವ್ಯಾವ ಔಷಧ ನೀಡಬೇಕು
  6. ಆಸ್ಪತ್ರೆ ಇಂದ ಗುಣಮುಖರಾಗಿ ಡಿಸ್ಜಾರ್ಜ್ ಅಗುವವರಿಗೆ ಹೊಸ ಮಾರ್ಗಸೂಚಿ ಪ್ರಕಟಿಸುವುದು
  7. ಆರೋಗ್ಯ ಸೌಧ ಕಟ್ಟಡದಲ್ಲಿ ಕೊರೋನಾ ನಿರ್ವಹಣಾ ಘಟಕ ಸ್ಥಾಪಿಸುವುದು

ಇಷ್ಟು ವಿಚಾರಗಳನ್ನು ತಾಂತ್ರಿಕ ಸಮಿತಿ ಸಿಎಂ ಮುಂದೇ ಇಡಲು ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕೊರೊನಾ ಹಾಗೂ ಓಮೈಕ್ರಾನ್ ಹೆಚ್ಚಳದ ನಡುವೆ ಹೊರಬಿತ್ತು ಸಮಾಧಾನದ ಸಂಗತಿ

ಇದನ್ನೂ ಓದಿ :  ಕರ್ನಾಟಕದಲ್ಲಿಂದು 34047 ಹೊಸ ಕೋವಿಡ್‌ ಕೇಸ್‌ : ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್‌, ಇಲ್ಲಿದೆ ಮಾಹಿತಿ

( Here is the detail of the Technical Committee’s recommendations for the Coronation Intervention Guidelines and CM Meeting)

Comments are closed.