covaxin and covishield : ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೋವಿಡ್ ಲಸಿಕೆಗಳು ಪ್ರಮುಖ ಅಸ್ತ್ರವಾಗಿದೆ ಎಂಬ ಮಾತನ್ನು ನಾವು ತಳ್ಳಿ ಹಾಕುವಂತಿಲ್ಲ. ಕೋವಿಡ್ ಮೊದಲ ಹಾಗೂ ಎರಡನೇ ಡೋಸ್ಗಳನ್ನು ಹಾಕಿಸಲು ಕಷ್ಟಪಟ್ಟಂತೆ ಮುಂದಿನ ದಿನಗಳಲ್ಲಿ ಬೂಸ್ಟರ್ ಡೋಸ್ಗಳಿಗೆ ಕಷ್ಟ ಪಡುವ ಅಗತ್ಯವಿಲ್ಲ. ಏಕೆಂದರೆ ಕೇಂದ್ರ ಸರ್ಕಾರದ ಸಮಿತಿಯಾದ ಎಸ್ಇಸಿಯು ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳನ್ನು ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಲು ಅನುಮತಿ ನೀಡಿದೆ. ಹೀಗಾಗಿ ಶೀಘ್ರದಲ್ಲಿಯೇ ನಿಮ್ಮ ಹತ್ತಿರದ ಮೆಡಿಕಲ್ ಸ್ಟೋರ್ಗಳಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳು ಲಭ್ಯವಿರಲಿವೆ.
ಬುಧವಾರ ಸಭೆ ನಡೆಸಿದ ಎಸ್ಇಸಿಯು ತಜ್ಞರ ಜೊತೆಯಲ್ಲಿ ಚರ್ಚೆ ನಡೆಸಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಹಲವು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳೆರಡರ ಮೇಲೆಯೂ ಇರುವ ತುರ್ತು ಬಳಕೆಯನ್ನು ತೆಗೆದು ಹಾಕಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ .
ಎಸ್ಇಸಿಯ ಈ ನಿರ್ಧಾರದಿಂದಾಗಿ ಇನ್ಮುಂದೆ ಭಾರತ್ ಬಯೋಟೆಕ್ ಹಾಗೂ ಸೀರಂ ಇನ್ಸ್ಟಿಟ್ಯೂಟ್ ತಮ್ಮ ಲಸಿಕೆಗಳ ಉತ್ಪಾದನೆಯ ವೇಗಕ್ಕೆ ಚುರುಕು ಮುಟ್ಟಿಸಲೇಬೇಕುದೆ. ಆಗ ಮಾತ್ರ ಕೊರೊನಾ ಲಸಿಕೆಗಳನ್ನು ಪ್ರತಿಯೊಂದು ಆಸ್ಪತ್ರೆಗಳೂ ಹಾಗೂ ಮೆಡಿಕಲ್ ಸ್ಟೋರ್ಸ್ಗಳಿಗೆ ತಲುಪಿಸುವುದು ಸಾಧ್ಯವಾಗುತ್ತದೆ.
ಮಾರುಕಟ್ಟೆಗಳಲ್ಲಿ ಕೊರೊನಾ ಲಸಿಕೆಗಳು ಲಭ್ಯವಾದ ಬಳಿಕ ಕೋವಿನ್ ಆ್ಯಪ್ಗಳಲ್ಲಿ ಲಸಿಕೆಗೆ ನೋಂದಣಿ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಅಥವಾ ಲಸಿಕಾ ಕೇಂದ್ರಗಳಿಗೆ ತೆರಳಬೇಕು ಎಂಬುದೂ ಇರುವುದಿಲ್ಲ. ಕೇವಲ ಮೆಡಿಕಲ್ಗೆ ತೆರಳಿ ಅಲ್ಲಿಂದ ಕೊರೊನಾ ಲಸಿಕೆಯನ್ನು ಪಡೆದು ಬಳಿಕ ವೈದ್ಯರು ಅಥವಾ ನರ್ಸ್ಗಳ ಕೈನಿಂದ ಲಸಿಕೆ ಸ್ವೀಕರಿಸಬಹುದಾಗಿದೆ.
ಇನ್ನು ಇದು ಮಾತ್ರವಲ್ಲದೇ ಸಭೆಯಲ್ಲಿ ಕಳೆದ ಒಂದು ವರ್ಷದಲ್ಲಿ ಕೊರೊನಾ ಲಸಿಕೆಗಳಿಂದಾಗಿ ಉಂಟಾದ ಧನಾತ್ಮಕ ಹಾಗೂ ಋಣಾತ್ಮಕಗಳೆರಡೂ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
covaxin and covishield corona vaccines may soon be available at your local medical store
ಇದನ್ನು ಓದಿ : School Reopen ಗೆ ಖಾಸಗಿ ಶಾಲೆಗಳ ಒತ್ತಡ, ಲಸಿಕೆ ಪಡೆಯದ ಮಕ್ಕಳ ಮೇಲೆ ಪ್ರಯೋಗ : ಸರಕಾರದ ವಿರುದ್ದ ಪೋಷಕರ ಆಕ್ರೋಶ
ಇದನ್ನೂ ಓದಿ : PUC 2022 Exam : ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ