Oppo New Wireless Earphone M32 : ಒಪ್ಪೋನ ವೈಯರ್‌ಲೆಸ್‌ ಎನ್ಕೋ ಎಂ32 ಇಯರ್‌ಫೋನ್‌ ಮಾಹಿತಿ ಇಲ್ಲಿದೆ…

Oppo New Wireless Earphone M32 : ಭಾರತದಲ್ಲಿ ಒಪ್ಪೋ(Oppo)ನ ವೈಯಕ್ತಿಕ ಆಡಿಯೊ ಉತ್ಪನ್ನ ಶ್ರೇಣಿಯು ಹೆಚ್ಚಾಗಿ ಮಧ್ಯ ಶ್ರೇಣಿಯ ಮತ್ತು ಮೇಲಿನ ಮಧ್ಯ ಶ್ರೇಣಿಯ ಇಯರ್‌ಫೋನ್‌ಗಳ ಮೇಲೆ ಕೇಂದ್ರೀಕೃತವಾಗಿದೆ. ಆದಾಗ್ಯೂ, ಇತ್ತೀಚಿನ ತಿಂಗಳುಗಳಲ್ಲಿ ಬ್ರ್ಯಾಂಡ್ ಬಜೆಟ್ ಫ್ರೆಂಡ್ಲಿ (Brand Budget Friendly) ಉತ್ಪನ್ನಗಳತ್ತ ಗಮನ ಹರಿಸುತ್ತಿದೆ. ಇದು ಸಂಪರ್ಕ, ಧ್ವನಿ ಗುಣಮಟ್ಟ ಮತ್ತು ಬ್ಯಾಟರಿ ಬಾಳಿಕೆಗೆ ಬಂದಾಗ ಉತ್ತಮ ವಿಶ್ವಾಸಾರ್ಹ ಬ್ರ್ಯಾಂಡ್ ಎಂದೇ ಹೇಳಬೇಕು.

ಸೆಪ್ಟೆಂಬರ್‌ನಲ್ಲಿ ಒಪ್ಪೋ ಎನ್ಕೋ ಬಡ್ಸ್ ನಂತರ, ಕಂಪನಿಯ ಇತ್ತೀಚಿನ ಬಿಡುಗಡೆಯು ಒಪ್ಪೋ ಎನ್ಕೋ ಎಂ32 (Oppo Enco M32) ಆಗಿದೆ. ಇದು ಕೈಗೆಟುಕುವ ವೈರ್‌ಲೆಸ್ ನೆಕ್‌ಬ್ಯಾಂಡ್ (Wireless Neckband Headset) ಶೈಲಿಯ ಹೆಡ್‌ಸೆಟ್ ಆಗಿದೆ. ಭಾರತದಲ್ಲಿ ಇದರ ಬೆಲೆ ರೂ 1,799. ಆದರೆ, ಪ್ರಸ್ತುತ 1,499 ರೂ.ಗಳ ಸೀಮಿತ ಅವಧಿಯ ಆಫರ್ ಬೆಲೆಗೆ ಲಭ್ಯವಿದೆ. ಉತ್ತಮ ಬ್ಯಾಟರಿ ಬಾಳಿಕೆ, ಆರಾಮದಾಯಕ ಫಿಟ್ ಮತ್ತು ಬೆಲೆಗೆ ಯೋಗ್ಯವಾದ ಆಡಿಯೊ ಗುಣಮಟ್ಟವನ್ನು ಭರವಸೆ ನೀಡುತ್ತದೆ.

ಒಪ್ಪೋ ಎನ್ಕೋ ಎಂ32 ವಿನ್ಯಾಸಕ್ಕೆ ಬಂದಾಗ ಒಂದು ವಿಶಿಷ್ಟವಾದ ವೈರ್‌ಲೆಸ್ ನೆಕ್‌ಬ್ಯಾಂಡ್-ಶೈಲಿಯ ಹೆಡ್‌ಸೆಟ್ ಆಗಿದೆ. ಇದು ಧರಿಸಲು ಆರಾಮದಾಯಕ ಆಗಿದೆ. ಇದು ನೆಕ್‌ಬ್ಯಾಂಡ್‌ನ ಎಡ ಮಾಡ್ಯೂಲ್‌ನಲ್ಲಿ ಕೇವಲ ಒಂದು ಒಪ್ಪೋ ಲೋಗೋದೊಂದಿಗೆ ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಇದು ಡಸ್ಟ್ ಹಾಗೂ ವಾಟರ್ ರೆಸಿಸ್ಟೆಂಟ್ ಗುಣ ಹೊಂದಿದೆ.

ಇನ್ನೊಂದು ವಿಶೇಷ ಎಂದರೆ, ಎರಡು ಇಯರ್ ಬಡ್ಸ್‌ ಒಟ್ಟಿಗೆ ಸೇರಿಸುವಾಗ ಆಫ್ ಹಾಗೂ ದೂರ ಸರಿಸಿದಾಗ ಆನ್ ಆಗುತ್ತದೆ. ಇದು ‘ಸಿ’ ಟೈಪ್ 10 ವಾಟ್ ಚಾರ್ಜರ್ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದಲ್ಲಿ 28 ಗಂಟೆ ಕೆಲಸ ಮಾಡುತ್ತದೆ. ಕಂಪೆನಿ ಹೇಳಿಕೆ ಪ್ರಕಾರ, 10 ನಿಮಿಷ ಚಾರ್ಜ್ ಮಾಡಿದಲ್ಲಿ ಸತತ 20 ಗಂಟೆಗಳ ಕಾಲ ಈ ಹೆಡ್ ಸೆಟ್ ಬಳಸಬಹುದಾಗಿದೆ.
ಸೌಂಡ್ ಕ್ವಾಲಿಟಿ ಬಗ್ಗೆ ಹೇಳುವುದಾದರೆ, ಇದು ಉತ್ತಮ ಸೌಂಡ್ ಸಿಸ್ಟಮ್ ನೀಡುತ್ತದೆ. ಕಡಿಮೆ ವಾಲ್ಯೂಮ್ ಇಟ್ಟರೂ ಸಹ ಗರಿಷ್ಠ ಮಟ್ಟದಲ್ಲಿ ಕೇಳಲು ಸಾಧ್ಯವಿದೆ. ಕಾಲ್ ಕನೆಕ್ಟಿವಿಟಿ ಯೂ ಉತ್ತಮ ರೀತಿಯಲ್ಲಿದೆ.

ಉಳಿದ ಬ್ರಾಂಡ್‌ಗಳಿಗೆ ಹೋಲಿಸಿದರೆ, ಇದು ಕಡಿಮೆ ಬೆಲೆಯಲ್ಲಿ ಲಭಿಸುತ್ತದೆ. ಅಷ್ಟೇ ಅಲ್ಲದೇ, ಕಡಿಮೆ ಬೆಲೆಗೆ ಬೆಸ್ಟ್ ಫೀಚರ್ಸ್ ಅನ್ನು ಒಳಗೊಂಡಿದೆ. ಹಾಗಾಗಿ ಬಜೆಟ್ ಫ್ರೆಂಡ್ಲಿ ಇಯರ್ ಫೋನ್ ಹುಡುಕುವವರು ಖಂಡಿತವಾಗಿಯೂ ಇದನ್ನು ಖರೀದಿ ಮಾಡಬಹುದು.

ಇದನ್ನೂ ಓದಿ: Xiaomi 11i Hypercharge 5G: ಶಯೋಮಿ ಹೊಸ ಸ್ಮಾರ್ಟ್‌ಫೋನ್; 5ಜಿ, ವೇಗದ ಚಾರ್ಜಿಂಗ್ ಸೌಲಭ್ಯದ ಭರವಸೆ

(Oppo New Wireless Earphone M32)

Comments are closed.