ಬೆಂಗಳೂರು : ಕೋವಿಡ್ (Covid -19) ಸಂದರ್ಭದಲ್ಲೂ ಅಧಿಕಾರಿಗಳು ಭ್ರಷ್ಟಾಚಾರ (Corruption ) ಮಾಡೋದನ್ನು ಮರೆತಿಲ್ಲ ಅನ್ನೋದು ಕರ್ನಾಟಕದ ಪಾಲಿಗೆ ದುರ್ದೈವದ ಸಂಗತಿ. ಈ ಮಧ್ಯೆ ಕಳೆದ ಸರ್ಕಾರದ ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಎದೆಯಲ್ಲಿ ನಡುಕ ಆರಂಭವಾಗಿದ್ದು, ಕೋವಿಡ್ ಅಕ್ರಮದ ಬೆನ್ನು ಬಿದ್ದಿರುವ ಸಿದ್ಧು ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಮಧ್ಯೆ ಆರೋಗ್ಯ ಇಲಾಖೆಯಿಂದ ಅಕ್ರಮದ ಟರ್ಮ್ಸ್ ರೆಫೆರೆನ್ಸ್ ವರದಿ (The Terms of Reference Report) ಸಲ್ಲಿಕೆಯಾಗಿದೆ.

ಸರ್ಕಾರ ತನಿಖೆಗೆ ಆದೇಶಿಸುತ್ತಿದ್ದಂತೆ ಆರೋಗ್ಯ ಇಲಾಖೆಯಿಂದ ಟರ್ಮ್ಸ್ ರೆಫೆರೆನ್ಸ್ ವರದಿ ಸಲ್ಲಿಕೆಯಾಗಿದೆ. ಈ ವರದಿ ಯಲ್ಲಿ ಕೊವಿಡ್ ಟಾಪ್ 5 ಹಗರಣಗಳ ಆರೋಪದ ಕುರಿತು ಮಾಹಿತಿ ನೀಡಲಾಗಿದೆ. ಸಿದ್ಧರಾಮಯ್ಯನವರು ನಿವೃತ್ತ ಜಡ್ಜ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ಮಾಡಿದ್ದರು.
ಇದನ್ನೂ ಓದಿ : ಬೆಂಗಳೂರಲ್ಲಿ 2 ತಿಂಗಳಲ್ಲಿ 3,200 ಡೆಂಗ್ಯೂ ಪ್ರಕರಣ : ಎಚ್ಚರಿಕೆ ಕೊಟ್ಟ ಆರೋಗ್ಯ ಸಚಿವ, ಏನಿದರ ಲಕ್ಷ್ಮಣ
ಈ ಹಿನ್ನೆಲೆ ಆರೋಗ್ಯ ಇಲಾಖೆಗೆ ಟರ್ಮ್ಸ್ ರೆಫೆರೆನ್ಸ್ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿತ್ತು.ಈ ಬಗ್ಗೆ ತನಿಖೆ ಶುರುವಾಗಿದ್ದು ಈಗ ಆರೋಗ್ಯ ಇಲಾಖೆಯಿಂದ ಟರ್ಮ್ಸ್ ರೆಫೆರೆನ್ಸ್ ವರದಿ ನೀಡಿದೆ . ಈ ವರದಿಯಲ್ಲಿ ಯಾವ ಐದು ಪ್ರಮುಖ ಅಂಶಗಳ ತನಿಖೆಗೆ ಮಾಹಿತಿ ನೀಡಿದೆ ಅನ್ನೋದನ್ನು ಗಮನಿಸೋದಾದರೇ,
1. ಪಿಪಿಇ ಕಿಟ್ ಖರೀದಿ ಅವ್ಯವಹಾರದ ಬಗ್ಗೆ ಮಾಹಿತಿ
2 . ಕೊವಿಡ್ ಅವಧಿಯಲ್ಲಿನ ಔಷಧಿ ಖರೀದಿ ಕುರಿತು ವರದಿ ಸಲ್ಲಿಕೆ
3. ಟೆಸ್ಟಿಂಗ್ ಕಿಟ್ ಹಾಗೂ ಗೋಲ್ ಮಾಲ್
4 . ಆಸ್ಪತ್ರೆಯ ಬೆಡ್ ಉಪಕರಣಗಳ ಖರೀದಿ
5 . ಆಕ್ಸಿಜನ್ ಹಾಗೂ ಆಕ್ಸಿಜನ್ ಖರೀದಿ ಘಟಕಗಳ ಲೋಪದೋಷ ಹಾಗೂ ಹೆಚ್ಚುವರಿ ಉಪಕರಣಗಳ ಖರೀದಿ ವಿಚಾರದಲ್ಲಿನ ಅವ್ಯವಹಾರದ ತನಿಖೆಗೆ ವರದಿ

ಹೀಗೆ ಸವಿಸ್ತಾರವಾಗಿ ಯಾವೆಲ್ಲ ವಿಚಾರಗಳಲ್ಲಿ ಅವ್ಯವಹಾರ ನಡೆದಿದೆ ಎಂಬುದನ್ನು ಉಲ್ಲೇಖಿಸಿ ಆರೋಗ್ಯ ಇಲಾಖೆ ಟರ್ಮ್ಸ್ ಹಾಗೂ ರೆಫೆರೆನ್ಸ್ ವರದಿಯನ್ನ ನ್ಯಾಯಂಗ ಸಮಿತಿಗೆ ಸಲ್ಲಿಕೆ ಮಾಡಿದೆ. ಈ ಪ್ರಮುಖ 5 ಅಂಶಗಳ ಜೊತೆಗೆ ಇನ್ನೂ ಅನೇಕ ವರದಿಗಳನ್ನು ಸೇರಿಸಿ ಪ್ರಸ್ತಾಪ ಆರೋಗ್ಯ ಇಲಾಖೆ ಪ್ರಸ್ತಾಪ ಕಳುಹಿಸಿದೆ. ಈ ಎಲ್ಲ ವಿಚಾರಗಳು ತನಿಖೆಗೆ ಒಳಪಡ್ತಿರೋದು ಬಿಜೆಪಿ ಅವಧಿಯಲ್ಲಿ ಹಾಗೂ ಕೊರೋನಾ ಸಂದರ್ಭದಲ್ಲಿ ಅವ್ಯಹಾರ ಎಸಗಿದ ಅಧಿಕಾರಿಗಳ ಎದೆಯಲ್ಲಿ ನಡುಕ ಮೂಡಿಸಿದೆ.
ಇದನ್ನೂ ಓದಿ : ಉಚಿತ ಬಸ್ ಪ್ರಯಾಣ : ಶಕ್ತಿಯೋಜನೆಯಡಿ ಮಹಿಳೆಯರು ಸ್ಮಾರ್ಟ್ ಕಾರ್ಡ್ ಮಾಡಿಸದಿದ್ರೆ ಉಚಿತ ಪ್ರಯಾಣ ರದ್ದು
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಅರೋಗ್ಯ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಎಸಗಿದೆ ಎಂದು ಆರೋಪಿಸಿತ್ತು. ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾದ ಡಾ.ಸುಧಾಕರ್ ಮೇಲಿನ ವೈಯಕ್ತಿಕ ದ್ವೇಷವೂ ಕಾಂಗ್ರೆಸ್ ನಾಯಕರನ್ನು ಕಾಡುತ್ತಲೇ ಇತ್ತು

ಹೀಗಾಗಿ ಸ್ವತಃ ಡಾ.ಸುಧಾಕರ್ ಆರೋಗ್ಯ ಸಚಿವರಾಗಿದ್ದ ಇಲಾಖೆಯ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿತ್ತು. ಇದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆಯಲ್ಲಿ ಕೋವಿಡ್ ನಿರ್ವಹಣೆ ವೇಳೆ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರೋದು ಕೂಡ ಮೇಲ್ನೋಟಕ್ಕೆ ಸಾಬೀತಾಗಿದ್ದು ಅಧಿಕಾರಿಗಳು ಹಾಗೂ ಮಾಜಿ ಸಚಿವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
Karnataka Covid 19 Illegal Judicial Investigation fear in Ex Health Minister Dr Sudhakar And Health Department Officials