ಭಾನುವಾರ, ಜೂನ್ 15, 2025
HomeCorona UpdatesCovid booster gets nod for trial: ಇಂಟ್ರಾನಾಸಲ್​ ಲಸಿಕೆಗಳ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ...

Covid booster gets nod for trial: ಇಂಟ್ರಾನಾಸಲ್​ ಲಸಿಕೆಗಳ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ಡಿಸಿಜಿಐ ಅನುಮೋದನೆ

- Advertisement -

Covid booster gets nod for trial : ಕೊರೊನಾ ವೈರಸ್​​ನ ವಿರುದ್ಧ ದೇಶದ ಹೋರಾಟ ಮುಂದುವರಿದಿದೆ. ಕೊರೊನಾ ಎರಡು ಡೋಸ್​ ಲಸಿಕೆಗಳ ಬಳಿಕ ಇದೀಗ ಬೂಸ್ಟರ್​ ಡೋಸ್​ ಕೂಡ ಆಯ್ದ ಜನತೆಗೆ ನೀಡಲಾಗುತ್ತಿದೆ. ಈ ಎಲ್ಲದರ ನಡುವೆ ದೇಶದ ಕೋವಿಡ್​ ವಿರುದ್ಧದ ಹೋರಾಟಕ್ಕೆ ಮತ್ತೊಂದು ಮುನ್ನಡೆ ಎಂಬಂತೆ ಡ್ರಗ್​ ಕಂಟ್ರೋಲರ್​​ ಜನರಲ್​ ಆಫ್​ ಇಂಡಿಯಾ ಭಾರತ್​ ಬಯೋಟೆಕ್​ನ ಇಂಟ್ರಾನಾಸಲ್​ ಕೋವಿಡ್​ ಬೂಸ್ಟರ್​ ಡೋಸ್ ಮೂರನೇ ಹಂತದ ​​​ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ನೀಡಿದೆ . 900 ವಿಷಯಗಳ ಮೇಲೆ ಪ್ರಯೋಗಗಳನ್ನು ನಡೆಸಲಾಗುತ್ತದೆ.


ಡಿಸಿಜಿಐ ವಿಷಯ ತಜ್ಞರ ಸಮಿತಿಯು ತನ್ನ ಇಂಟ್ರಾನಾಸಲ್​ ಕೋವಿಡ್​ ಲಸಿಕೆಗಾಗಿ ಮೂರನೇ ಹಂತದ ಪರೀಕ್ಷೆಗೆ ಅನುಮತಿ ನೀಡಿದೆ. ಇದು ದೇಶದಲ್ಲಿಯೇ ಮೊದಲ ಇಂಟ್ರಾನಾಸಲ್​​ ಲಸಿಕೆಯಾಗಿದೆ. ಭಾರತ್ ಬಯೋಟೆಕ್ ಭಾರತದಲ್ಲಿ ಮೂರನೇ ಡೋಸ್‌ನ 3ನೇ ಹಂತದ ಪ್ರಯೋಗಕ್ಕಾಗಿ ಅರ್ಜಿಯನ್ನು ಸಲ್ಲಿಸಿದ ಎರಡನೇ ಕಂಪನಿಯಾಗಿದೆ. ಒಮಿಕ್ರಾನ್‌ನಂತಹ ಹೊಸ ಕೋವಿಡ್-19 ರೂಪಾಂತರಗಳಿಗೆ ಪ್ರಸರಣವನ್ನು ತಡೆಯುವ ಸಾಮರ್ಥ್ಯವನ್ನು ಇಂಟ್ರಾನಾಸಲ್ ಲಸಿಕೆಗಳು ಹೊಂದಿವೆ ಎಂದು ವರದಿಯಾಗಿದೆ.


ಭಾರತದಲ್ಲಿ ಕೋವಿಶೀಲ್ಡ್​, ಕೋವ್ಯಾಕ್ಸಿನ್​ ಹಾಗೂ ಸ್ಪುಟ್ನಿಕ್​ ವಿ ಲಸಿಕೆಗಳಿಗೆ ದೇಶದಲ್ಲಿ ಅನುಮೋದನೆ ನೀಡಲಾಗಿದೆ. ಕೋವ್ಯಾಕ್ಸಿನ್​ನ್ನು ಡಿಸಿಜಿಐ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಎಮೆರ್ಜೆನ್ಸಿ ಯೂಸ್​ ಲಿಸ್ಟಿಂಗ್​​ನಿಂದ 28 ದಿನಗಳ ಮಲ್ಟಿ ಡೋಸ್​ ವೈಲ್​ ಪಾಲಿಸಿಯಲ್ಲಿ ಬಳಕೆ ಮಾಡಲು ಅನುಮೋದನೆಯನ್ನು ಪಡೆದಿದೆ.

Bharat Biotech’s nasal Covid booster gets nod for trial in India

ಇದನ್ನು ಓದಿ : Yadiyurappa grand daughter suicide : ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು

ಇದನ್ನೂ ಓದಿ : BJP vs Siddaramaiah : ಸಿದ್ಧರಾಮಯ್ಯರನ್ನು ವಲಸಿಗರಾಮಯ್ಯ ಎಂದ ಬಿಜೆಪಿ : ಮತ್ತೆ ಶುರುವಾಯ್ತು ಟ್ವೀಟ್ ವಾರ್

RELATED ARTICLES

Most Popular