Indian family found dead near US-Canada border : ಅಮೆರಿಕ ಗಡಿಯಲ್ಲಿ ಭಾರತೀಯ ಮೂಲದ ಕುಟುಂಬ ನಿಗೂಢ ಸಾವು

Indian family found dead near US-Canada border :ಕೆನಡಾ- ಅಮೆರಿಕ ಗಡಿಯಲ್ಲಿ ಗುಜರಾತ್​ ಮೂಲದ ಒಂದೇ ಕುಟುಂಬದ ನಾಲ್ವರು ಕೊರೆಯುವ ಚಳಿಯನ್ನು ತಾಳಲಾರದೇ ಪ್ರಾಣಬಿಟ್ಟಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ತನಿಖೆ ಆರಂಭಿಸಿದ ಗುಜರಾತ್​ ಸಿಐಡಿ ಅಧಿಕಾರಿಗಳು ಮೃತರು ಸ್ಥಳೀಯ ಏಜೆಂಟರ ಸಹಾಯವನ್ನು ಪಡೆದಿದ್ದರೇ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದೆ. ಕೆನಡಾದ ಅಧಿಕಾರಿಗಳು ಈ ಕುಟುಂಬವು ಕೆಲವೇ ಸಮಯಗಳಲ್ಲಿ ಇಡೀ ದೇಶಾದ್ಯಂತ ಸ್ಥಳಾಂತರಗೊಂಡಿತ್ತು ಹಾಗೂ ಮಾನವ ಕಳ್ಳಸಾಗಣೆ ಎಂದು ಶಂಕಿಸಲಾದ ಈ ಪ್ರಕರಣದಲ್ಲಿ ಇವರನ್ನು ಯಾರೋ ಗಡಿ ಭಾಗಕ್ಕೆ ಓಡಿಸಿದ್ದಾರೆ ಎಂದು ಹೇಳಿದ್ದಾರೆ .


ಮೃತಪಟ್ಟವರು ಯಾರು..?
ಕೆನಡಾ ಹಾಗೂ ಅಮೆರಿಕ ಗಡಿಯಿಂದ ಸುಮಾರು 12 ಮೀಟರ್​ ದೂರದಲ್ಲಿರುವ ಮ್ಯಾನಿಟೋಬಾದ ಎಮರ್ಸನ್​ ಬಳಿ ವಾಸವಿದ್ದ ಒಂದೇ ಕುಟುಂಬದ 39 ವರ್ಷದ ಜಗದೀಶ್​ ಬಲದೇವ್​ಭಾಯ್​ ಪಟೇಲ್​, 37 ವರ್ಷದ ವೈಶಾಲಿ ಬೆನ್​​ ಜಗದೀಶ್​ ಕುಮಾರ್​ ಪಟೇಲ್​, 11 ವರ್ಷದ ವಿಹಾಂಗಿ ಜಗದೀಶ್​ಕುಮಾರ್​ ಪಟೇಲ್​ ಹಾಗೂ 3 ವರ್ಷದ ಧಾರ್ಮಿಕ್​​ ಜಗದೀಶ್​ ಕುಮಾರ್​ ಪಟೇಲ್​ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮ್ಯಾನಿಟೋಬಾ ರಾಯಲ್​​ ಕೆನಡಿಯನ್​​ ಮೌಂಟೆಡ್​ ಪೊಲೀಸರು ಮಾಹಿತಿ ನೀಡಿದ್ದಾರೆ.


ಮೃತರು ಗುಜರಾತ್​ನ ಕಲೂಲ್​​ನ ದಿಂಗೂಚಾ ಗ್ರಾಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಒಂದೇ ಕುಟುಂಬದ ಈ ನಾಲ್ವರು ಕೆನಡಾ ಅಮೆರಿಕ ಗಡಿಯಲ್ಲಿ ಕೊರೆಯುವ ಚಳಿಯನ್ನು ತಾಳಲಾರದೇ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ .


ಗುಜರಾತ್​ ಪೊಲೀಸ್​ ಮಹಾನಿರ್ದೇಶಕ ಆಶಿಶ್​ ಭಾಟಿಯಾ ಈ ಘಟನೆಯಲ್ಲಿ ಸ್ಥಳೀಯ ಏಜೆಂಟರ್​ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಸಿಐಡಿಯ ಮಾನವ ಕಳ್ಳಸಾಗಣೆ ವಿರೋಧಿ ಘಟಕವನ್ನು ಕೇಳಿದ್ದಾರೆ .
ಈ ಏಜೆಂಟರು ಇನ್ನೂ ಅನೇಕರನ್ನು ಕಳುಹಿಸಿದ್ದಾರೆ ಎಂಬ ವರದಿಗಳು ಲಭ್ಯವಾಗಿದ್ದರೂ ಸಹ ನಾವು ಇದನ್ನು ಇನ್ನಷ್ಟು ಪರಿಶೀಲನೆ ಮಾಡಬೇಕಾಗಿದೆ. ಏಜೆಂಟರು ಎಷ್ಟು ಜನರನ್ನು ಕಳುಹಿಸಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಹೆಚ್ಚುವರಿ ಡಿಜಿಪಿ ಅನಿಲ್​ ಪ್ರಥಮ್​ ಮಾಹಿತಿ ನೀಡಿದ್ದಾರೆ .

Indian family found dead near US-Canada border: What we know so far

ಇದನ್ನು ಓದಿ : Yadiyurappa grand daughter suicide : ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು

ಇದನ್ನೂ ಓದಿ : BJP vs Siddaramaiah : ಸಿದ್ಧರಾಮಯ್ಯರನ್ನು ವಲಸಿಗರಾಮಯ್ಯ ಎಂದ ಬಿಜೆಪಿ : ಮತ್ತೆ ಶುರುವಾಯ್ತು ಟ್ವೀಟ್ ವಾರ್

Comments are closed.