Omicron :ದೇಶದಲ್ಲಿ ಕೊರೊನಾ ಮೂರನೇ ಅಲೆಯ ಪ್ರಾರಂಭವಾಗಿದ್ದು ಪ್ರತಿ ದಿನ ವರದಿಯಾಗುತ್ತಿರುವ ಕೇಸುಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಕೊರೊನಾ ಪ್ರಕರಣದಲ್ಲಿ ಈ ರೀತಿಯ ಅತಿಯಾದ ಏರಿಕೆಗೆ ಹೊಸದಾಗಿ ಕಂಡುಬರುತ್ತಿರುವ ಓಮಿಕ್ರಾನ್ ರೂಪಾಂತರಿಯೇ ಕಾರಣವಾಗಿದೆ. ಆದರೆ ಇಲ್ಲಿಯವರೆಗೆ ಓಮಿಕ್ರಾನ್ ಸಮುದಾಯಕ್ಕೆ ಹರಡಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಡೆಲ್ಟಾ ರೂಪಾಂತರಿಯು ಎರಡನೇ ಅಲೆಗೆ ಕಾರಣವಾಗಿತ್ತು. ಇದೀಗ ಓಮಿಕ್ರಾನ್ ರೂಪಾಂತರಿಯು ಮೂರನೇ ಅಲೆಯನ್ನು ಸೃಷ್ಟಿಸುತ್ತದೆ ಎಂದು ತಜ್ಞರು (Omicron Experts issue Warning) ಹೇಳಿದ್ದಾರೆ. ಇದಕ್ಕೆ ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆಯೇ ನೈಜ ಉದಾಹರಣೆಯಾಗಿದೆ.
ಡೆಲ್ಟಾ ರೂಪಾಂತರಿಗೆ ಹೋಲಿಕೆ ಮಾಡಿದರೆ ಓಮಿಕ್ರಾನ್ ರೂಪಾಂತರಿಯು ಅತ್ಯಂತ ವೇಗವಾಗಿ ಹರಡುತ್ತಿದೆ. ಆದ್ದರಿಂದ ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ. ಕಳೆದ ಕೆಲವು ದಿನಗಳಿಂದ ಟಿಪಿಆರ್ ಹಾಗೂ ದೈನದಿಂದ ಕೋವಿಡ್ ಸಂಖ್ಯೆಯು ಮಿತಿಮೀರಿದೆ. ಹೀಗಾಗಿ ಓಮಿಕ್ರಾನ್ ರೂಪಾಂತರಿಯು ಸಮುದಾಯಕ್ಕೆ ಹರಡಿದೆ ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ. ಆದರೆ ಜನರಲ್ಲಿರುವ ರೋಗ ನಿರೋಧಕ ಶಕ್ತಿಯಿಂದಾಗಿ ಪರಿಸ್ಥಿತಿ ಇನ್ನೂ ಕೈ ಮೀರಿ ಹೋಗಿಲ್ಲ ಎಂದು ಆರೋಗ್ಯ ತಜ್ಞ ಡಾ. ಪದ್ಮನಾಭ ಶೆಣೈ ಹೇಳಿದ್ದಾರೆ.
ಓಮಿಕ್ರಾನ್ ಸೋಂಕಿನ ಲಕ್ಷಣಗಳು ನಿಮಗೆ ಸಾಮಾನ್ಯ ಜ್ವರದಂತೆ ಕಂಡುಬಂದರೂ ಸಹ ಇದನ್ನು ಸಾಮಾನ್ಯವೆಂದು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ದಿನಗಳಲ್ಲಿ ಸಾಮಾನ್ಯ ಜ್ವರಗಳಿಂದಾಗಿ ಆಸ್ಪತ್ರೆಗೆ ಬರುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇದರಲ್ಲಿ ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿಲ್ಲ. ಹೀಗಾಗಿ ಇವರಲ್ಲಿ ಎಷ್ಟು ಜನರಿಗೆ ಓಮಿಕ್ರಾನ್ ರೂಪಾಂತರಿ ಇದೆ ಎಂಬುದರ ಅರಿವಾಗೋದಿಲ್ಲ. ನಾವು ಈಗ ಕೊರೊನಾ ಮೂರನೇ ಅಲೆಯ ಪ್ರಾರಂಭಿಕ ಹಂತದಲ್ಲಿ ಇರುವ ಹಿನ್ನೆಲೆಯಲ್ಲಿ ಕೋವಿಡ್ ಲಕ್ಷಣಗಳನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಬಾರದು ಎಂದು ಡಾ. ಶೆಣೈ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ : Covid-19 danger list : ಕರಾವಳಿಗರು ಮೈ ಮರೆತ್ರೆ ಅಪಾಯ ಫಿಕ್ಸ್ : ದ.ಕ., ಉಡುಪಿಗೆ ಕೊರೊನಾ ಜೊತೆ ಓಮಿಕ್ರಾನ್ ಕಂಟಕ
ಇದನ್ನೂ ಓದಿ : Fresh COVID-19 Case : ದೇಶದಲ್ಲಿ ಕೊರೊನಾ ಮಹಾಸ್ಫೋಟ: ಒಂದೇ ದಿನ 1.17 ಲಕ್ಷ ಪ್ರಕರಣ ವರದಿ
Delta-Omicron combo could fuel third Covid wave in Kerala: Experts issue warning