Ashes Test Aus vs Eng: ಚೆಂಡು ವಿಕೆಟ್‌ಗೆ ತಾಗಿದರೂ ಹಾರದ ಬೇಲ್ಸ್! ಆಮೇಲೆ ಏನಾಯ್ತು?

ಸಿಡ್ನಿ: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್(Aus vs Eng) ನಡುವೆ ನಡೆಯುತ್ತಿರುವ ಆ್ಯಷಸ್ ಟೆಸ್ಟ್ ಸರಣಿಯ (Ashes Test Series 4rth Match) ನಾಲ್ಕನೇ ಪಂದ್ಯವು ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಕ್ರಿಕೆಟ್ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡವು 8 ವಿಕೆಟ್‌ಗಳಿಗೆ 416 ರನ್ ಗಳಿಸಿ ಮೊದಲ ಇನಿಂಗ್ಸ್‌ನಲ್ಲಿ ಡಿಕ್ಲೇರ್ ಮಾಡಿಕೊಂಡಿತ್ತು. ಎರಡನೇ ದಿನದಾಟದ ಕೊನೆಯಲ್ಲಿ ಇಂಗ್ಲೆಂಡ್ ತಂಡ ವಿಕೆಟ್ ಕಳೆದುಕೊಳ್ಳದೆ 13 ರನ್ ಗಳಿಸಿತ್ತು.

ಮೂರನೇ ದಿನದ ಆಟದ ವೇಳೆ ಭೋಜನ ವಿರಾಮದ ಬಳಿಕ ವಿಚಿತ್ರ ಪ್ರಸಂಗ ನಡೆಯಿತು. ಇಂಗ್ಲೆಂಡ್‌ನ ಬ್ಯಾಟರ್‌ಗಳಾದ ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೆಸ್ಟೊ ಉತ್ತಮವಾಗಿ ಆಡುತ್ತಿದ್ದರು. ಈ ವೇಳೆ ಕ್ಯಾಮರೂನ್ ಅವರ ಎಸೆತವೊಂದನ್ನು ಸ್ಟೋಕ್ಸ್ ಹಾಗೆಯೇ ಬಿಟ್ಟರು. ಆದರೆ ಸ್ವಿಂಗ್ ಆದ ಚೆಂಡು ನೇರವಾಗಿ ಆಫ್‌ಸ್ಟಂಪ್‌ಗೆ ಬಡಿದು ಕೀಪರ್ ಕೈಸೇರಿತು. ಅಚ್ಚರಿಯೆಂದರೆ, ಬೇಲ್ಸ್‌ ಹಾರಲೇ ಇಲ್ಲ! ಗೊಂದಲದ ನಡುವೆಯೇ ಆಸ್ಟ್ರೇಲಿಯಾ ಆಟಗಾರರು ಎಲ್‌ಬಿಡಬ್ಲ್ಯುಗೆ ಫೀಲ್ಡ್ ಅಂಪೈರ್‌ಗೆ ಮನವಿ ಮಾಡಿದರು. ಅವರು ಔಟ್ ಎಂದು ತೀರ್ಪು ನೀಡಿದರು.

Anushka Sharma : ಪತಿ ಜೊತೆ ಪತ್ನಿಯೂ ಕ್ರಿಕೆಟ್ ಪ್ಲೇಯರ್ : ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅನುಷ್ಕಾ ಶರ್ಮಾ ಹೊಸ ಸಾಹಸ

ಆದರೆ ಬೆನ್ ಸ್ಟೋಕ್ಸ್ ಮೂರನೇ ಅಂಪೈರ್‌ಗೆ ಮೇಲ್ಮನವಿ ಸಲ್ಲಿಸಿದಾಗ ನಾಟೌಟ್ ತೀರ್ಪು ನೀಡಲಾಯಿತು. ಇದು ಹಲವು ರೀತಿಯ ಚರ್ಚೆಗಳಿಗೆ ಗ್ರಾಸವಾಗಿದೆ.

‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ‘ಹಿಟ್ಟಿಂಗ್ ದಿ ಸ್ಟಂಪ್ಸ್’ ಎಂಬ ಹೊಸ ನಿಮಯವನ್ನು ಅವಿಷ್ಕಾರ ಮಾಡುವ ಅಗತ್ಯವಿದೆ. ಬೌಲರ್‌ಗಳಿಗೂ ‘ಸಮಾನ ನೀತಿ’ ರೂಪಿಸಬೇಕಾದ ಅಗತ್ಯವಿದೆ. ನಿಮ್ಮ ಅಭಿಪ್ರಾಯವೇನು ಎಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಪ್ರಶ್ನಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್‌ ಕೂಡ ಸಚಿನ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದು, ಇದು ಚರ್ಚೆಯಾಗಬೇಕಾದ ವಿಚಾರ ಎಂದು ಹೇಳಿದ್ದಾರೆ.

ಇಂಥ ಘಟನೆಯನ್ನು ಈವರೆಗೆ ನೋಡಿಲ್ಲ. ನೀವು (ಸಚಿನ್) ಹೇಳಿರುವ ವಿಷಯವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯಲ್ಲಿ ಪ್ರಸ್ತಾಪಿಸುವೆ. ಗ್ರೀನ್ ಎಸೆತವು ಗಂಟೆಗೆ 142 ಕಿ.ಮೀ. ವೇಗದಲ್ಲಿ ಸ್ಟಂಪ್‌ಗೆ ಬಡಿದಿತ್ತು. ಆದರೂ ಬೇಲ್ಸ್ ಹಾರದಿರುವುದು ಅಚ್ಚರಿ ಎಂದು ವಾರ್ನ್ ಉಲ್ಲೇಖಿಸಿದ್ದಾರೆ.

Chris Gayle : ಐಪಿಎಲ್ 2022 ಹೊರಬಿದ್ದ ಕ್ರಿಸ್ ಗೇಲ್‌ಗೆ ಶಾಕ್‌ ಕೊಟ್ಟ ವೆಸ್ಟ್ ಇಂಡೀಸ್‌

(A bizarre incident took place during Day 3 of the Ashes Test, which left the players and fans amazed)

Comments are closed.