ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಲಾರಂಭಿಸಿದೆ. ಮೂರನೆ ಅಲೆಯೋ ಎಂಬ ಭೀತಿ ಮೂಡಿಸುವಂತೆ ಪ್ರತಿನಿತ್ಯ ನೂರಾರು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹೆಸರಿನಲ್ಲಿ ಸುಲಿಗೆಯೂ ನಡೆಯಲಿದೆ. ಕರೋನಾ ಮೊದಲ ಮತ್ತು ಎರಡನೇ ಅಲೆಯ ವೇಳೆ ನಗರದ ಆಸ್ಪತ್ರೆಗಳು ಅಕ್ಷರಷಃ ಸುಲಿಗೆ ಮಾಡಿದ್ದು ಅದೇಷ್ಟೋ ಜನರು ದುಡ್ಡು ಕೊಟ್ಟು ಆಕ್ಸಿಜನ್ ಸೇರಿದಂತೆ ಇತರ ಸೌಲಭ್ಯ ಪಡೆಯಲಾಗದೇ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಭಾರಿ ಆರೋಗ್ಯ ಇಲಾಖೆ ಕಾಲ ಮೀರುವ ಮುನ್ನವೇ ಎಚ್ಚೆತ್ತುಕೊಂಡಿದ್ದು, ಖಾಸಗಿ ಆಸ್ಪತ್ರೆಗಳು ಕರೋನಾ ಚಿಕಿತ್ಸೆಯ ಹೆಸರಿನಲ್ಲಿ ನಡೆಸುವ ಸುಲಿಗೆಗೆ ಬ್ರೇಕ್ ಹಾಕಲು ಖಡಕ್ ಆದೇಶ ( Karnataka Health Department new Order) ಹೊರಡಿಸಿದೆ.
ಕೊರೋನಾ ಚಿಕಿತ್ಸೆಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ಸೋಂಕಿತರನ್ನು ತಿಂಗಳಾನುಗಟ್ಟಲೇ ಆಸ್ಪತ್ರೆಯಲ್ಲೇ ಇಟ್ಟುಕೊಂಡು ಲಕ್ಷಾಂತರ ರೂಪಾಯಿ ಬಿಲ್ ಮಾಡಿ ಪ್ರಾಣ ತೆಗೆಯುತ್ತಿದ್ದರು. ಹೀಗಾಗಿ ಈ ಸಲ ಇಂಥ ಅಧ್ವಾನಗಳಿಗೆ ಆರೋಗ್ಯ ಇಲಾಖೆ ಕಡಿವಾಣ ಹಾಕಲು ಸಿದ್ಧವಾಗಿದೆ. ಕೊರೋನಾ ರೋಗಿಗಳ ಚಿಕಿತ್ಸೆ ವೇಳೆ ಪಾಲಿಸಬೇಕಾದ ನಿಯಮಗಳ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಕೊರೋನಾ ಪಾಸಿಟಿವ್ ಬಂದು 10 ದಿನಕ್ಕೆ ಸೋಂಕಿನ ಗುಣ ಲಕ್ಷಣ ವಿಲ್ಲದಿದ್ದರೆ ಸೋಂಕಿತರನ್ನು ಡಿಸ್ಚಾರ್ಜ್ ಮಾಡಬೇಕು. ಅಲ್ಲದೇ ಸೋಂಕಿತರಿಗೆ ರೋಗದ ಲಕ್ಷಣ ಕಡಿಮೆ ಆದ್ರೆ ಡಿಸ್ಚಾರ್ಜ್ ಮಾಡಿ, ಮನೆಯಲ್ಲಿ ಹೋಂ ಕ್ವಾರಂಟೈನ್ ಮಾಡಬಹುದು ಎಂದು ಸೂಚಿಸಿದೆ.
ಅಲ್ಲದೇ ಹತ್ತು ದಿನಗಳ ಒಳಗೆ ಕೊರೋನಾ ಗುಣ ಲಕ್ಷಣಗಳು ಕಡಿಮೆಯಾದರೆ ಡಿಸ್ಚಾರ್ಜ್ ಮಾಡಿ ಮನೆಯಲ್ಲಿ ಕ್ವಾರಂಟೈನ್ ಗೆ ಕಳುಹಿಸಬಹುದು ಎಂದಿದೆ. ಗುಣ ಲಕ್ಷಣ ಇಲ್ಲದ ಸೋಂಕಿತರನ್ನು ಹತ್ತಕ್ಕಿಂತ ಅಧಿಕ ದಿನ ಆಸ್ಪತ್ರೆಯಲ್ಲಿ ಉಳಿಸಬಾರದು ಎಂದು ಆರೋಗ್ಯ ಇಲಾಖೆ ಸ್ಪಷ್ಟವಾಗಿ ಸುತ್ತೋಲೆಯಲ್ಲಿ ಹೇಳಿದ್ದು , ಇದರಿಂದ ಖಾಸಗಿ ಆಸ್ಪತ್ರೆಗಳು ವಿನಾಕಾರಣ ರೋಗಿಗಳನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡು ಹಣ ಸೆಳೆಯುವ ಪ್ರವೃತ್ತಿಗೆ ಕಡಿವಾಣ ಬೀಳಲಿದೆ.
ಇದಲ್ಲದೇ ಯಾವುದೇ ರೋಗಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂಬ ಸೂಚನೆಯನ್ನು ನೀಡಿದೆ. ನಗರದಲ್ಲಿ ನೂರಾರು ಖಾಸಗಿ ಆಸ್ಪತ್ರೆಗಳು ಕೊರೋನಾ ಚಿಕಿತ್ಸೆ ನೀಡುತ್ತಿದ್ದು, ಹಲವು ಆಸ್ಪತ್ರೆಗಳು ಕೊರೋನಾ ಪೇಶೆಂಟ್ ಗಳಿಗೆ ಚಿಕಿತ್ಸೆ ನೆಪದಲ್ಲಿ ಸುಲಿಗೆ ಮಾಡಿ ಕಳುಹಿಸಿದ್ದವು. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ಡಿ ರಂದೀಪ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ದೇಶದಲ್ಲಿ ಮತ್ತೆ 22,500 ಕೋವಿಡ್ ಹೊಸ ಪ್ರಕರಣ ವರದಿ
ಇದನ್ನೂ ಓದಿ : ಓಮಿಕ್ರಾನ್ ಆರ್ಭಟ ಮುಂಬೈನಲ್ಲಿ15 ದಿನ ಕಠಿಣ ನಿರ್ಬಂಧ, ಸಂಜೆ 5 ರಿಂದ ಬೆಳಿಗ್ಗೆ 5 ರವರೆಗೆ ಎಲ್ಲವೂ ಬಂದ್
( Discharge of patients with coronavirus symptoms: Health Department order to prevent extortion )