- Advertisement -
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವಲ್ಲೇ ರಾಜ್ಯದಲ್ಲಿ ಏಪ್ರಿಲ್ 20 ರಿಂದ ಲಾಕ್‌ಡೌನ್ ನಿಯಮಗಳಲ್ಲಿ ಕೆಲವು ಸಡಿಲಗೊಳಿಸಲಾಗಿದೆ. ಆದರೆ ಮದ್ಯ ಮಾರಾಟ ಮಳಿಗೆಗಳು ಓಪನ್ ಆಗುತ್ತೆ ಅಂತಾ ನಿರೀಕ್ಷೆಯಲ್ಲಿದ್ದ ಮದ್ಯಪ್ರಿಯರಿಗೆ ರಾಜ್ಯ ಸರಕಾರ ಶಾಕ್ ಕೊಟ್ಟಿದೆ.

ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ.ಎಸ್.ಯಡಿಯೂರಪ್ಪ ಮೇ 3ರ ವರೆಗೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲಾ ಎಂದಿದ್ದಾರೆ. ಮದ್ಯ ಮಾರಾಟದ ಕುರಿತು ಮೇ 3ರ ನಂತರವೇ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.