Dulquer Salmaan : ತಂದೆ ಮಮ್ಮುಟ್ಟಿ ಬಳಿಕ ಇದೀಗ ನಟ ದುಲ್ಕರ್ ಸಲ್ಮಾನ್ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. 35 ವರ್ಷದ ನಟ ದುಲ್ಕರ್ ಸಲ್ಮಾನ್ ತಮಗೆ ಕೋವಿಡ್ ಸೋಂಕಿನ ಸೌಮ್ಯ ಲಕ್ಷಣಗಳು ಇವೆ ಎಂದು ಹೇಳಿಕೊಂಡಿದ್ದಾರೆ. ತಂದೆ ಸೂಪರ್ ಸ್ಟಾರ್ ಮಮ್ಮುಟ್ಟಿ ಕೊರೊನಾ ಸೋಂಕಿಗೆ ಒಳಗಾದ ಕೆಲವೇ ದಿನಗಳಲ್ಲಿ ಪುತ್ರ ದುಲ್ಕರ್ ಸಲ್ಮಾನ್ ಕೋವಿಡ್ ವರದಿಯೂ ಪಾಸಿಟಿವ್ ಬಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುವ ಮೂಲಕ ದುಲ್ಕರ್ ಸಲ್ಮಾನ್ ತಮಗೆ ಕೋವಿಡ್ ಸೋಂಕು ಇರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ತಾವು ಮನೆಯಲ್ಲಿಯೇ ಪ್ರತ್ಯೇಕವಾಗಿ ಇದ್ದೇನೆ ಎಂದು ಹೇಳಿದ್ದಾರೆ.
ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ನನಗೆ ಜ್ವರದ ಲಕ್ಷಣಗಳು ಇವೆ ಎಂಬುದನ್ನು ಬಿಟ್ಟರೆ ನಾನು ಆರಾಮಾಗಿ ಇದ್ದೇನೆ. ಮನೆಯಲ್ಲಿಯೇ ಐಸೋಲೇಟ್ ಆಗಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರಿಗೆ ಯಾವುದೇ ಲಕ್ಷಣಗಳು ಕಂಡಿಬಂದಿದ್ದರೆ ದಯವಿಟ್ಟು ಐಸೋಲೇಟ್ ಆಗಿ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಮನವಿ ಮಾಡಿದ್ದಾರೆ.
ಕೆಲವೇ ದಿನಗಳ ಹಿಂದೆಯಷ್ಟೇ ಅಂದರೆ ಜನವರಿ 16ರಂದು ದುಲ್ಕರ್ ಸಲ್ಮಾನ್ ಅವರ ತಂದೆ ಮಮ್ಮುಟ್ಟಿ ಕೋವಿಡ್ 19 ಸೋಂಕಿಗೆ ಒಳಗಾಗಿದ್ದರು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ತಾವು ಕೊರೊನಾ ಸೋಂಕಿಗೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದರು. 70 ವರ್ಷದ ಮಮ್ಮುಟ್ಟಿ ತಮ್ಮ ಮುಂಬರುವ ಸಿನಿಮಾ ಸಿಬಿಐ 5ನಲ್ಲಿ ಶೂಟಿಂಗ್ನಲ್ಲಿದ್ದ ವೇಳೆಯಲ್ಲಿ ಸೋಂಕಿಗೆ ಒಳಗಾಗಿದ್ದಾರೆ.
ಇತ್ತ ಸ್ಟ್ಯಾಂಡ್ಅಪ್ ಕಮಿಡಿಯನ್ ಹಾಗೂ ನಟ ವೀರ್ ದಾಸ್ ಕೊರೊನಾ ಪರೀಕ್ಷೆಯ ನೆಗೆಟಿವ್ ವರದಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 42 ವರ್ಷದ ನಟ ತಮ್ಮ ಆರೋಗ್ಯದ ಈ ಸುಧಾರಣೆಯನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ ಹಾಗೂ ಜನರ ಬಳಿಕ ಕೋವಿಡ್ನ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ.
Dulquer Salmaan tests positive for coronavirus after father Mammootty
ಇದನ್ನು ಓದಿ : T20 World Cup 2022 ವೇಳಾಪಟ್ಟಿ ಪ್ರಕಟ : ಭಾರತಕ್ಕೆ ಪಾಕಿಸ್ತಾನ ಮೊದಲ ಎದುರಾಳಿ
ಇದನ್ನೂ ಓದಿ : Siddaramaiah outrage : ಕೊರೋನಾ ಚಿಕಿತ್ಸೆ ಹೊಣೆ ಖಾಸಗಿಯವರಿಗೆ, ಸರ್ಕಾರ ನಿದ್ರೆಗೆ : ಚಾಟಿ ಬೀಸಿದ ಸಿದ್ಧರಾಮಯ್ಯ