Hyderabad City of Pearls: ಹೈದರಾಬಾದ್‌ಗೆ ಮುತ್ತಿನ ನಗರಿ ಎಂಬ ಹೆಸರು ಬಂದಿದ್ದೇಗೆ?

ಆಭರಣ(Ornaments)ಗಳ ವಿಷಯಕ್ಕೆ ಬಂದಾಗ, ಮುತ್ತು(Pearls)ಗಳು ಚಿನ್ನ ಹಾಗೂ ಬೆಳ್ಳಿಯಂತೆ ವಿಶೇಷ ಸ್ಥಾನ ಪಡೆದುಕೊಂಡಿದೆ. ನೋಡಲಷ್ಟೇ ಅಲ್ಲ, ಧರಿಸಿದರೆ ವಿಶೇಷ ಅಲಂಕಾರವನ್ನು ಸೇರಿಸುತ್ತವೆ ಈ ಮುತ್ತಿನ ಆಭರಣಗಳು. ಬೆಲೆಯೂ ಚಿನ್ನಕ್ಕಿಂತ ಅಗ್ಗವಾಗಿದೆ.
ಭಾರತದ ಹೈದರಾಬಾದ್ ಮುತ್ತು(Hyderabad Pearls)ಗಳು ವಿಶ್ವದೆಲ್ಲೆಡೆ ಖ್ಯಾತಿ ಪಡೆದಿದೆ. ಇದು ಆಂಧ್ರಪ್ರದೇಶದ ಸಿಟಿ ಆಗಿದ್ದು ಸಮುದ್ರದಿಂದ 300 ಕಿಮೀ ದೂರದಲ್ಲಿದೆ. ಇಲ್ಲಿ ಅಪ್ಪಟ ಪರಿಶುದ್ಧ ಮುತ್ತುಗಳು ಲಭಿಸುತ್ತದೆ. ಹಾಗಾಗಿಯೇ ಹೈದರಾಬಾದ್ ಅನ್ನು “ಮುತ್ತಿನ ನಗರಿ ಅಥವಾ ಪರ್ಲ್ ಸಿಟಿ” (Hyderabad City of Pearls
) ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ ಹೈದರಾಬಾದ್ ಬಿರಿಯಾನಿಗೆ (Hyderabad Biriyani) ಕೂಡ ಹೆಸರುವಾಸಿ ಆಗಿದೆ.

ಇತಿಹಾಸ ಏನು ಹೇಳುತ್ತೆ?

ನಿಜಾಮರು ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಒಲವು ಹೊಂದಿದ್ದರು. ಅವರು ಪ್ರಯಾಣಿಸಿದ ಪ್ರತಿಯೊಂದು ದೇಶದ ಕರಕುಶಲತೆಯನ್ನು ಅವರು ಪರಿಶೋಧಿಸಿದರು. ಹೀಗೆ ಅವರ ಒಂದು ಆವಿಷ್ಕಾರವೆಂದರೆ ಮುತ್ತುಗಳು. ಇವುಗಳನ್ನು ಅವರು ತಮ್ಮ ಕುಟುಂಬದ ಮಹಿಳೆಯರಿಗೆ ಉಡುಗೊರೆಯಾಗಿ ನೀಡುತ್ತಿದ್ದರು. ಅವರು ತಮ್ಮ ಬೇಗಂ-ಜಾನ್‌ಗಳಿಗೆ ಪ್ರೀತಿಯ ನೆನಪಿಗೆ ಮುತ್ತುಗಳನ್ನೇ ನೀಡುತ್ತಿದ್ದರು.

ಮುತ್ತುಗಳಿಗೆ ಬೇಡಿಕೆ ಹೆಚ್ಚಾದಂತೆ, ಪ್ರಪಂಚದಾದ್ಯಂತದ ವ್ಯಾಪಾರಿಗಳು, ಮುಖ್ಯವಾಗಿ ಗಲ್ಫ್, ಈ ರತ್ನಗಳನ್ನು ವ್ಯಾಪಾರ ಮಾಡಲು ನಗರಕ್ಕೆ ಬರಲು ಪ್ರಾರಂಭಿಸಿದರು. ಹೀಗಾಗಿಯೇ ಹೈದರಾಬಾದ್‌ನಲ್ಲಿ ಮುತ್ತುಗಳು ಮನೆಮಾತಾಗಿವೆ.

ಪ್ರಸ್ತುತ, ಶ್ರೀಮಂತ ನವಾಬರ ನಗರಕ್ಕೆ ದ್ಯೋತಕವಾಗಿ ನಿಂತಿರುವ ಮುತ್ತಿನ ಆಭರಣಗಳಲ್ಲೂ ನಿರ್ದಿಷ್ಟ ವಿನ್ಯಾಸಗಳಿವೆ. ಉದಾಹರಣೆಗೆ – ‘ಸತ್ಲದ’ ಏಳು ತಂತಿಗಳ ಹಾರ ಮತ್ತು ‘ಪಾಂಚಲದ’ ಐದು ಪದರಗಳ ಹಾರಗಳು ಬಹಳ ಪ್ರಸಿದ್ಧಿ ಪಡೆದಿವೆ.

ಹೈದರಾಬಾದಿನ ಹೊರವಲಯದಲ್ಲಿರುವ ಚಂದಪೇಟ್ ಗ್ರಾಮವು ಹಲವು ವರ್ಷಗಳಿಂದ ಮುತ್ತುಗಳನ್ನು ಕೊರೆಯುವುದರಲ್ಲಿ ತೊಡಗಿದೆ. ನಂತರ ಅವುಗಳನ್ನು ಬಿಳುಪುಗೊಳಿಸಿ, ಬಿಸಿಲಲ್ಲಿರಿಸಿ, ತೊಳೆದು ಮತ್ತು ಅಗತ್ಯವಿರುವ ಆಕಾರ ಮತ್ತು ಗಾತ್ರಕ್ಕೆ ಅನುಗುಣವಾಗಿ ಕತ್ತರಿಸಲಾಗುತ್ತದೆ. ಇದೆಲ್ಲದಕ್ಕೂ ಮತ್ತು ಹೆಚ್ಚಿನದಕ್ಕೂ ಹೈದರಾಬಾದ್ ಕೇಂದ್ರವಾಗಿದೆ. ಕ್ಲಾಸಿಕ್ ಬಿಳಿ ಮುತ್ತುಗಳು ಹೆಚ್ಚು ಜನಪ್ರಿಯವಾಗಿದ್ದು, ಹೈದರಾಬಾದ ನಗರದಲ್ಲಿ ಹೆಸರುವಾಸಿಯಾಗಿದೆ. ಆದರೆ ಕಪ್ಪು ಮತ್ತು ಗುಲಾಬಿ ಮುತ್ತುಗಳು ಅಪರೂಪವಾಗಿದ್ದು, ದುಬಾರಿಯಾಗಿದೆ.

ಹೈದರಾಬಾದ್‌ನಲ್ಲಿ ಮುತ್ತು ಖರೀದಿಸಲು ಬೆಸ್ಟ್ ಜಾಗ ಯಾವುದು?

  1. ಕೋಟಿ ಸುಲ್ತಾನ್ ಬಜಾರ್/ರೆಸಿಡೆನ್ಸಿ ಮಾರುಕಟ್ಟೆ ಹೈದರಾಬಾದ್‌ನ ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದಾದ ಈ ಸ್ಥಳವು ಮುತ್ತಿನ ಬಳೆಗಳು, ಸರಗಳು, ನೆಕ್ಲೇಸ್‌ಗಳು ಮತ್ತು ಕಿವಿಯೋಲೆಗಳಿಗೆ ಹೆಸರುವಾಸಿಯಾಗಿದೆ.
    ಸಮಯ: ಬೆಳಗ್ಗೆ10:00 – ಸಂಜೆ 6:00
  2. ಲಾಡ್ ಬಝರ್ ಅಥವಾ ಚೂಡಿ ಬಝರ್
    ಇದು ಮುತ್ತಿನ ಬಳೆಗಳಿಗೆಂದೇ ಹೇಳಿ ಮಾಡಿಸಿದ ಮಾರ್ಕೆಟ್ ಆಗಿದೆ.
    ಸಮಯ: ಬೆಳಗ್ಗೆ 11-ರಾತ್ರಿ 11
  3. ನಂಪಲ್ಲಿ
    ಇದು ಶಾಪಿಂಗ್ ಪ್ರಿಯರ ನೆಚ್ಚಿನ ತಾಣವು ಹೌದು. ಇಲ್ಲಿ ಡ್ರೆಸ್, ಜ್ಯುಯಲರಿ, ಫುಟ್ ವೇರ್ ಹೀಗೆ ಎಲ್ಲವೂ ಸಿಗುತ್ತದೆ. ಇದು ಬಶೀರ್ ಭಾಗ್ ನಿಂದ 1 ಕಿಮಿ ದೂರದಲ್ಲಿದೆ.

ಇದನ್ನೂ ಓದಿ: The Pink City: ಜೈಪುರ ಭಾರತದ ಪಿಂಕ್ ಸಿಟಿ ಜೈಪುರದ ಬಗ್ಗೆ ಕೇಳಿದ್ದೀರಾ? ಇಲ್ಲಿನ ಪ್ರತಿ ಕಟ್ಟಡಕ್ಕೂ ಇದೆ ಒಂದು ಕಥೆ

(Hyderabad is the Pearl City of India)

Comments are closed.