Face mask compulsory: ಚೀನಾದಲ್ಲಿ ಕೊರೊನಾ ಆರ್ಭಟ : ಬೆಂಗಳೂರಲ್ಲಿ ಮಾಸ್ಕ್ ಕಡ್ಡಾಯಕ್ಕೆ ಚಿಂತನೆ

ಬೆಂಗಳೂರು: (Face mask compulsory) ನೆರೆಯ ಚೀನಾ ದೇಶದಲ್ಲಿ ಇದೀಗ ಮತ್ತೆ ಕೊರೋನಾ ಸೊಂಕು ಹೆಚ್ಚಾಗಿದೆ. ಕೊರೋನಾದಿಂದ ಸಾವುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದೇಶದಾದ್ಯಂತ ಕೊರೋನಾ ಸೋಂಕು ಕಡಿಮೆಯಾಗಿತ್ತು ಆದರೆ ಇದೀಗ ಮತ್ತೆ ಸೊಂಕು ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ಮಾಸ್ಕ್‌ ಕಡ್ಡಾಯ ಮಾಡಲು ಬಿಬಿಎಂಪಿ ಚಿಂತನೆಗಳನ್ನು ನಡೆಸುತ್ತಿದೆ.

ಹೊರದೇಶಗಳಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ಮಾಸ್ಕ್ ಕಡ್ಡಾಯ(Face mask compulsory)ಗೊಳಿಸಲು ಬಿಬಿಎಂಪಿ ಮುಂದಾಗಿದ್ದು, ಈಗಾಗಲೇ ಈ ಬಗ್ಗೆ ಕೋವಿಡ್‌ ಸಲಹಾ ಸಮಿತಿಗೆ ಬಿಬಿಎಂಪಿ ಮನವಿ ಸಲ್ಲಿಸಿದೆ. ಇನ್ನೂ ಕ್ರಿಸ್‌ ಮಸ್‌ ಹಾಗೂ ಹೊಸ ವರ್ಷ ಸಮೀಪದಲ್ಲೇ ಇರುವ ಕಾರಣ ಹೊರದೇಶಗಳಿಂದ ವಿದೇಶಿಗರು ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೇಟಿ ನೀಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೊರೋನಾ ಸೊಂಕು ಹರಡುವ ಸಾಧ್ಯತೆಗಳು ಇವೆ. ಹೀಗಾಗಿ ಮಾರ್ಕೆಟ್, ಮಾಲ್, ಥಿಯೇಟರ್‌, ಪಾರ್ಕ್, ಮೆಟ್ರೋ, ಬಸ್, ವಿಮಾನಯಾನ ಸೇರಿದಂತೆ ಬಹುತೇಕ ಜಾಗದಲ್ಲಿ ಮಾಸ್ಕ್ ಕಡ್ಡಾಯ ಮಾಡಬೇಕೆಂಬ ನಿಲುವನ್ನು ಬಿಬಿಎಂಪಿ ವ್ಯಕ್ತಪಡಿಸಿದೆ.

ಚೀನಾದಲ್ಲಿ ಕೋವಿಡ್‌ ಪ್ರಕರಣಗಳ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಾಗುವ ಆರೋಗ್ಯ ಬಿಕ್ಕಟ್ಟನ್ನು ತಪ್ಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ದೇಶದಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ಪರಿಶೀಲನೆ ನಡೆಸುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವಿಯ ಅವರು ದೆಹಲಿಯಲ್ಲಿ ತಜ್ಞರ ತಂಡದೊಂದಿಗೆ ಸಭೆ ನಡೆಸಿದ್ದು, ಬೆಂಗಳೂರಿನಲ್ಲಿ ಮತ್ತೆ ಮಾಸ್ಕ್‌ ಕಡ್ಡಾಯವಾಗುವ ಸಾಧ್ಯತೆಗಳು ನೂರರಷ್ಟಿವೆ.

ಇದನ್ನೂ ಓದಿ : China Covid Explosion : ಇದು ಥರ್ಮೋನ್ಯೂಕ್ಲಿಯರ್‌ ಬ್ಯಾಡ್‌ನ ಆರಂಭವೇ; ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಕೊಟ್ಟ 10 ಎಚ್ಚರಿಕೆಗಳೇನು..

ಇದನ್ನೂ ಓದಿ : Corona in China : ಚೀನಾದಲ್ಲಿ ಕೊರೊನಾ ಆರ್ಭಟ : ಶವಗಳಿಂದಾಗಿ ಸ್ಮಶಾನಗಳು ಭರ್ತಿ !

(Face mask compulsory) Corona infection has increased again in neighboring China. The number of deaths due to Corona continues to increase. The corona infection was reduced across the country but now the infection is on the rise again. Therefore, as a precautionary measure, BBMP is thinking of making masks mandatory in Bangalore.

Comments are closed.