ಮಂಗಳೂರು : ರಾಜ್ಯದಲ್ಲಿ ಕೊರೊನಾ ರೂಪಾಂತರ ಹೊಸ ತಳಿ ಓಮಿಕ್ರಾನ್ ಅಟ್ಟಹಾಸ ಮುಂದುವರಿದಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ದಿನ ಓಮಿಕ್ರಾನ್ ಸ್ಪೋಟ ಸಂಭವಿಸಿದ್ದು, ಎರಡು ಕಾಲೇಜುಗಳ ಬರೋಬ್ಬರಿ ಐದು ವಿದ್ಯಾರ್ಥಿಗಳಿಗೆ ಓಮಿಕ್ರಾನ್ ಸೋಂಕು (Omicron Mangalore) ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 2 ಕಾಲೇಜುಗಳಲ್ಲಿನ 5 ವಿದ್ಯಾರ್ಥಿಗಳಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಒಂದು ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಹಾಗೂ ಮತ್ತೊಂದು ಕಾಲೇಜಿನ ಓರ್ವ ವಿದ್ಯಾರ್ಥಿಗೆ ಓಮಿಕ್ರಾನ್ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತ ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಾಲೇಜುಗಳ ಪೈಕಿ ಒಟ್ಟು 23 ವಿದ್ಯಾರ್ಥಿಗಳ ಮಾದರಿಯನ್ನು ಓಮಿಕ್ರಾನ್ ಟೆಸ್ಟ್‌ಗೆ ಕಳುಹಿಸಲಾಗಿತ್ತು. ಈ ಪೈಕಿ ಬಂಟ್ವಾಳದ ಕುರ್ನಾಡು ನವೋದಯ ವಸತಿ ಶಾಲೆಯ 14 ವಿದ್ಯಾರ್ಥಿಗಳ ಪೈಕಿ ನಾಲ್ಕು ವಿದ್ಯಾರ್ಥಿಗಳಿಗೆ ಓಮಿಕ್ರಾನ್ ದೃಢಪಟ್ಟಿದ್ರೆ, ಇನ್ನು ಮಂಗಳೂರಿನ ಶ್ರೀನಿವಾಸ ನರ್ಸಿಂಗ್ ಕಾಲೇಜಿನ 19 ವಿದ್ಯಾರ್ಥಿಗಳ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್‌ಗೆ ಕಳುಹಿಸಲಾಗಿದ್ದು, ಈ ಪೈಕಿ ಕೇರಳ ಮೂಲದ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿದೆ. ವಸತಿ ಶಾಲೆಯ ವಿದ್ಯಾರ್ಥಿಗಳಿಗೆ 18 ವರ್ಷ ತುಂಬದ ಹಿನ್ನೆಲೆಯಲ್ಲಿ ಲಸಿಕೆಯನ್ನು ಹಾಕಿಸಿರಲಿಲ್ಲ. ಎಲ್ಲಾ ಓಮಿಕ್ರಾನ್ ಸೋಂಕಿತರರು ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿಯನ್ನು ನೀಡಿದೆ. ಅಲ್ಲದೇ ಆರೋಗ್ಯ ಇಲಾಖೆ ನಿಗಾ ಇರಿಸಿದೆ.
ಕರಾವಳಿ ಭಾಗಕ್ಕೆ ಓಮಿಕ್ರಾನ್ ಕಾಲಿಟ್ಟಿರುವುದು ಸಹಜವಾಗಿಯೇ ಆತಂಕವನ್ನು ಮೂಡಿಸಿದೆ. ಕೊರೊನಾ ಮೊದಲ ಹಾಗೂ ಎರಡು ಅಲೆಯಲ್ಲಿಯೂ ಸಾಕಷ್ಟು ಸಾವುನೋವುಗಳು ಸಂಭವಿಸಿದ್ದು, ಇದೀಗ ಓಮಿಕ್ರಾನ್ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲೀಗ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಸೂಚನೆಯನ್ನು ನೀಡಿದೆ.
Two cluster outbreaks of COVID have been reported from two educational institutions in Dakshina Kannada today:
— Dr Sudhakar K (@mla_sudhakar) December 18, 2021
Cluster 1: 14 cases (of which 4 are Omicron)
Cluster 2: 19 cases (1 is Omicron)
A traveller from UK has also tested positive for #Omicron@BSBommai#Omicronindia
ಇದನ್ನೂ ಓದಿ : Work From Office: ವರ್ಕ್ ಫ್ರಂ ಹೋಂ ಮುಂದುವರೆಯಬೇಕು; ಆಫೀಸಿಗೆ ಬರೋದು ಬೇಡ ಅಂತಿದೆ ಸಮೀಕ್ಷೆ
ಇದನ್ನೂ ಓದಿ : Pfizer vaccine : ಫೈಜರ್ ಲಸಿಕೆಯ ಮೂರು ಡೋಸ್ ಸ್ವೀಕರಿಸಿದ್ದ ವ್ಯಕ್ತಿಯಲ್ಲೂ ಓಮಿಕ್ರಾನ್ ಪತ್ತೆ
(Five New Omicron Cases confirmed in Dakshina Kannada Coronavirus Covid19 Omicron Mangalore Karnataka)