Work From Home Continue : ವರ್ಕ್ ಫ್ರಂ ಹೋಂ ಮುಂದುವರೆಯಬೇಕು; ಆಫೀಸಿಗೆ ಬರೋದು ಬೇಡ ಅಂತಿದೆ ಸಮೀಕ್ಷೆ

ಕೊವಿಡ್ 19 ಇಡೀ ಜಗತ್ತನ್ನೇ ಬದಲಿಸಿಬಿಟ್ಟಿದೆ. ಅದರಲ್ಲೂ ಕೆಲಸದ ಮತ್ತು ವಿದ್ಯಾಭ್ಯಾಸದ ಗತಿಯೇ ಬದಲಾಗಿಬಿಟ್ಟಿದೆ. ಮೊದಲೋ ಆಫೀಸಿಗೆ ಹೋಗಿ ಕೆಲಸ ಮಾಡಬೇಕಿತ್ತು.  ಆದರೆ ಈಗ ಬಹುತೇಕ ರಂಗಗಳಲ್ಲಿ ಈ ಸ್ಥಿತಿ ಬದಲಾಗಿದೆ. ಮನೆಯಲ್ಲೇ ಕುಳಿತು ಕೆಲಸ ಮಾಡುವ ಅವಕಾಶ ಹಲವು ಬಗೆಯ ಉದ್ಯಮಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ದೊರೆತಿದೆ. ಸಂವಹನದ ಕೊರತೆ, ಇಂಟರ್‌ನೆಟ್ ಸಮಸ್ಯೆ ಸೇರಿದಂತೆ ಏನೇ ಸಮಸ್ಯೆಗಳಿದ್ದರೂ ಸಹ ಮನೆಯಿಂದಲೇ ಕೆಲಸ ಮಾಡುವುದು (Work From Home) ಉದ್ಯೋಗಿಗಳ ಪಾಲಿಗೆ ವರದಾಯವಾಗಿಯೂ ಪರಿಣಮಿಸಿದೆ. ಹೊರಗೆ ಕೊವಿಡ್, ಊರು ಬಿಟ್ಟು ಮರಳಿ ಬೆಂಗಳೂರಿಗೆ ಹೋಗಬೇಕು, ಮನೆಯಲ್ಲಿ ಈಗಾಗಲೇ ಒಂದುಮಟ್ಟದ ವ್ಯವಸ್ಥೆಯಾಗಿದೆ, ಇನ್ನು ಮತ್ತೆ ಬೆಂಗಳೂರಿಗೆ ಹೋಗುವುದೆಂದರೆ ಥತ್ ಎಂಬ ತಲೆನೋವು ಹಲವರಿಗೆ. ಅಂತವರಿಗಾಗಿ ಶುಭಸುದ್ದಿಯೊಂದು ಹೊರಬಿದ್ದಿದ್ದು, ವಾರದ ಐದು ದಿನ ಮತ್ತೆ ಕಚೇರಿಗೇ (Work From Home Continue ) ಹೋಗಿ ಕೆಲಸ ಮಾಡುವ ಪರಿಸ್ಥಿತಿ ಬರುವ ಸನ್ನಿವೇಶ ಕಡಿಮೆಯಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಜಗತ್ತಿನ 25 ದೇಶಗಳಲ್ಲಿ ನಡೆಸಲಾದ ಸಮೀಕ್ಷೆಯೆ ಈ ಫಲಿತಾಂಶವನ್ನು ನೀಡಿದೆ. ಭವಿಷ್ಯದಲ್ಲಿಯೂ ಈಗಿನಂತೆಯೇ ಮನೆಯಿಂದಲೇ ಕೆಲಸ ಮಾಡುತ್ತಿರುವುದು ಅಥವಾ ವರ್ಕ್ ಫ್ರಂ ಹೋಂ ಮುಂದುವರೆಸುವುದು ಕ್ಷೇಮ ಎಂದು ಈ ದೇಶಗಳ ಕಂಪನಿಗಳು ಅಭಿಪ್ರಾಯಪಟ್ಟಿವೆ. ಉದ್ಯೋಗಿಗಳು ಮತ್ತು ಮ್ಯಾನೇಜರ್​ಗಳ ಕಾರ್ಯಕ್ಷಮತೆ ಮತ್ತು ಯೋಗಕ್ಷೇಮಕ್ಕೆ ವರ್ಕ್ ಫ್ರಂ ಹೋಂ ಯೋಗ್ಯವಾದುದು ಎಂದು OECD ಸಮೀಕ್ಷೆ ತಿಳಿಸಿದೆ. ವಾರಕ್ಕೆ ಒಂದು ದಿನ ಉದ್ಯೋಗಿಗಳ ಜೊತೆ ಟೆಲಿಕಾಲಿಂಗ್ ಸಂಪರ್ಕ ಇಟ್ಟುಕೊಳ್ಳುವ ಮೂಲಕ ಉತ್ತಮವಾಗಿ ಕೆಲಸ ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಉದ್ಯೋಗಿಗಳಿಗೆ ಯಾವುದೇ ರೀತಿಯಲ್ಲೂ ಇಂಟರ್‌ನೆಟ್ ಸಮಸ್ಯೆ ಉಂಟಾಗಬಾರದು. ವರ್ಕ್ ಫ್ರಂ ಹೋಂ ನಡೆಸುವುದರಿಂದ ಉದ್ಯೋಗಿಗಳ ಕಾರ್ಯತತ್ಪರತೆಯೂ ಹೆಚ್ಚುತ್ತದೆ. ಉದ್ಯೋಗಿಯು ತಮ್ಮ ಕುಟುಂಬದ ಜೊತೆ ಹೆಚ್ಚಿನ ಕಾಲ ಕಳೆಯುವುದರಿಂದ ಉದ್ಯೋಗಿ ಹೆಚ್ಚು ತೃಪ್ತಿಕರವಾಗಿ ಕೆಲಸ ಮಾಡಬಲ್ಲ ಎಂದು ಸಮೀಕ್ಷೆಯಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನೂ ಒಂದು ಪ್ರಮುಖ ಅಂಶವೆಂದರೆ ಉದ್ಯೋಗಿಗಳು ತಮ್ಮ ಮನೆಗಳಿಂದಲೆ ಕೆಲಸ ಮಾಡುವುದರಿಂದ ಕೆಲಸದ ಉತ್ಪಾದಕತೆಗೆ ಹಾನಿಯಾದ ರೀತಿಯಲ್ಲಿ ಉದ್ಯೋಗಿಗಳನ್ನು ಕಂಪನಿಯು ರಕ್ಷಿಸಬೇಕು ಎಂದು ಸಹ ತಿಳಿಸಲಾಗಿದೆ.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

(Work from Home will be Continue dont have to Return to Office in future says survey)

Comments are closed.