ಸೋಮವಾರ, ಏಪ್ರಿಲ್ 28, 2025
HomeCorona UpdatesFourth Wave COVID India : ಕೋವಿಡ್‌ ವೈರಸ್‌ ಸೋಂಕು ದಿಢೀರ್‌ ಹೆಚ್ಚಳ : ಕರ್ನಾಟಕ...

Fourth Wave COVID India : ಕೋವಿಡ್‌ ವೈರಸ್‌ ಸೋಂಕು ದಿಢೀರ್‌ ಹೆಚ್ಚಳ : ಕರ್ನಾಟಕ ಸೇರಿ 5 ರಾಜ್ಯಗಳಿಗೆ ಕೇಂದ್ರದ ವಾರ್ನಿಂಗ್‌

- Advertisement -

ನವದೆಹಲಿ : ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ಭಾರತದ 5 ರಾಜ್ಯಗಳಲ್ಲಿ ಕೋವಿಡ್‌ ವೈರಸ್‌ ಸೋಂಕಿನ (COVID-19) ಆರ್ಭಟ ಹೆಚ್ಚಾಗಿದ್ದು, ನಾಲ್ಕನೇ ಅಲೆಯ ಭೀತಿ (Fourth Wave COVID India) ಎದುರಾಗಿದೆ. ಕಳೆದ ವಾರ ಭಾರತದಲ್ಲಿ ಸುಮಾರು 25,000 ಪ್ರಕರಣಗಳನ್ನು ದಾಖಲಾಗಿತ್ತು. ಇದು ಕಳೆದ 3 ತಿಂಗಳಲ್ಲಿ ದಾಖಲಾದ ಅತೀ ಹೆಚ್ಚು ಕೋವಿಡ್‌ ಪ್ರಕರಣವಾಗಿದೆ. ಅಲ್ಲದೇ ಪಾಸಿಟಿವಿಟಿ ದರ ಕೂಡ ಏರಿಕೆಯನ್ನು ಕಂಡಿದ್ದು ಸದ್ಯ ದೇಶದಲ್ಲಿ ಪಾಸಿಟಿವಿಟಿ ದರ 1.62 ಕ್ಕೆ ಏರಿಕೆ ಕಂಡಿದೆ. ಅದ್ರಲ್ಲೂ ಕೋವಿಡ್‌ ವೈರಸ್‌ ಸೋಂಕು ಹೆಚ್ಚಳವಾಗಿರುವ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ದೆಹಲಿ ರಾಜ್ಯಗಳಲ್ಲಿ ಕೇಂದ್ರ ಸರಕಾರ ಕೋವಿಡ್‌ ವೈರಸ್‌ ಸೋಂಕು ತಡೆಗೆ ಕ್ರಮಕೈಗೊಳ್ಳುವಂತೆ ಸೂಚನೆಯನ್ನು ನೀಡಿದೆ.

Fourth Wave COVID India : COVID-19 ಪ್ರಕರಣ ಹೆಚ್ಚಿರುವ ರಾಜ್ಯಗಳ ಪಟ್ಟಿ

ಮಹಾರಾಷ್ಟ್ರ

ಕಳೆದ ಮೂರು ಅಲೆಗಳಲ್ಲಿ ಕೋವಿಡ್‌ ವೈರಸ್‌ ಸೋಂಕಿಗೆ ಅತೀ ಹೆಚ್ಚು ತತ್ತರಿಸಿದ್ದ ಮಹಾರಾಷ್ಟ್ರದಲ್ಲೀಗ ನಾಲ್ಕನೇ ಅಲೆಯ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಭಾನುವಾರ ಮುಂಬೈನಲ್ಲಿ 961 ಸೇರಿದಂತೆ 1,494 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಮತ್ತು ಸೋಂಕಿನಿಂದ ಒಂದು ಸಾವು ಸಂಭವಿಸಿದೆ, ಸೋಂಕಿತರ ಸಂಖ್ಯೆಯನ್ನು 78,93,197 ಕ್ಕೆ ಮತ್ತು 1,47,866 ಕ್ಕೆ ತಲುಪಿದೆ. ಸತತ ನಾಲ್ಕು ದಿನಗಳಿಂದಲೂಮಹಾರಾಷ್ಟ್ರದಲ್ಲಿ 1,000 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಹೆಚ್ಚುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸರ್ಕಾರವು ನಾಗರಿಕರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಪ್ರದೀಪ್ ವ್ಯಾಸ್ ಅವರು ಎಲ್ಲಾ ಜಿಲ್ಲಾ ಅಧಿಕಾರಿಗಳಿಗೆ ಪತ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಸೇರಿದಂತೆ ಹಲವು ಆದೇಶಗಳನ್ನು ನೀಡಿದ್ದಾರೆ. ರೈಲುಗಳು, ಬಸ್ಸುಗಳು, ಚಿತ್ರಮಂದಿರಗಳು, ಸಭಾಂಗಣಗಳು, ಕಚೇರಿಗಳು, ಆಸ್ಪತ್ರೆಗಳು, ಕಾಲೇಜುಗಳು, ಶಾಲೆಗಳು ಮುಂತಾದ ಮುಚ್ಚಿದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಕೇರಳ

ಕೇರಳದಲ್ಲಿ ಮತ್ತೆ ಕೋವಿಡ್‌ ಅಲೆಯ ಭೀತಿ ಎದುರಾಗಿದೆ. ಕೇರಳದಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ಹೆಚ್ಚುತ್ತಿವೆ. ಕೇರಳದಲ್ಲಿ ದೈನಂದಿನ ಪಾಸಿಟಿವಿಟಿ ಸಂಖ್ಯೆಯು 1,500 ದಾಟಿ 1,544 ಕ್ಕೆ ತಲುಪಿದೆ. ಆದರೆ ನಾಲ್ಕು ಸಾವುಗಳು ಸಂಭವಿಸಿವೆ. ತಿಂಗಳ ಆರಂಭದಲ್ಲಿ ನಿತ್ಯವೂ 1,370, 1,278 ಮತ್ತು 1,465 ರಷ್ಟು ಪ್ರಕರಣ ದಾಖಲಾಗುತ್ತಿತ್ತು. ಆದ್ರೀಗ ಸಂಖ್ಯೆ ಒಂದೂವರೆ ಸಾವಿರದ ಗಡಿ ದಾಟಿದೆ.

ಕರ್ನಾಟಕ

ಕರ್ನಾಟಕದಲ್ಲಿ ನಿನ್ನೆ 301 ಹೊಸ COVID-19 ಸೋಂಕು ಹಾಗೂ ಒಂದು ಸಾವಿನ ಪ್ರಕರಣ ವರದಿಯಾಗಿದೆ. ಹೊಸ ಪ್ರಕರಣಗಳಿಂದಾಗಿ ರಾಜ್ಯದಲ್ಲಿ ಪಾಸಿಟಿವಿಟಿ ದರವು 39,53,359 ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 291, ಮೈಸೂರಿನಲ್ಲಿ ಮೂರು ಮತ್ತು ದಕ್ಷಿಣ ಕನ್ನಡದಲ್ಲಿ ಇಬ್ಬರು ಸೋಂಕಿಗೆ ತುತ್ತಾಗಿದ್ದಾರೆ.

ತಮಿಳುನಾಡು

ತಮಿಳುನಾಡಿನಲ್ಲಿ ರಾಜ್ಯದಲ್ಲಿ 107 ಕೋವಿಡ್-19 (COVID-19) ಪ್ರಕರಣಗಳು ಕಂಡುಬಂದಿವೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಕುರಿತು ತಮಿಳುನಾಡು ಆರೋಗ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಒಮಿಕ್ರಾನ್ ಕೋವಿಡ್ ರೂಪಾಂತರದ ಬಿಎ.4 ಮತ್ತು ಬಿಎ.5 ಉಪ ವೇರಿಯಂಟ್‌ಗಳನ್ನು ತಮಿಳುನಾಡು ಸಹ ವರದಿ ಮಾಡಿದೆ ಎಂದು ರಾಜ್ಯ ಆರೋಗ್ಯ ಸಚಿವ ಎಂಎ ಸುಬ್ರಮಣಿಯನ್ ಹೇಳಿದ್ದಾರೆ. ನಾಲ್ಕು ಮಾದರಿಗಳಲ್ಲಿ ಬಿಎ.4 ಪತ್ತೆಯಾಗಿದ್ದರೆ, ಎಂಟು ಮಾದರಿಗಳಲ್ಲಿ ಬಿಎ.5 ಪತ್ತೆಯಾಗಿದೆ ಎಂದು ಎಂಎ ಸುಬ್ರಮಣಿಯನ್ ಹೇಳಿದ್ದಾರೆ.

ದೆಹಲಿ

ದೆಹಲಿಯಲ್ಲಿ ಭಾನುವಾರ 343 ಹೊಸ ಕೋವಿಡ್-19 ಪಾಸಿಟಿವಿಟಿ ದರವು ಶೇಕಡಾ 1.91 ರಷ್ಟು ಏರಿಕೆಯಾಗಿದೆ. ಸದ್ಯ ರಾಷ್ಟ್ರ ರಾಜಧಾನಿಯ COVID-19 ಪ್ರಕರಣಗಳ ಸಂಖ್ಯೆ 19,08,730 ಕ್ಕೆ ಏರಿಕೆಯಾಗಿದೆ. ಅಲ್ಲದೇ ಸಾವಿನ ಸಂಖ್ಯೆ 26,212ಕ್ಕೆ ಏರಿಕೆ ಕಂಡಿದೆ. ರಾಜಧಾನಿಯಲ್ಲಿ ಶನಿವಾರ 405 ಹೊಸ COVID-19 ಪ್ರಕರಣಗಳನ್ನು 2.07 ಶೇಕಡಾ ಸಕಾರಾತ್ಮಕ ದರದೊಂದಿಗೆ ದಾಖಲಿಸಿದೆ.

ಭಾರತದಲ್ಲಿ ಕೋವಿಡ್‌ ವೈರಸ್‌ ಸೋಂಕು ಹೆಚ್ಚಳವಾದ ಬೆನ್ನಲ್ಲೇ ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಿದೆ. ಅದ್ರಲ್ಲೂ ಕೋವಿಡ್‌ ಸೋಂಕು ದಿಢೀರ್‌ ಏರಿಕೆಯನ್ನು ಕಂಡಿರುವ ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಕೋವಿಡ್‌ ಸೊಂಕಿನ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಣೆಯನ್ನು ನೀಡಿದ್ದಾರೆ.

ಇದನ್ನೂ ಓದಿ : covid 19 cases : ರಾಜ್ಯ ರಾಜಧಾನಿಯಲ್ಲಿ ಹೆಚ್ಚಿದ ಕೋವಿಡ್​ ಆತಂಕ : ಫೇಸ್​ ಮಾಸ್ಕ್​ ಕಡ್ಡಾಯ

ಇದನ್ನೂ ಓದಿ : kerala girl commits suicide : ಅತಿಯಾದ ಮೊಬೈಲ್​ ಚಟದಿಂದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

Fourth Wave COVID India Karnataka Kerala Maharashtra Delhi Tamil Nadu warning central Government

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular