Laptop Charging Tips: ನಿಮ್ಮ ಲಾಪ್‌ಟಾಪ್‌ ಅನ್ನು ಫಾಸ್ಟ್‌ ಆಗಿ ಚಾರ್ಜ್‌ ಮಾಡಬೇಕಾ? ಈ ಟಿಪ್ಸ್‌ ಪಾಲಿಸಿ

ಫೋನ್‌(Phone) ಅಥವಾ ಲ್ಯಾಪ್‌ಟಾಪ್‌(Laptop) ಅನ್ನು ಅದರ ಒರಿಜಿನಲ್‌ ಅಡಾಪ್ಟರ್‌ಗಿಂತ ಮತ್ತೊಂದು ಫೋನ್‌ ಅಥವಾ ಲ್ಯಾಪ್‌ಟಾಪ್‌ನ USB ಪೋರ್ಟ್‌ಗೆ ಲಿಂಕ್‌ ಮಾಡಿದಾಗ, ಹೆಚ್ಚಿನ ಬಳಕೆದಾರರ ಗಮನಕ್ಕೆ ಬರುವುದೇನೆಂದರೆ ಅದು ನಿಧಾನವಾಗಿ ಚಾರ್ಜ್‌(Slow Charging) ಆಗುತ್ತಿದೆ ಎಂಬುದು. ಹೀಗಾಗುವುದಕ್ಕೆ ಕಾರಣ ಚಾರ್ಜರ್‌ ಬೇರೆಯಾಗಿರುವುದು. ಲ್ಯಾಪ್‌ಟಾಪ್‌(Laptop Charging Tips) ವೇಗವಾಗಿ ಚಾರ್ಜ್(Fast Charge) ಆಗುವುದು ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗಿಬಿಡುತ್ತದೆ. ಅದಕ್ಕೆ ಚಾರ್ಜರ್‌ಅನ್ನು ಹೊರತುಪಡಿಸಿ ಚಾರ್ಜಿಂಗ್‌ ದಕ್ಷತೆಯ ಮೇಲೆ ಪ್ರಭಾವ ಬೀರುವ ಹಲವಾರು ಇತರ ಅಂಶಗಳಿವೆ.

ನಿಮ್ಮ ಲ್ಯಾಪ್‌ಟಾಪ್ ಅನ್ನು ತ್ವರಿತವಾಗಿ ಚಾರ್ಜ್‌(Laptop Charging Tips) ಮಾಡಲು ಈ ಕೆಳಗಿನ ಅಂಶಗಳನ್ನು ಗಮನಿಸಿ.

ರೂಟರ್‌ ಸಂಪರ್ಕವನ್ನು ನಿಷ್ಕ್ರಿಯಗೊಳಿಸಿ :

ಫೋನ್‌ ನಲ್ಲಿ ಏರೋಪ್ಲೇನ್‌ ಮೋಡ್‌ ಅನ್ನು ಹೊಂದಿಸುವುದರಿಂದ ಚಾರ್ಜಿಂಗ್‌ ಪ್ರಕ್ರಿಯೆಯನ್ನು ವೇಗಗೊಳಿಸಬಹುದು. ಅದೇ ರೀತಿ ಲ್ಯಾಪ್‌ಟಾಪ್‌ನಲ್ಲಿ ಸಹ ಹಾಗೆ ಮಾಡಬಹುದು. ಲ್ಯಾಪ್‌ಟಾಪ್‌ ಅನ್ನು ಚಾರ್ಜ್‌ ಮಾಡಲು ನೀವು ಅದನ್ನು ವಿದ್ಯುತ್‌ ಸಂಪರ್ಕ ಕಲ್ಪಿಸಿದಾಗ ಫ್ಲೈಟ್‌ಮೋಡ್‌ ವೈ–ಫೈ, ಬ್ಲೂಟೂತ್‌ ಮತ್ತು ನೆಟ್‌ವರ್ಕ್‌ ಸಂಪರ್ಕಗಳನ್ನು ಸ್ಥಗಿತಗೊಳಿಸುತ್ತದೆ. ಇದರಿಂದ ಚಾರ್ಜಿಂಗ್ ಪ್ರಕ್ರಿಯೆಯಲ್ಲಿ ನಿಮ್ಮ ಲ್ಯಾಪ್‌ಟಾಪ್‌ ಹೆಚ್ಚು ಪವರ್‌ ಬಳಸದಂತೆ ತಡೆಯುತ್ತದೆ.

ಲ್ಯಾಪ್‌ಟಾಪ್‌ ಅನ್ನು ಸಂಪೂರ್ಣವಾಗಿ ಬಂದು ಮಾಡಿ :

ನಿಮ್ಮ ಬ್ಯಾಟರಿಯ ಜೀವಿತಾವಧಿಯನ್ನು ಹೆಚ್ಚಿಸುವ ಅತ್ಯತ್ತುಮ ವಿಧಾನವೆಂದರೆ ಅದನ್ನು ಸಂಪೂರ್ಣವಾಗಿ ಬಂದು ಮಾಡುವುದು. ಲ್ಯಾಪ್‌ಟಾಪ್‌ ನ್ನು ಸಂಪೂರ್ಣವಾಗಿ ಬಂದು ಮಾಡುವುದರಿಂದ ಕಡಿಮೆ ಪ್ರಮಾಣದ ಬ್ಯಾಟರಿಯನ್ನು ಬಳಸಿ ಸರಿಯಾಗಿ ಚಾರ್ಜ್‌ ಆಗಲು ಸಹಾಯ ಮಾಡುತ್ತದೆ. ಆದರೆ ಕೆಲಸದ ಮಧ್ಯದಲ್ಲಿ ಹೀಗೆ ಮಾಡುವುದು ಅನಾನುಕೂಲಕರ ಎಂದು ನಿಮಗೆ ಅನಿಸಿದರೆ ನಿಮ್ಮ ಲ್ಯಾಪ್‌ಟಾಪ್‌ನ ಸ್ಕ್ರೀನ್‌ ಬಂದ್‌ ಮಾಡಿ.

ಲ್ಯಾಪ್‌ಟಾಪ್‌ಗೆ ಸೇರಿದ ಮುಖ್ಯ ಪವರ್‌ ಅಡಾಪ್ಟರ್‌ಅನ್ನೇ ಬಳಸಿ :

ಅಡಾಪ್ಟರ್‌ಗಳ ವಿನ್ಯಾಸದಲ್ಲಿ ವ್ಯತ್ಯಾಸಗಳಿಂದಾಗಿ ಸಂಕೀರ್ಣವಾದ ಚಾರ್ಜಿಂಗ್‌ ಕಾರ್ಯಕ್ಷಮತೆಯ ವ್ಯಾತ್ಯಾಸಗಳನ್ನು ಹೊಂದಿವೆ. ಯಾವಾಗ ಸೇಮ್‌ ಪ್ಲಗ್‌ ಔಟ್ಲೆಟ್‌ ಅನ್ನು ಬಳಸುವಾಗ ಒರಿಜಿನಲ್‌ ಅಡಾಪ್ಟರ್‌ ಯಾವಾಗಲೂ ಇತರ ಹೊಂದಾಣಿಕೆಯಾಘುವ ಚಾರ್ಜರ್‌ ಗಳಿಗಿಂತ ವೇಗವಾಗಿ ಚಾರ್ಜ್‌ ಮಾಡಬಲ್ಲದು ಎಂಬುದನ್ನು ನೆನಪಿಡಿ.

ಲ್ಯಾಪ್‌ಟಾಪ್‌ ಅನ್ನು ಕೂಲ್‌ ಮಾಡಿ :

ಹೊರಗಿನ ತಾಪಮಾನವವು ಲ್ಯಾಪ್‌ಟಾಪ್‌ನ ಬ್ಯಾಟರಿಯ ಮೇಲೆ ಪರಿಣಾಮ ಬೀರುತ್ತದೆ. ಹೊರಗೆ ಬಿಸಿಯಾದಾಗ, ಅದರ ದಕ್ಷತೆಯು ಕಡಿಮೆಯಾಗುತ್ತದೆ ಮತ್ತು ಹಾಗೇ ಬಿಟ್ಟರೆ ಹಾಳುಗುವ ಸಾಧ್ಯತೆ ಹೆಚ್ಚು. ಪರಿಣಾಮವಾಗಿ ಲ್ಯಾಪ್‌ಟಾಪ್‌ಗಳನ್ನು ತಂಪಾದ ವಾತಾವರಣದಲ್ಲಿ ಇರಿಸಬೇಕು. ಜನರು ತಮ್ಮ ಲ್ಯಾಪ್‌ಟಾಪ್‌ ತುಂಬಾ ಬಿಸಿಯಾದಾಗ ಸಣ್ಣ USB ಫ್ಯಾನ್‌ ಅನ್ನು ಸೇರಿಸುತ್ತಾರೆ. ನೆನಪಿಡಿ ಚಾರ್ಜ್‌ ಮಾಡುವಾಗ USB ಫ್ಯಾನ್‌ ಅಳವಡಿಸಬೇಡಿ.

ಬ್ಯಾಟರಿಯ ಆರೋಗ್ಯ ಕಾಪಾಡಿ :

ಉತ್ತಮವಾಗಿ ನಿರ್ವಹಿಸಲ್ಪಟ್ಟ ಬ್ಯಾಟರಿ ಮಾತ್ರ ಸರಿಯಾದ ಚಾರ್ಜಿಂಗ್‌ ಮಾಡಬಲ್ಲದು. ನೀವು ಕೆಲವು ಮೂಲಭೂತ ನಿರ್ವಹಣೆ ಸಲಹೆಗಳನ್ನು ಅನುಸರಿಸಿದರೆ, ನಿಮ್ಮ ಬ್ಯಾಟರಿ ಹೆಚ್ಚು ಕಾಲ ಉಳಿಯುತ್ತದೆ. ಎಕ್ಸಪರ್ಟ್‌ ಗಳು ಸುಮಾರು 80% ಗೆ ಚಾರ್ಜ್‌ ಮಾಡಲು ಶಿಫಾರಸು ಮಾಡುತ್ತಾರೆ. ತಿಂಗಳಿಗೊಮ್ಮೆ ಅದನ್ನು ಝೀರೋ ಮಾಡಿ ನಂತರ ಮತ್ತೆ 100% ಗೆ ರೀಚಾರ್ಜ್‌ ಮಾಡಲು ಅವಕಾಶ ಮಾಡಿಕೊಡುತ್ತಾರೆ. ಇದರಿಂದ ಎಲೆಕ್ಟ್ರಾನ್‌ಗಳನ್ನು ಹರಿಯುವಂತೆ ಮಾಡುವುದರ ಮೂಲಕ ಬ್ಯಾಟರಿ ಬಾಳಿಕೆ ಬರುವಂತೆ ನೋಡಿಕೊಳ್ಳುತ್ತಾರೆ.

ಇದನ್ನೂ ಓದಿ:Travel Tips: ವಿದೇಶಕ್ಕೆ ಹೊರಟಿದ್ದೀರಾ ? ಹಾಗಾದರೆ ನಿಮ್ಮ ಪಾಸ್‌ಪೋರ್ಟ್‌ನ ರಕ್ಷಣೆ ಹೀಗೆ ಮಾಡಿ

ಇದನ್ನೂ ಓದಿ : Top 5 Bikes : ಭಾರತದ ಟಾಪ್‌ 5 ಗರಿಷ್ಠ ಮೈಲೇಜ್‌ ಕೊಡುವ ಬೈಕ್‌ಗಳಿವು!

(Laptop Charging Tips charge your laptop faster than usual)

Comments are closed.