ಹಾಸನ : ಗ್ರೀನ್ ಝೋನ್‌ನಲ್ಲಿದ್ದ ಮಲೆನಾಡಿನ ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕು ವಕ್ಕರಿಸಿ ಜನ ಭಯಭೀತರಾಗಿದ್ದಾರೆ. ಆದ್ರೆ ಇತ್ತ ಕ್ವಾರೆಂಟೈನ್‌ನಲ್ಲಿರುವ ಜನ ಮಾತ್ರ ಟಿಕ್‌ಟಾಕ್, ಡ್ಯಾನ್ಸ್ ಮಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಮಹಿಳೆಯೋರ್ವರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಂಬೈನಲ್ಲಿ ನೆಲೆಸಿದ್ದ ಹಾಸನ ಮೂಲದವನ್ನು ಜಿಲ್ಲಾಡಳಿತ ತವರಿಗೆ ಕರೆಯಿಸಿಕೊಂಡಿತ್ತು. ಮುಂಬೈನಿಂದ ಬಂದಿದ್ದವರನ್ನು ಚನ್ನರಾಯಪಟ್ಟಣ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಜನ ಟಿಕ್‌ಟಾಕ್ ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.
ಕರ್ನಾಟಕಕ್ಕೆ ಕರೆಸುಕೊಳ್ಳುವಂತೆ ಗೋಗರೆದ ಮಹಿಳೆ ಈಗ ಟಿಕ್‌ಟಾಕ್‌ನಲ್ಲಿ ಬ್ಯುಸಿ !
ಲಾಕ್‌ಡೌನ್‌ನಿಂದ ಮಹಾರಾಷ್ಟ್ರದಲ್ಲೇ ಸಿಲುಕಿಕೊಂಡಿದ್ದ ಮಹಿಳೆ ತನ್ನನ್ನು ಕರ್ನಾಟಕಕ್ಕೆ ಕರೆಯಿಸಿಕೊಳ್ಳುವಂತೆ ಬೇಡಿಕೆ ಇಟ್ಟಿದ್ದಳು. ಇಂದು ಅದೇ ಮಹಿಳೆ ಕ್ವಾರೆಂಟೈನ್‌ನಲ್ಲಿ ಸಾಮಾಜಿಕ ಅಂತರ ಕಾಪಾಡದೆ ಟಿಕ್‌ಟಾಕ್ ಹಾಗು ಡ್ಯಾನ್ಸ್ ಮಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಮೊಜಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರೆಂಟೈನ್ ಮಾಡಲಾಗಿದ್ದ 9 ಜನರಿಗೆ ಕೊರೊನಾ ಕಾಣಿಸಿಕೊಂಡಿದ್ದರು, ಮಹಿಳೆ ಬೇಜವಾಬ್ದಾರಿ ರೀತಿಯಲ್ಲಿ ವರ್ತಿಸಿದ್ದಾರೆ.