ಕರ್ನಾಟಕಕ್ಕೆ ಮತ್ತೆ ಕೊರೊನಾ ಭಯ : ಆರೋಗ್ಯ ಸಚಿವ ಡಾ.ಸುಧಾಕರ್‌ಗೆ ಕೊರೊನಾ ಸೋಂಕು ದೃಢ

ಬೆಂಗಳೂರು : ಹೋದೆಯಾ ಪಿಶಾಚಿ ಅಂದ್ರೇ ಬಂದೇ ಗವಾಕ್ಷಿಲೀ ಎಂಬಂತೆ ಕೊರೋನಾ ಮಹಾಮಾರಿಯ ಪ್ರಮಾಣ ಸದ್ದಿಲ್ಲದೇ ಏರಿಕೆಯಾಗ್ತಿದೆ. ಈ ಮಧ್ಯೆ ಬೆಂಗಳೂರಿನಲ್ಲಿ ಪ್ರತಿನಿತ್ಯ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈಗ ರಾಜ್ಯದ ಆರೋಗ್ಯ ಸಚಿವ ಡಾ.ಸುಧಾಕರ್ ( Dr Sudhakar Confirm Corona Positive) ಗೆ ಮತ್ತೊಮ್ಮೆ ಕೊರೋನಾ (Corona Positive)ಕಾಣಿಸಿಕೊಂಡಿದ್ದು, ಈ ಸಂಗತಿಯನ್ನು ಸ್ವತಃ ಸುಧಾಕರ್ ಖಚಿತಪಡಿಸಿದ್ದಾರೆ. ಆ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಭಯ ಎದುರಾಗಿದೆ.

ಮೂರು ಅಲೆಗಳ ಸಂದರ್ಭದಲ್ಲಿಯೂ ಕೋವಿಡ್ ಸೋಂಕಿನಿಂದ (Corona Positive) ಪಾರಾಗಿದ್ದ ನಾನು ಈಗ ಸೋಂಕಿಗೆ ತುತ್ತಾಗಿದ್ದೇನೆ. ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಆಗಿರೋದು ಪತ್ತೆಯಾಗಿದೆ. ಕೆಲ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಹೋಮ್ ಐಷೋಲೇಶನ್ ನಲ್ಲಿ ಇದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ಇನ್ನೂ ಕೊರೋನಾ ಆತಂಕ ಸಂಪೂರ್ಣ ದೂರವಾಗಿಲ್ಲ. ಇಳಿಮುಖವಾಗಿದ್ದ ಕೊರೋನಾ ಪ್ರಕರಣಗಳ ಸಂಖ್ಯೆ ನಿಧಾನಕ್ಕೆ ಏರಿಕೆಯಾಗುತ್ತಿದ್ದು, 100 ಕ್ಕಿಂತ ಕಡಿಮೆಯಾಗಿದ್ದ ಪ್ರಕರಣ ಈಗ ನಿಧಾನಕ್ಕೆ 300 ಸನಿಹಕ್ಕೆ ಬಂದಿದೆ. ಈ ಮಧ್ಯೆ ಜನರು ಈಗಾಗಲೇ ಸಂಪೂರ್ಣ ಮಾಸ್ಕ್ ತೊರೆದಿದ್ದು ಸಾಮಾಜಿಕ ಅಂತರವೂ ಇಲ್ಲದೇ ಓಡಾಡುತ್ತಿದ್ದಾರೆ. ಇನ್ನೂ ಕರ್ನಾಟಕದಲ್ಲಿ ಸದ್ಯ ಕೊರೋನಾ ಸ್ಥಿತಿ ಹೇಗಿದೆ ಅನ್ನೋದನ್ನು ನೋಡೋದಾದರೇ, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 297 ಮಂದಿಗೆ ಕೊರೋನಾ ವೈರಸ್ ತಗುಲಿದೆ. ಇದೇ ಅವಧಿಯಲ್ಲಿ ಒಟ್ಟು 187 ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಆದರೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ 1.47 ರಷ್ಟಾಗಿದೆ. ಅಲ್ಲದೇ ರಾಜ್ಯದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 2024 ಕ್ಕೆ ಏರಿಕೆಯಾಗಿದೆ‌. ಈಗಾಗಲೇ ಶಾಲಾ ಕಾಲೇಜುಗಳು ಆಫ್ ಲೈನ್ ತರಗತಿಗಳನ್ನು ಅರಂಭಿಸಿದ್ದು, ಮದುವೆ, ಜಾತ್ರೆ ಸೇರಿದಂತೆ ಎಲ್ಲ ರೀತಿಯ ಧಾರ್ಮಿಕ ಚಟುವಟಿಕೆ ಗಳು ಸಂಪೂರ್ಣವಾಗಿ ಜನರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಲು ಆರಂಭಿಸಿದೆ. ಹೀಗಾಗಿ ನಿಧಾನಕ್ಕೆ ರಾಜ್ಯದಾದ್ಯಂತ ಕೊರೋನಾ ಪಾಸಿಟಿವಿಟಿ ದರದಲ್ಲಿ ಏರಿಕೆಯಾಗಲಾರಂಭಿಸಿದೆ.

ಅದರಲ್ಲೂ ರಾಜಕೀಯ ಪಕ್ಷಗಳು ಮೊದಲಿಗಿಂತ ಹೆಚ್ಚು ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾರಂಭಿಸಿದ್ದು, ಎಲ್ಲರೂ ಕೊರೋನಾ ನಿಯಮಗಳನ್ನು ಮೀರಿ ವರ್ತಿಸಲಾರಂಭಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಕೊರೋನಾ ಉಲ್ಬಣಿಸಿದರೂ ಅಚ್ಚರಿಯೇನಿಲ್ಲ.

ಇದನ್ನೂ ಓದಿ : BBMP Election ಗೆ ಮತ್ತೊಂದು ವಿಘ್ನ: ಡಿ ಲಿಮಿಟೇಶನ್ ವರದಿ ತಿರಸ್ಕರಿಸಿದ ಸರ್ಕಾರ

ಇದನ್ನೂ ಓದಿ : ಆರ್‌ಎಸ್‌ಎಸ್‌ ವಿರುದ್ಧ ಮುಂದುವರಿದ ಸಮರ : ಪ್ರತಿಯೊಬ್ಬ ಭಾರತಿಯನಿಗೂ RSS ಅಂದ್ರೆ ಭಯ ಎಂದ ಸಿದ್ದರಾಮಯ್ಯ

Health minister Dr Sudhakar Confirm Corona Positive

Comments are closed.