Dolo 650 :ಒಂದು ಚೂರು ಜ್ವರದ ರೀತಿಯ ಲಕ್ಷಣಗಳು ಕಂಡುಬಂದರೂ ಸಾಕು ಡೋಲೋ 650 ಮಾತ್ರೆಯನ್ನು ನುಂಗಿಬಿಡುತ್ತೇವೆ. ಈಗಂತೂ ಜ್ವರ ಬಂತೆಂದರೆ ಕೊರೊನಾ ಇರಬಹುದೇನೋ ಎಂಬ ಭಯ ಕೂಡ ಇರೋದ್ರಿಂದ ಡೋಲೋ 650 ಮಾತ್ರೆ ನುಂಗುವುದು ಸರ್ವೇ ಸಾಮಾನ್ಯ ಎನಿಸಿಬಿಟ್ಟಿದೆ. ಆದರೆ ಈ ಡೋಲೋ 650 ದೇಶದಲ್ಲಿ ಎಷ್ಟರ ಮಟ್ಟಿಗೆ ಪ್ರಚಲಿತವಾಗಿದೆ ಎಂದರೆ ಕಳೆದ 2 ವರ್ಷಗಳಲ್ಲಿ ಬರೋಬ್ಬರಿ 358 ಕೋಟಿ ಡೋಲೋ 650 ಮಾತ್ರೆಗಳು ಮಾರಾಟವಾಗಿದೆ.
358 ಕೋಟಿ ಡೋಲೋ 650 ಮಾತ್ರೆಗಳ ಪ್ರಮಾಣ ಎಷ್ಟಿರಬಹುದು ಎಂಬುದು ನಿಮ್ಮ ಅಂದಾಜಿಗೆ ಈಗ ಸಿಗಲಿಕ್ಕಿಲ್ಲ. ಈ 358 ಕೋಟಿ ಡೋಲೋ ಮಾತ್ರೆಗಳನ್ನು ನೀವು ಒಂದರ ಮೇಲೊಂದರಂತೆ ಇಡುತ್ತಾ ಹೋದರೆ ಇದು ವಿಶ್ವದ ಅತಿ ಎತ್ತರವಾದ ಮೌಂಟ್ ಎವರೆಸ್ಟ್ ಪರ್ವತಕ್ಕಿಂತ 6000 ಪಟ್ಟು ಎತ್ತರವಾಗಿದೆ.ಡೋಲೋ 650 ಯ ಒಂದು ಮಾತ್ರೆಯು 1.5 ಸೆಂಟಿ ಮೀಟರ್ ಇದ್ದವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಮಾತ್ರೆಯು ಪ್ಯಾರಸಿಟಮಾಲ್ , ಕ್ರೋಸಿನ್ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.
2019 ರಲ್ಲಿ ದೇಶದಲ್ಲಿ ಸುಮಾರು 7.5 ಕೋಟಿ ಡೋಲೋ ಟ್ಯಾಬ್ಲೆಟ್ಗಳನ್ನು ಮಾರಾಟ ಮಾಡಲಾಗಿದೆ. 2020ರಲ್ಲಿ 2019ಕ್ಕಿಂತಲೂ ಎರಡು ಪಟ್ಟು ಹೆಚ್ಚಿನ ಡೋಲೋ 650 ಮಾತ್ರೆಗಳನ್ನು ಮಾರಾಟ ಮಾಡಲಾಗಿದೆ. ನವೆಂಬರ್ 2021ರ ವೇಳೆಯಲ್ಲಿ 217 ಕೋಟಿ ಡೋಲೋ 650 ಮಾತ್ರೆಗಳು ಮಾರಾಟವಾಗಿವೆ. 2021 ಹಾಗೂ 2021ರಲ್ಲಿ ದೇಶದಲ್ಲಿ ಒಟ್ಟು 358 ಕೋಟಿ ಡೋಲೋ 650 ಮಾತ್ರೆಗಳು ಮಾರಾಟವಾಗಿದೆ.
ಡೋಲಾ 650 ಕೇವಲ ಖರೀದಿಗೆ ಮಾತ್ರ ಸೀಮಿತವಾಗಿಲ್ಲ. ಗೂಗಲ್ನಲ್ಲಿ ಡೋಲೋ 650ಯನ್ನು ಅನೇಕರು ಗೂಗಲ್ ಸರ್ಚ್ ಮಾಡುತ್ತಿದ್ದಾರೆ. 2020ರ ಜನವರಿ ತಿಂಗಳಿನಿಂದ ಡೋಲೋ 650ಯನ್ನು ಸುಮಾರು 2 ಲಕ್ಷಕ್ಕೂ ಅಧಿಕ ಬಾರಿ ಹುಡುಕಾಟ ಮಾಡಲಾಗಿದೆ.
How made-in-India pill Dolo 650 became India’s ‘favourite snack’ in Covid waves
ಇದನ್ನು ಓದಿ : CM Meeting : ಕೊರೋನಾ ತಡೆಗೆ ಮಾರ್ಗಸೂಚಿ : ಸಿಎಂ ಸಭೆಗೆ ತಾಂತ್ರಿಕ ಸಮಿತಿ ಶಿಫಾರಸ್ಸುಗಳ ವಿವರ ಇಲ್ಲಿದೆ
ಇದನ್ನೂ ಓದಿ : omicron and corona : ಕೊರೊನಾ ಹಾಗೂ ಓಮೈಕ್ರಾನ್ ಹೆಚ್ಚಳದ ನಡುವೆ ಹೊರಬಿತ್ತು ಸಮಾಧಾನದ ಸಂಗತಿ