Fake Customer Care Alert: ಹೆಲೋ, ಬ್ಯಾಂಕಿಂದ ಫೋನ್ ಮಾಡ್ತಿರೋದು.. ನಕಲಿ ಕಸ್ಟಮರ್ ಕೇರ್ ಕಾಲ್ ಬರಬಹುದು ಎಚ್ಚರ!

ಆನ್‌ಲೈನ್ ಸ್ಕಾಮ್ ಮತ್ತು ಫ್ರಾಡ್ ಕರೆಗಳು ಹಿಂದೆಂದಿಗಿಂತಲೂ ಹೆಚ್ಚುತ್ತಿವೆ! ಸೈಬರ್ ಅಪರಾಧಿಗಳು ಮತ್ತು ವಂಚಕರು ವೈಯಕ್ತಿಕ ಮಾಹಿತಿಯನ್ನು ಕದಿಯಲು ಮತ್ತು ಬ್ಯಾಂಕ್ ಖಾತೆಗಳಿಂದ ಹಣವನ್ನು ಲೂಟಿ ಮಾಡಲು ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ. ಈ ವಂಚಕರು ಹಣ ದೋಚಲು ವಿವಿಧ ವಿಧಾನಗಳನ್ನು ಬಳಸುತ್ತಿದ್ದಾರೆ . ಮತ್ತು ಅವುಗಳಲ್ಲಿ ಒಂದು ” ಫೇಕ್ ಕಸ್ಟಮರ್ ಕೇರ್ ಕಾಲ್” (Fake Customer Care Alert) ಆಗಿದೆ.

ಇದರಲ್ಲಿ ಮೋಸ ಹೋದ ಗುರ್ಗಾಂವ್‌ನ ಮಹಿಳೆಯೊಬ್ಬರಿಗೆ ಭಾರಿ ರೂ. 16 ಲಕ್ಷ ನಷ್ಟವಾಗಿದೆ. ವಂಚಕರು ಅವಳನ್ನು ವಂಚಿಸಲು ಸರಳವಾದ ತಂತ್ರಗಳಲ್ಲಿ ಒಂದನ್ನು ಬಳಸಿದ್ದಾರೆ. ಅವರು ಮಹಿಳೆಯನ್ನು ಕರೆದು, ಬ್ಯಾಂಕಿನ ಗ್ರಾಹಕ ಸೇವೆಯಿಂದ ಬಂದವರು ಎಂದು ನಂಬುವಂತೆ ಮಾಡಿದರು. ಅವರನ್ನು ಒಮ್ಮೆ ನಂಬಿದರೆ, ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯುವ ಉಳಿದ ಪ್ರಕ್ರಿಯೆಯು ಸುಲಭವಾಗುತ್ತದೆ.

2021 ರ ನವೆಂಬರ್‌ನಲ್ಲಿ ಗುರ್‌ಗಾಂವ್‌ನ ಸೆಕ್ಟರ್ 53 ರ ನಿವಾಸಿ ಪೂರ್ಣಿಮಾ ಆನಂದ್ ಅವರೊಂದಿಗೆ ಕೂಡ ಇದೆ ರೀತಿ ಮೋಸ ಸಂಭವಿಸಿದೆ.ಅವರು ನಂತರ ತಮ್ಮ ಖಾತೆಯ ಸಮಸ್ಯೆಗೆ ಸಂಬಂಧಿಸಿದ ಬ್ಯಾಂಕ್ ಕಸ್ಟಮರ್ ಕೇರ್ ಸಂಖ್ಯೆಯೊಂದಿಗೆ ದೂರು ದಾಖಲಿಸಿದ್ದಾರೆ. “ನವೆಂಬರ್ 12 ರಂದು, ರಾಹುಲ್ ಶರ್ಮಾ ಎಂಬ ವ್ಯಕ್ತಿಯಿಂದ ತನಗೆ ಕರೆ ಬಂದಿತ್ತು, ಅವನು ತನ್ನ ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದಾನೆ ಎಂದು ಮನವರಿಕೆ ಮಾಡಿದರು. ನಿಮ್ಮ ವೈಯಕ್ತಿಕ ಕಂಪ್ಯೂಟರ್‌ಗಳು ಮತ್ತು ಇತರ ಡಿವೈಸ್ ಗಳಿಗೆ ರಿಮೋಟ್ ಪ್ರವೇಶವನ್ನು ನೀಡುವ ಎನಿ ಡೆಸ್ಕ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಮತ್ತು ಉಪಯೋಗಿಸಲು ವಂಚಕರು ಅವಳನ್ನು ಕೇಳಿದ್ದಾರೆ. ಪೂರ್ಣಿಮಾ ಅದನ್ನು ತನ್ನ ಸಿಸ್ಟಂನಲ್ಲಿ ಡೌನ್‌ಲೋಡ್ ಮಾಡಿಕೊಂಡು ಮತ್ತು ಅವನಿಗೂ ಎನಿ ಡೆಸ್ಕ್ ಉಪಯೋಗಿಸಲು ಒದಗಿಸಿದ್ದರು.

ಅಂತಿಮವಾಗಿ, ಎನಿ ಡೆಸ್ಕ್ ಮೂಲಕ, ವಂಚಕ ತನ್ನ ಸ್ವಂತ ಕಂಪ್ಯೂಟರ್ ಬಳಸಿ ಆಕೆಗೆ ತಿಳಿಸದೆ 13.15 ಲಕ್ಷ ದೋಚಿದ್ದಾನೆ. ತಿಂಗಳ ನಂತರ, ನವೆಂಬರ್ 25 ರಂದು, ಅವಳು ಮತ್ತೆ ಅದೇ ವ್ಯಕ್ತಿಯ ಕರೆ ಸ್ವೀಕರಿಸಿದ್ದಾರೆ. ಪುನಃ ಆತ ಎನಿ ಡೆಸ್ಕ್ ಮೂಲಕ 3 ಲಕ್ಷ ರೂಪಾಯಿ ಕದ್ದಿದ್ದಾನೆ. ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಬಳಸುತ್ತಿರುವ ಎನಿಡೆಸ್ಕ್, ತನ್ನ ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯಲು ಹೇಗೆ ಬಳಸಬಹುದೆಂದು ಆಕೆಗೆ ತಿಳಿದಿರಲಿಲ್ಲ. ಆನಂದ್ ಅವರ ಪ್ರಕರಣ ಮತ್ತು ವಂಚನೆ ಪ್ರಕರಣಗಳ ಹೆಚ್ಚಳವನ್ನು ಗಮನಿಸುತ್ತಿರುವಾಗ, ಬ್ಯಾಂಕ್ ಖಾತೆದಾರರು ಪರಿಸ್ಥಿತಿಯ ಬಗ್ಗೆ ತಿಳಿದಿರುವುದು ಮತ್ತು ಈ ಕೆಳಗಿನ ಅಂಶಗಳನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳುವುದು ಸೂಕ್ತವಾಗಿದೆ:
ನಕಲಿ ಗ್ರಾಹಕ ಕರೆಗಳಿಂದ (Fake Customer Care Alert) ವಂಚಕರಿಗೆ ಬಲಿಯಾಗುವುದನ್ನು ತಪ್ಪಿಸಲು ಸುರಕ್ಷತಾ ಸಲಹೆಗಳು:

ಹಂತ 1: ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪಲ್ಲಿ ಎನಿಡೆಸ್ಕ್ ಅನ್ನು ಡೌನ್‌ಲೋಡ್ ಮಾಡಬೇಡಿ
ಹಂತ 2: ಎನಿ ಡೆಸ್ಕ್ ಮೂಲಕ ನಿಮ್ಮ ಕಂಪ್ಯೂಟರ್, ಫೋನ್ ಅಥವಾ ಯಾವುದೇ ಡಿವೈಸ್ ಯಾರಿಗೂ ಅಪರಿಚಿತ ಪ್ರವೇಶವನ್ನು ಎಂದಿಗೂ ಅನುಮತಿಸಬೇಡಿ
ಹಂತ 3: ಯಾವುದೇ ಅಪರಿಚಿತರೊಂದಿಗೆ ಎನಿ ಡೆಸ್ಕ್ ಕೋಡ್ ಯಾವುದೇ ಸಂದರ್ಭದಲ್ಲೂ ಹಂಚಿಕೊಳ್ಳಬೇಡಿ
ಹಂತ 4: ಫೋನ್ ಕರೆಯಲ್ಲಿ ಯಾವುದೇ ವೈಯಕ್ತಿಕ ಅಥವಾ ಖಾತೆಯ ಮಾಹಿತಿಯನ್ನು ನೀಡಬೇಡಿ. ಬ್ಯಾಂಕ್ ಕಸ್ಟಮರ್ ಕೇರ್ ನಿಮ್ಮ ಬ್ಯಾಂಕ್ ಖಾತೆಯ ಬಳಕೆದಾರಹೆಸರು ಅಥವಾ ಪಾಸ್‌ವರ್ಡ್ ಅನ್ನು ಎಂದಿಗೂ ಕೇಳುವುದಿಲ್ಲ.
ಹಂತ 5: ಎಲ್ಲಾ ಸಮಯದಲ್ಲೂ ನಿಮ್ಮ ಪಾಸ್‌ವರ್ಡ್ ಅನ್ನು ರಕ್ಷಿಸಿ. ಯಾರೊಂದಿಗೂ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಬೇಡಿ.
ಹಂತ 6: ಅಪರಿಚಿತರೊಂದಿಗೆ ಫೋನ್‌ನಲ್ಲಿ ಮಾತನಾಡಬೇಡಿ, ವಾಟ್ಸಾಪ್, ಫೇಸ್ಬುಕ, ಟ್ವಿಟರ್ ಇತ್ಯಾದಿಗಳಲ್ಲಿ ಅವರೊಂದಿಗೆ ಸಂವಹನ ನಡೆಸಬೇಡಿ.
ಹಂತ 7: ನಿಮ್ಮ ಬಳಕೆದಾರಹೆಸರು ಅಥವಾ ಪಾಸ್‌ವರ್ಡ್ ಕದಿಯಲು ಸಾಧ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಿ
ಹಂತ 8: ಇಮೇಲ್ ಮೂಲಕ ಸ್ವೀಕರಿಸಿದ ಹೈಪರ್ಲಿಂಕ್ ಅನ್ನು ನೀವು ಕ್ಲಿಕ್ ಮಾಡಿದಾಗ ಯಾವುದೇ ಪುಟದಲ್ಲಿ ನಿಮ್ಮ ರಹಸ್ಯ ಬ್ಯಾಂಕ್ ಖಾತೆ ಡೇಟಾವನ್ನು ಒದಗಿಸಬೇಡಿ.
ಹಂತ 9: ಬ್ರೌಸರ್‌ನಲ್ಲಿ ಯುಆರ್ ಎಲ್ ಅನ್ನು ಟೈಪ್ ಮಾಡುವ ಮೂಲಕ ಬ್ಯಾಂಕ್ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ.
ಹಂತ 10: ವಾಟ್ಸಾಪ್, ಫೇಸ್ಬುಕ್, ಅಥವಾ ಇತರ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸಬೇಡಿ.
ಹಂತ 11: ನಿಮ್ಮ ಬ್ಯಾಂಕ್ ಖಾತೆಯ ಪಾಸ್‌ವರ್ಡ್ ಅನ್ನು ಕನಿಷ್ಠ 90 (ತೊಂಬತ್ತು) ದಿನಗಳಿಗೊಮ್ಮೆ ಬದಲಾಯಿಸಿ.
ಹಂತ 12: ನಿಮ್ಮ ಬ್ಯಾಂಕ್ ಖಾತೆಯನ್ನು ಆನ್‌ಲೈನ್‌ನಲ್ಲಿ ಬಳಸಿದ ನಂತರ ಲಾಗ್‌ಔಟ್ ಮಾಡಲು ಮರೆಯಬೇಡಿ .
ಹಂತ 13. ಯುಆರ್ ಎಲ್ ಅನ್ನು ಪರಿಶೀಲಿಸಿ ಮತ್ತು ಬ್ರೌಸರ್‌ನಲ್ಲಿ ಪ್ಯಾಡ್ ಲಾಕ್‌ನ ಐಕಾನ್ ಇದೆಯೇ ಎಂದು ನೋಡಿ. ಪ್ಯಾಡ್ ಲಾಕ್ ಇದು ಭೇಟಿ ನೀಡಲು ಸುರಕ್ಷಿತ ವೆಬ್‌ಸೈಟ್ ಎಂದು ಸೂಚಿಸುತ್ತದೆ. ಪ್ಯಾಡ್‌ಲಾಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಭದ್ರತಾ ಪ್ರಮಾಣಪತ್ರವನ್ನು ವೀಕ್ಷಿಸಬಹುದು.
ಹಂತ 14: ವೆಬ್‌ಸೈಟ್‌ನ ಯುಆರ್ ಎಚ್‌ಟಿ‌ಟಿ‌ಪಿಎಸ್ ( “https”) ನೊಂದಿಗೆ ಪ್ರಾರಂಭವಾಗಬೇಕು. ಮತ್ತು http ಅಲ್ಲ; ಇದರಲ್ಲಿ ಎಸ್ ಎಂದರೆ ‘ಸುರಕ್ಷಿತ’ ಎಂದರ್ಥ.
ಹಂತ 15: ನಿಮ್ಮ ವೈಯಕ್ತಿಕ ಮಾಹಿತಿ, ಕ್ರೆಡಿಟ್ ಕಾರ್ಡ್ ಮಾಹಿತಿ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಕೇಳುವ ಮೆಸೇಜ್ ಅಥವಾ ಫೋನ್ ಕರೆಯನ್ನು ನೀವು ಸ್ವೀಕರಿಸಿದರೆ, ಅದನ್ನು ಹಂಚಿಕೊಳ್ಳಬೇಡಿ.

ಇದನ್ನೂ ಓದಿ: Flipkart Big Saving Day 2022: ಫ್ಲಿಪ್‌ಕಾರ್ಟ್ ಸೇವಿಂಗ್ ಡೇ ಆಫರ್ ಆರಂಭ; ಲ್ಯಾಪ್‌ಟಾಪ್ ಖರೀದಿಗೆ ಸುವರ್ಣಾವಕಾಶ!

ಇದನ್ನೂ ಓದಿ: Amazon Republic Day Sale 2022: ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಆರಂಭ; ಸ್ಮಾರ್ಟ್‌ಫೋನ್, ಟಿವಿ, ಪವರ್ ಬ್ಯಾಂಕ್ ಗೇಮಿಂಗ್ ಲ್ಯಾಪ್‌ಟಾಪ್ ಮೇಲಿನ ಆಫರ್ ವಿವರ ಇಲ್ಲಿದೆ

ಇದನ್ನೂ ಓದಿ: 5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

(Fake Customer Care Alert be secure about your money)

Comments are closed.