COVID-19 cases :ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 33,750 ಹೊಸ ಕೋವಿಡ್ ಪ್ರಕರಣ ಹಾಗೂ 123 ಕೋವಿಡ್ ಸಾವುಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದರ ಸಂಖ್ಯೆ4,81,893 ಆಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿಯನ್ನು ನೀಡಿದೆ. ದೇಶದಲ್ಲಿ ಪ್ರಸ್ತುತ 1,45,582 ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 10,846 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 3,42,95,407 ಆಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ಈ ನಡುವೆ ದೇಶದಲ್ಲಿ 175 ಹೊಸ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಓಮಿಕ್ರಾನ್ ಪ್ರಕರಣ ಸಂಖ್ಯೆ 1700 ಆಗಿದೆ. ಇದರಲ್ಲಿ ಕನಿಷ್ಟ 639 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಓಮಿಕ್ರಾನ್ ಪ್ರಕರಣಗಳ ಪಟ್ಟಿ ಮೊದಲನೇ ಸ್ಥಾನದಲ್ಲೇ ಉಳಿದಿರುವ ಮಹಾರಾಷ್ಟ್ರ 510 ಓಮಿಕ್ರಾನ್ ಪ್ರಕರಣಗಳನ್ನು ವರದಿ ಮಾಡಿದೆ. ಇದಾದ ಬಳಿಕ ದೆಹಲಿಯಲ್ಲಿ 351, ಕೇರಳದಲ್ಲಿ 156, ಗುಜರಾತ್ನಲ್ಲಿ 136 ಹಾಗೂ ತಮಿಳುನಾಡಿನಲ್ಲಿ 121 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ದೇಶದಲ್ಲಿ ಪ್ರಸ್ತುತ 23 ರಾಜ್ಯಗಳು ಹೊಸ ರೂಪಾಂತರಿ ಓಮಿಕ್ರಾನ್ನ್ನು ವರದಿ ಮಾಡಿವೆ. ತೆಲಂಗಾಣ, ರಾಜಸ್ಥಾನ, ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ , ಮಧ್ಯಪ್ರದೇಶ, ಓಡಿಶಾ, ಉತ್ತರಾಖಂಡ್, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ಮಣಿಪುರ. ಲಡಾಕ್ ಹಾಗೂ ಪಂಜಾಬ್ನಲ್ಲಿಯೂ ಓಮಿಕ್ರಾನ್ ಪ್ರಕರಣಗಳು ವರದಿಯಾಗುತ್ತಿದೆ.
ದೇಶದಲ್ಲಿ ರಿಕವರಿ ರೇಟ್ 98.2 ಪ್ರತಿಶತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ 23,30,706 ಡೋಸ್ ಲಸಿಕೆಗಳನ್ನು ನೀಡಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟು 145.68 ಡೋಸ್ ಕೊರೊನಾ ಲಸಿಕೆ ನೀಡಿದಂತಾಗಿದೆ.
India records 33,750 new COVID-19 cases, 123 deaths; Omicron tally reaches 1,700
ಇದನ್ನು ಓದಿ : Opinion : ಧಾರ್ಮಿಕ ಪ್ರಾರ್ಥನಾಲಯಗಳ ಹುಂಡಿಗೂ ಬರಲಿ ಕ್ಯೂಆರ್ ಕೋಡ್
ಇದನ್ನೂ ಓದಿ : Corona vaccine campaign : ಇಂದಿನಿಂದ 15- 18 ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ: ಲಸಿಕೆ ಪಡೆದ ಮಕ್ಕಳಿಗೆ ರಜೆ