ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,27,952 ಹೊಸ ದೈನಂದಿನ ಕೋವಿಡ್ ಪ್ರಕರಣಗಳು (new Covid cases) ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ಮಾಹಿತಿ ನೀಡಿದೆ.ಗುರುವಾರಕ್ಕೆ ಹೋಲಿಕೆ ಮಾಡಿದರೆ ದೇಶದಲ್ಲಿ ದೈನಂದಿನ ಕೋವಿಡ್ ಸಂಖ್ಯೆಯಲ್ಲಿ 7.98 ಪ್ರತಿಶತ ಇಳಿಕೆ ಕಂಡಿದೆ ಕಂಡಿದೆ . ವಾರದ ಪಾಸಿಟಿವಿಟಿ ದರವು 11.21 ಪ್ರತಿಶತವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,059 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ದೇಶಾದ್ಯಂತ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,01,114ಕ್ಕೆ ತಲುಪಿದೆ. 2020ರ ಮಾರ್ಚ್ ತಿಂಗಳಲ್ಲಿ ದೇಶದಲ್ಲಿ ಮೊಟ್ಟ ಮೊದಲ ಕೋವಿಡ್ ಸಾವು ಸಂಭವಿಸಿತ್ತು. ಮೃತಪಟ್ಟ 1059 ಮಂದಿಯಲ್ಲಿ ಕೇರಳದ 595 ಮಂದಿ ಹಾಗೂ ಮಹಾರಾಷ್ಟ್ರದ 81 ಮಂದಿ ಸೇರಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,30,814 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 4,02,47,902 ಮಂದಿ ಕೋವಿಡ್ನಿಂದ ಗುಣಮುಖರಾಗಿದ್ದು ರಿಕವರಿ ದರ 95.39 ಪ್ರತಿಶತವಾಗಿದೆ.ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆಯು 13,31,648 ಆಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ದೇಶದಲ್ಲಿ ಇದುವರೆಗೆ 168.98 ಕೋಟಿ ಕೊರೊನಾ ಡೋಸ್ಗಳನ್ನು ನೀಡಲಾಗಿದೆ ಎಂದು ಐಸಿಎಂಆರ್ ಅಧಿಕೃತ ಮಾಹಿತಿಯನ್ನು ನೀಡಿದೆ.
ಇದನ್ನು ಓದಿ : ಕೊರೊನಾ ವಿರುದ್ಧದ ಹೋರಾಟದಲ್ಲಿ 3ನೇ ಡೋಸ್ ಲಸಿಕೆಯ ಮಹತ್ವ ತಿಳಿಸಿದ ಹೊಸ ಅಧ್ಯಯನ
ಇದನ್ನೂ ಓದಿ : ಏಷ್ಯಾದ ಅತೀ ಶ್ರೀಮಂತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಗೌತಮ್ ಅದಾನಿ
India reports 1,27,952 new Covid cases; positivity rate down to 7.9%