ನವದೆಹಲಿ : ಗಡಿಯಲ್ಲಿ ನಿಂತು ದೇಶವನ್ನು ಕಾಯುವವರದ್ದು ಒಂದು ರೀತಿಯಲ್ಲಿ ಜೀವದ ಜೊತೆಯಲ್ಲಿ ಆಟವಾದರೆ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಜನರನ್ನು ರಕ್ಷಿಸುತ್ತಿರುವ ಮುಂಚೂಣಿ ಕಾರ್ಯಕರ್ತರ ಕಾಯಕ ಕೂಡ ಯಾವುದೇ ಹೋರಾಟಕ್ಕೆ ಕಡಿಮೆಯೇನಿಲ್ಲ. ಸೋಂಕಿನ ಭಯವಿದ್ದರೂ ಜನರಿಗಾಗಿ ಅವರ ಆರೋಗ್ಯಕ್ಕಾಗಿ ಹೋರಾಡುವ ಇವರ ಕಾರ್ಯವನ್ನು ಮೆಚ್ಚುವಂತದ್ದೇ. ಅದೇ ರೀತಿ ಅರಬ್ ರಾಷ್ಟ್ರದಲ್ಲಿಯೂ ಮುಂಚೂಣಿ ಸಿಬ್ಬಂದಿಯಾಗಿದ್ದ (miraculous recovery from COVID) ಭಾರತೀಯ ವ್ಯಕ್ತಿ ಬರೋಬ್ಬರಿ ಆರು ತಿಂಗಳುಗಳ ಬಳಿಕ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ .
ಕೇರಳ ಮೂಲದವರಾದ 38 ವರ್ಷದ ಅರುಣ್ ಕುಮಾರ್ ನಾಯರ್ ಕೋವಿಡ್ ಸೋಂಕಿಗೆ ಒಳಗಾದ ಬಳಿಕ ಅವರ ಶ್ವಾಸಕೋಶ ತೀವ್ರವಾಗಿ ಹಾನಿಗೊಳಗಾಗಿತ್ತು. ಹೀಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅರುಣ್ಕುಮಾರ್ ನಾಯರ್ ಸರಿ ಸುಮಾರು ಆರು ತಿಂಗಳುಗಳ ಕಾಲ ಲೈಫ್ಸಪೋರ್ಟಿಂಗ್ ಸಿಸ್ಟಂನಲ್ಲಿಯೇ ಇದ್ದರು. ಒಟಿ ಟೆಕ್ನಿಷಿಯನ್ ಆಗಿ ಸೇವೆ ಸಲ್ಲಿಸುತ್ತಿದ್ದ ಅರುಣ್ ಕುಮಾರ್ ಕೋವಿಡ್ ಹೋರಾಟದ ಹಾದಿ ಕೂಡ ದುರ್ಗಮವಾಗಿತ್ತು. ಇವರಿಗೆ ಕೇವಲ ಕೋವಿಡ್ ಸೋಂಕಿನಿಂದ ಶ್ವಾಸಕೋಶ ಮಾತ್ರ ಹಾನಿಗೊಳಗಾಗಿರಲಿಲ್ಲ. ಈ ಅವಧಿಯಲ್ಲಿ ಅವರಿಗೆ ಹೃದಯ ಸ್ತಂಭನ ಕೂಡ ಉಂಟಾಗಿತ್ತು.
ಆದರೆ ಅರುಣ್ ಕುಮಾರ್ ನಾಯರ್ ತಮ್ಮ ಹೋರಾಟವನ್ನು ಕೈ ಬಿಡಲಿಲ್ಲ. ಸುಮಾರು ಐದು ತಿಂಗಳುಗಳ ಕಾಲ ಆಸ್ಪತ್ರೆಯ ಐಸಿಯುವಿನಲ್ಲಿ ಲೈಫ್ ಸಪೋರ್ಟಿಂಗ್ ಸಿಸ್ಟಂನಲ್ಲಿಯೇ ಇದ್ದ ಅರುಣ್ ಕುಮಾರ್ ಟ್ರಾಕಿಯೋಸ್ಟೊಮಿ ಹಾಗೂ ಬ್ರಾಂಕೋಸ್ಕೋಪಿಯೋದಂತಹ ಚಿಕಿತ್ಸೆಗಳನ್ನು ಮಾಡಿಸಿಕೊಂಡರು. ಕೃತಕ ಶ್ವಾಸಕೋಶದಿಂದ ಉಸಿರಾಡುತ್ತಿದ್ದ ಅರುಣ್ ಕುಮಾರ್ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡಿರುವ ಅರುಣ್ ಕುಮಾರ್ ನಾಯರ್, ಬರೋಬ್ಬರಿ ಅರ್ಧ ವರ್ಷಗಳ ಕಾಲ ಜಗತ್ತಿನಲ್ಲಿ ಏನಾಯ್ತು ಎಂಬುದೇ ನನಗೆ ತಿಳಿದಿಲ್ಲ. ನನಗೆ ಈ ಮರುಜನ್ಮ ಸಿಕ್ಕಿದೆ. ನಾನು ಸಾವಿನ ದವಡೆಯಿಂದ ಬಚಾವಾಗಿ ಬಂದಿದ್ದೇನೆ ಎಂದು ಹೇಳಿದರು,
ಇನ್ನು ಆಸ್ಪತ್ರೆಯಲ್ಲಿ ಮುಂಚೂಣಿ ಸಿಬ್ಬಂದಿಯ ಕೋವಿಡ್ ಹೋರಾಟವನ್ನು ಗಮನಿಸಿದ ಬಹುರಾಷ್ಟ್ರೀಯ ಆರೋಗ್ಯ ಸೇವಾ ಗುಂಪು ವಿಪಿಎನ್ ಹೆಲ್ತ್ ಕೇರ್ ಅರುಣ್ ಕುಮಾರ್ರಿಗೆ 50 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ. ಪವಾಡದ ರೀತಿಯಲ್ಲಿ ಕೋವಿಡ್ನಿಂದ ಪಾರಾದ ಅರುಣ್ ಕುಮಾರ್ರಿಗೆ ಬುರ್ಜಿಲ್ ಆಸ್ಪತ್ರೆಯಲ್ಲಿ ಗುರುವಾರ ನಡೆದ ಸಮಾರಂಭ ದಲ್ಲಿ ಅರುಣ್ ಕುಮಾರ್ರ ಎಮಿರೇಟ್ಸ್ ಸಹೋದ್ಯೋಗಿಗಳು ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದ್ದಾರೆ.
ಇದನ್ನು ಓದಿ : CM Ibrahim persuasion : ಆಪ್ತನ ಬಂಡಾಯಕ್ಕೆ ಬೆದರಿದ ಸಿದ್ದು: ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಮೊರೆ ಹೋದ ಸಿದ್ಧರಾಮಯ್ಯ
ಇದನ್ನೂ ಓದಿ : Coronavirus pandemic: ದೇಶದಲ್ಲಿ 2.51 ಲಕ್ಷ ದೈನಂದಿನ ಕೋವಿಡ್ ಪ್ರಕರಣಗಳು ವರದಿ
Indian frontline worker in UAE beats death; makes miraculous recovery from COVID-19