Puttaraju Meets Siddaramaiah : ಜೆಡಿಎಸ್ ಗೆ ಮತ್ತೊಂದು ಶಾಕ್ : ತೆನೆ ಇಳಿಸಿ ಕೈ ಹಿಡಿತಾರಾ ಸಿ.ಎಸ್.ಪುಟ್ಟರಾಜು

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಮೇಲಾಟಗಳು ಆರಂಭಗೊಂಡಿದೆ.‌ನಿಧಾನಕ್ಕೆ ಪಕ್ಷಾಂತರ ಪರ್ವ ಆರಂಭಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಸಿದ್ಧರಾಮಯ್ಯ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎನ್ನುತ್ತಿದ್ದರೇ, ಇನ್ನೊಂದೆಡೆ ಬಿಜೆಪಿಗೆ ಬಂದ ಕಾಂಗ್ರೆಸ್ ವಲಸಿಗರು ಮರಳಿ ಗೂಡು ಸೇರುತ್ತಾರೆ ಎಂಬ ಊಹಾಪೋಹವೂ ಜೋರಾಗಿದೆ. ಇದರ ಮಧ್ಯೆ ಜೆಡಿಎಸ್ ಗೆ ಶಾಕ್ ಎದುರಾದಂತಿದ್ದು, ಕೋನರೆಡ್ಡಿ ಬಳಿಕ ಶಾಸಕ ಸಿ.ಎಸ್.ಪುಟ್ಟರಾಜು (Puttaraju Meets Siddaramaiah) ಕೂಡ ತೆನೆ ಇಳಿಸುವ ಸಿದ್ಧತೆಯಲ್ಲಿದ್ದಂತಿದೆ.

ಹೌದು ಈಗಾಗಲೇ ಕೆಲವೇ ಕೆಲವು ಶಾಸಕರನ್ನು ಉಳಿಸಿಕೊಂಡು ಕಂಗಲಾಗಿರುವ ಜೆಡಿಎಸ್ ಗೆ ಮತ್ತೊಂದು ದೊಡ್ಡ ಶಾಕ್ ಎದುರಾಗುವ ಮುನ್ಸೂಚನೆ ಸಿಕ್ಕಿದ್ದು, ಕುಮಾರಸ್ವಾಮಿ ಬಲಗೈ ಬಂಟನಂತಿದ್ದ ಶಾಸಕ ಸಿ.ಎಸ್.ಪುಟ್ಟರಾಜು ಜೆಡಿಎಸ್ ತೊರೆಯಲಿದ್ದಾರೆ ಎಂಬ ವದಂತಿಗಳು ಕೇಳಿಬಂದಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಪಸ್ವಲ್ಪವಾದರೂ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ್ದ ಕೋನರೆಡ್ಡಿ‌ಜೆಡಿಎಸ್ ತೊರೆದಿದ್ದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಇದರ ಬೆನ್ನಲ್ಲೇ ಮಂಡ್ಯ ಪಾಂಡವಪುರ ಶಾಸಕ ಸಿ.ಎಸ್‌.ಪುಟ್ಟರಾಜು ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಗುರುವಾರ ರಾತ್ರಿ ಪುಟ್ಟರಾಜು ರಹಸ್ಯವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯವನವರನ್ನು ಭೇಟಿ ಮಾಡಿ‌ಮಾತುಕತೆ ನಡೆಸಿದ್ದಾರೆ.ಶಿವಾನಂದ್ ವೃತ್ತದಲ್ಲಿರೋ ಸಿದ್ಧು ನಿವಾಸಕ್ಕೆ ಸಿ.ಎಸ್. ಪುಟ್ಟರಾಜು ಭೇಟಿ‌ ನೀಡಿದ್ದು ಗಂಟೆಗಳ ಕಾಲ ಸಿದ್ಧರಾಮಯ್ಯನವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಿದ್ಧರಾಮಯ್ಯ ಆಪ್ತ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಈ ಮಾತುಕತೆ ನಡೆದಿದೆ ಎನ್ನಲಾಗಿದೆ.

ಈ ವೇಳೆಗೆ ಕಾಂಗ್ರೆಸ್ ನ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಕೂಡ ಹಾಜರಿದ್ದರು. ಈ ವೇಳೆ ಸಿ.ಎಸ್.ಪುಟ್ಟರಾಜು ಕಾಂಗ್ರೆಸ್ ನಿಂದ ಟಿಕೇಟ್ ಖಚಿತಪಡಿಸಿದರೇ ಪಕ್ಷಕ್ಕೆಸೇರಲು ಸಿದ್ಧ ಎಂದು ಒಪ್ಪಿಕೊಂಡಿದ್ದು, ಸಿದ್ಧರಾಮಯ್ಯನವರು ಟಿಕೇಟ್ ಕೊಡಿಸುವ ಭರವಸೆಯೊಂದಿಗೆ ಪಕ್ಷಕ್ಕೆ ಆಹ್ವಾನಿಸಿದ್ದಾರಂತೆ. ಸಿ.ಎಸ್‌.ಪುಟ್ಟರಾಜು ಮಂಡ್ಯ ಭಾಗದಲ್ಲಿ ಜೆಡಿಎಸ್ ಪಕ್ಷ ಕಟ್ಟಿಬೆಳೆಸಿದ್ದು, ದೇವೇಗೌಡರ ಕುಟುಂಬಕ್ಕೆ ನಿಷ್ಠೆಯಿಂದ ಗುರುತಿಸಿಕೊಂಡಿದ್ದರು.

ಆದರೆ ಈಗ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಟ್ಟಿರೋ ಕಾಂಗ್ರೆಸ್, ಜೆಡಿಎಸ್ ನ ಹಿರಿಯ ಶಾಸಕನಿಗೆ ಗಾಳ ಹಾಕಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬರಲಿದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಮತ್ತೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ಗರಿಗೆದರಿದ್ದು, ರಾಜಕೀಯ ಭವಿಷ್ಯ ಹಾಗೂ ಅಧಿಕಾರದ ಆಸೆಗಾಗಿ ಎಂಎಲ್ ಎ ಗಳು ಪಕ್ಷ ಹಾಗೂ ಚಿಹ್ನೆ ಬದಲಿಸುವ ತರಾತುರಿಯಲ್ಲಿದ್ದಾರೆ.

ಇದನ್ನೂ ಓದಿ : ವಿಧಾನ ಪರಿಷತ್ ವಿಪಕ್ಷ ಸ್ಥಾನ ನೀಡದ್ದಕ್ಕೆ ಸಿ.ಎಂ.ಇ್ರಬಾಹಿಂ ಮುನಿಸು : ಕಾಂಗ್ರೆಸ್‌ ಮೊದಲ ವಿಕೆಟ್‌ ಪತನ

ಇದನ್ನೂ ಓದಿ : ಆಪ್ತನ ಬಂಡಾಯಕ್ಕೆ‌ ಬೆದರಿದ ಸಿದ್ದು: ಇಬ್ರಾಹಿಂ ಮನವೊಲಿಕೆಗೆ ರಿಜ್ವಾನ್ ಮೊರೆ ಹೋದ ಸಿದ್ಧರಾಮಯ್ಯ

(JDS MLA CS Puttaraju Meets Siddaramaiah, resigns jds and join congress)

Comments are closed.