ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರೋ ಬೆನ್ನಲ್ಲೇ ಇಂದು ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕಿತರ ವರದಿ ಬಯಲಾಗಲಿದೆ. ರಾಜ್ಯದ 15 ಜಿಲ್ಲೆಗಳ ಸುಮಾರು 2000 ಮಂದಿಯ ಕೊರೊನಾ ತಪಾಸಣಾ ವರದಿ ಇಂದು ಹೊರ ಬೀಳಲಿದ್ದು, ಆತಂಕ ಶುರುವಾಗಿದೆ.

ಕರುನಾಡು ಕೊರೊನಾ ಮಹಾಮಾರಿಯಿಂದ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 100ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದ್ರಲ್ಲೂ ಮೊನ್ನೆ 48 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ರೆ, ನಿನ್ನೆ 56 ಮಂದಿ ಕೊರೊನಾಕ್ಕೆ ತುತ್ತಾಗಿದ್ರು. ಇಂದು 15 ಜಿಲ್ಲೆಗಳ ಸುಮಾರು 2000ಕ್ಕೂ ಅಧಿಕ ಮಂದಿಯ ಕೊರೊನಾ ತಪಾಸಣಾ ವರದಿ ಹೊರ ಬೀಳಲಿದೆ.

ತುಮಕೂರು 793, ಬೀದರ್ 596, ಮಂಡ್ಯ 335, ಬೆಳಗಾವಿ 271, ಉಡುಪಿ 232, ದಕ್ಷಿಣ ಕನ್ನಡ 184, ಶಿವಮೊಗ್ಗ 169, ಧಾರವಾಡ 147, ಬಾಗಲಕೋಟೆ 120, ಚಿತ್ರದುರ್ಗ 118, ಕೋಲಾರ 65, ಬಳ್ಳಾರಿ 48, ವಿಜಯಪುರ 44 ಹಾಗೂ ಬೆಂಗಳೂರಿನ ಪಾದರಾಯನಪುರದಲ್ಲಿ ಪ್ರಾಥಮಿಕ ಸಂಪರ್ಕದಲ್ಲಿರುವ ಸುಮಾರು 20 ಮಂದಿ ಸೇರಿದಂತೆ 2000ಕ್ಕೂ ಅಧಿಕ ಮಂದಿಯ ಕೊರೊನಾ ತಪಾಸಣಾ ವರದಿ ಇಂದು ಆರೋಗ್ಯ ಇಲಾಖೆಯ ಕೈ ಸೇರಲಿದೆ.

ಕಳೆದೊಂದು ವಾರದಕ್ಕೆ ಹೋಲಿಸಿದ್ರೆ ತಪಾಸಣೆಗೆ ಒಳಪಟ್ಟ ಸರಾಸರಿ ಶೇ.8 ರಷ್ಟು ಮಂದಿ ಕೊರೊನಾ ಮಹಾಮಾರಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಇಂದು ಕೊರೊನಾ ಪೀಡಿತ ಸಂಖ್ಯೆ ಹೆಚ್ಚಳವಾಗೋ ಆತಂಕ ಶುರುವಾಗಿದೆ.