ಭಾನುವಾರ, ಜೂನ್ 15, 2025
HomeBreakingಆಶಾ ಕಾರ್ಯಕರ್ತೆಯ ಮೇಲೆ ಪೊರಕೆಯಿಂದ ಹಲ್ಲೆಗೆ ಯತ್ನಿಸಿದ ಮಂತ್ರವಾದಿ

ಆಶಾ ಕಾರ್ಯಕರ್ತೆಯ ಮೇಲೆ ಪೊರಕೆಯಿಂದ ಹಲ್ಲೆಗೆ ಯತ್ನಿಸಿದ ಮಂತ್ರವಾದಿ

- Advertisement -

ಮಂಗಳೂರು : ಮನೆಯ ಮುಂದೆ ಜನ ಸೇರಿರುವುದನ್ನು ಪ್ರಶ್ನಿಸಿದ್ದಕ್ಕೆ ಆಶಾ ಕಾರ್ಯಕರ್ತೆಯ ಮೇಲೆ ಮಂತ್ರವಾದಿಯೊಬ್ಬ ಪೊರಕೆಯಿಂದ ಹಲ್ಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಿಪಾಡಿಯಲ್ಲಿ ನಡೆದಿದೆ.

ಶ್ರೀಮತಿ ಹಾಗೂ ಆಕೆಯ ಪತಿ ವಿಶ್ವನಾಥ್ ಎಂಬವರೇ ಆಶಾ ಕಾರ್ಯಕರ್ತೆ ಪುಷ್ಪಲತಾ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗಳು. ವಿಶ್ವನಾಥ್ ತನ್ನ ಮನೆಯಲ್ಲಿ ಮಂತ್ರವಾದಿ ಕಾರ್ಯವನ್ನು ಮಾಡುತ್ತಿದ್ದ. ಹೀಗಾಗಿ ನಿತ್ಯವೂ ಸಾಕಷ್ಟು ಸಂಖ್ಯೆಯಲ್ಲಿ ಜನರು ಈತನ ಮನೆಗೆ ಬರುತ್ತಿದ್ದರು. ಆದರೆ ಮನೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆ ಪುಷ್ಪಲತಾ ಅವರು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನೆಯಲ್ಲಿದ್ದ ಪೊರಕೆಯಿಂದ ಹಲ್ಲೆಗೆ ಯತ್ನಿಸಿದ್ದಾರೆ.

ಕೂಡಲೇ ಆಶಾ ಕಾರ್ಯಕರ್ತೆ ಪುಷ್ಪಲತಾ ಅವರು ಕುಕ್ಕಿಪಾಡಿ ಗ್ರಾಂ ಪಂಚಾಯತ್ ಸದಸ್ಯರಾದ ಯೋಗೀಶ್ ಆಚಾರ್ಯ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗ್ರಾಮ ಪಂಚಾಯತ್ ಸದಸ್ಯರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular