ಸೋಮವಾರ, ಏಪ್ರಿಲ್ 28, 2025
HomeCorona Updatesfourth wave : ನಾಲ್ಕನೇ ಅಲೆಗೆ ಸಜ್ಜಾದ ಸರಕಾರ: ನಗರದ ಆಸ್ಪತ್ರೆಗಳಲ್ಲಿ ಬೆಡ್ ಮೀಸಲು

fourth wave : ನಾಲ್ಕನೇ ಅಲೆಗೆ ಸಜ್ಜಾದ ಸರಕಾರ: ನಗರದ ಆಸ್ಪತ್ರೆಗಳಲ್ಲಿ ಬೆಡ್ ಮೀಸಲು

- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆಯ (fourth wave) ಪ್ರಭಾವ ಹೆಚ್ಚುತ್ತಿದೆ.‌ ನಿಧಾನಕ್ಕೆ ಕೊರೋನಾ ಪಾಸಿಟಿವ್ ಕೇಸ್ ಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಹೀಗಾಗಿ ಕೋವಿಡ್ ನಾಲ್ಕನೆ ಅಲೆಯನ್ನು ಸಮರ್ಥವಾಗಿ ಎದುರಿಸಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಮುನ್ನೆಚರಿಕೆ ಕ್ರಮಕ್ಕೆ ಸಜ್ಜಾಗಿದೆ. ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ತಯಾರಿ ನಡೆಸಲಾಗಿದ್ದು, 4 ನೇ ಅಲೆ ಎದುರಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿದ್ದತೆ ನಡೆದಿದೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಸಿವಿ ರಾಮನ್ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕೆಸಿ ಜನರಲ್ ಆಸ್ಪತ್ರೆಯಲ್ಲಿ 50 ಬೆಡ್ ವ್ಯವಸ್ಥೆ ಇದ್ದು, ಇದನ್ನು ಹೊರತುಪಡಿಸಿ ಸಿವಿ ರಾಮನ್ ಆಸ್ಪತ್ರೆಯಲ್ಲಿ 50 ಬೆಡ್ ವ್ಯವಸ್ಥೆಯಾಗಿದೆ. ಇದಲ್ಲದೇ ಒಂದು ವೇಳೆ ಏಕಾಏಕಿ ಪ್ರಕರಣ ಗಳು ಹೆಚ್ಚಳಗೊಂಡರೆ ನಗರದ ಎಲ್ಲಾ ಪ್ರಮುಖ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಸದ್ಯ ಬೆಂಗಳೂರು ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗುವವರ ಸಂಖ್ಯೆ ಕಡಿಮೆ ಇದೆ. ಆದ್ರೂ ಮುಂಜಾಗೃತ ಕ್ರಮವಾಗಿ ಮುಂಚಿತವಾಗಿ ಸಿದ್ಧತೆ ನಡೆಸಲಾಗಿದೆ. ಕಳೆದ ಮೂರು ಅಲೆಗಳನ್ನು ಎದುರಿಸಿದ್ದ ಸರ್ಕಾರಿ ಆಸ್ಪತ್ರೆಗಳು ಅದೇ ಲೆಕ್ಕಾಚಾರದಲ್ಲಿ ಈಗಲೂ ಕೊರೋನಾ ಎದುರಿಸಲು ಬೆಡ್ ವ್ಯವಸ್ಥೆ ಮಾಡಿಕೊಳ್ಳುತ್ತಿವೆ.

ರಾಜ್ಯದಲ್ಲಿ ಮೊದಲು ಹಾಗೂ ಎರಡನೇ ಅಲೆಯಲ್ಲಿ ಕೊರೋನಾ ತೀವ್ರತೆ ಹೆಚ್ಚಳವಾಗಿತ್ತು. ಈ ವೇಳೆ ಸಾವಿರಾರು ರೋಗಿಗಳು ಬೆಡ್‌ಗಳಿಗಾಗಿ ಪರದಾಟ ನಡೆಸಿದ್ದ ರೋಗಿಗಳು ಆಕ್ಸಿಜನ್ ಸಿಗದೇ ಪರದಾಡಿ ಸಾವನ್ನಪ್ಪಿದ್ದರು. ಆದರೆ ಮೂರನೇ ಅಲೆಯಲ್ಲಿ ತೀವ್ರತೆ ಕಡಿಮೆಯಿದ್ದ ಕಾರಣ ಬೆಡ್‌ಗಳ ಸಮಸ್ಯೆ ಎದುರಾಗಿರಲಿಲ್ಲ. ಆದರೂ ನಾಲ್ಕನೇ ಅಲೆಯಲ್ಲಿ ರಿಸ್ಕ್ ತೆಗೆದುಕೊಳ್ಳಬಾರದೆಂಬ ಕಾರಣಕ್ಕೆ ಈಗಾಗಲೇ ಬೆಡ್ ಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ಇನ್ನು ಸಿವಿ ರಾಮನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ರಾಧಾಕೃಷ್ಣ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಮ್ಮಲ್ಲಿ 4 ನೇ ಅಲೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ.3 ನೇ ಅಲೆಯಂತೆ 4 ನೇ ಅಲೆಯಲ್ಲೂ ಆಸ್ಪತ್ರೆಗೆ ದಾಖಲಾತಿ ಸಂಖ್ಯೆ ಕಡಿಮೆ ಇರುವ ನಿರೀಕ್ಷೆ ಇದೆ.ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ.ಜನ 4 ನೇ ಅಲೆ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ.ಆದರೆ ಕೋವಿಡ್ ಮುಂಜಾಗ್ರತಾ ಕ್ರಮ ವಹಿಸಬೇಕು.ಪೋಷಕರು 12 ವರ್ಷ ಮೇಲ್ಪಟ್ಟ ‌ಮಕ್ಕಳಿಗೆ ಲಸಿಕೆ ಹಾಕಿಸಬೇಕು ಪ್ರತಿಯೊಬ್ಬರು ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ವಾಕ್ಸಿನ್, ಮಾಸ್ಕ್ ಕಡ್ಡಾಯ, ಮಾರ್ಷಲ್ ಗಸ್ತು ಆರಂಭ : ಬಿಬಿಎಂಪಿಯಿಂದ ಹೊಸ ಗೈಡ್‌ಲೈನ್ಸ್‌

ಇದನ್ನೂ ಓದಿ : ಪಾಟ್ನಾದಲ್ಲಿ ಹೊಸ ಓಮಿಕ್ರಾನ್‌ ಕೋವಿಡ್ ರೂಪಾಂತರ BA.2.12 ತಳಿ ಪತ್ತೆ

Karnataka Government geared to the fourth wave, Bed reserves in city hospitals

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular