Amit Shah ಆಗಮನದ ಹೊತ್ತಲ್ಲೇ ಅಶ್ವತ್ಥ ನಾರಾಯಣ್ ಗೆ ಶಾಕ್ : ಭ್ರಷ್ಟಾಚಾರದ ಆರೋಪ ಕೆಂಡಾಮಂಡಲ

ಬೆಂಗಳೂರು : ರಾಜ್ಯ ಬಿಜೆಪಿ ಪಾಳಯಕ್ಕೆ ಪರೀಕ್ಷಾ ಕಾಲ ಸಮೀಪಿಸಿದೆ. ಬಿಜೆಪಿಯ ಹೈಕಮಾಂಡ್ ಅಮಿತ್ ಶಾ (Amit Shah) ರಾಜ್ಯಕ್ಕೆ ಆಗಮಿಸುತ್ತಿರೋ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು, ಶಾಸಕರು ಸಚಿವರು ಎಲ್ಲರೂ ತಮ್ಮ ತಮ್ಮ ಮಾರ್ಕ್ಸ್ ಕಾರ್ಡ್ ಹಿಡಿದು ಸ್ಥಾನ ಉಳಿಸಿಕೊಳ್ಳಲು ಹಾಗೂ ಗಳಿಸಿಕೊಳ್ಳಲು ಸಜ್ಜಾಗಿದ್ದಾರೆ. ಆದರೆ ಇದೇ ಹೊತ್ತಿನಲ್ಲಿ ಕ್ಲೀನ್ ಇಮೇಜ್ ಉಳಿಸಿಕೊಂಡಿದ್ದ ಡಾ.ಅಶ್ವತ್ಥ್ ನಾರಾಯಣ (Ashwath Narayan) ಗೆ ಸಂಕಷ್ಟ ಎದುರಾಗಿದ್ದು ಪಿಎಸ್ ಐ ಕೇಸ್ ನಲ್ಲಿ ಅಶ್ವತ್ಥ ನಾರಾಯಣ ಹೆಸರು ಕೇಳಿಬಂದಿರೋದರಿಂದ ಸಚಿವರು ಕೆಂಡಾಮಂಡಲರಾಗಿದ್ದಾರೆ.

ಅಮಿತ್ ಶಾ ರಾಜ್ಯಕ್ಕೆ ಬರ್ತಿರೋದೇ ಸಚಿವರುಗಳು ಮಾರ್ಕ್ಸ್ ಕಾರ್ಡ್ ನೋಡೋದಿಕ್ಕೆ. ಆದರೆ ಇದೇ ಹೊತ್ತಿನಲ್ಲೇ ಬೊಮ್ಮಾಯಿ ಸಂಪುಟದ ಅತ್ಯಂತ ಸಭ್ಯ ಸಚಿವ ಖ್ಯಾತಿಯ ಡಾ.ಅಶ್ವತ್ಥ ನಾರಾಯಣ್ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ವಿರುದ್ಧ ಕೇಳಿ ಬಂದಿರೋ ಆರೋಪದಿಂದ ವಿಚಲಿತರಾಗಿದ್ದಾರೆ. ಶಾ ಆಗಮನದ ವೇಳೆ ಸಚಿವರ ಮೇಲೆ ಅಕ್ರಮದ ಆರೋಪದ ಸದ್ದು‌ ಕೇಳಿಬಂದಿದೆ. ಹೀಗಾಗಿ ನಾಳೆ ಸಚಿವರುಗಳ ಹಾಗೂ ಕೋರ‌ಕಮಿಟಿಯ ಸಭೆ ನಡೆಸಲಿರುವ ಅಮಿತ್ ಷಾ ಅಶ್ವತ್ಥ ನಾರಾಯಣ್ ವಿಚಾರದ ಬಗ್ಗೆ ಮಾಹಿತಿ ಕೇಳೋ ಸಾಧ್ಯತೆ ಇದೆ.

ಅಲ್ಲದೇ ಪಿಎಸ್ಐ ಪ್ರಕರಣದಲ್ಲಿ ಅಶ್ವತ್ಥ ನಾರಾಯಣ್ ಹೆಸರು ಕೇಳಿಬಂದಿರೋದರ ಬಗ್ಗೆ ಅಸಮಧಾನ ಕೂಡ ವ್ಯಕ್ತಪಡಿಸೋ ಸಾಧ್ಐಎ ಇದೆ. ಇದರಿಂದ ಕ್ಲೀನ್ ಇಮೇಜ್ ಹೊಂದಿರುವ ಅಶ್ವತ್ಥ ನಾರಾಯಣ್ ಗೆ ಮುಜುಗರವಾಗಲಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಡಾ.ಅಶ್ವತ್ಥ ನಾರಾಯಣ್ ಇಂದಲ್ಲ ನಾಳೆ ಸಿಎಂ ಸ್ಥಾನಕ್ಕೇರುವ ಕನಸು ಕಂಡವರು. ಆದರೆ ಈ ಆರೋಪ ಹಾಗೂ ರಾಜೀನಾಮೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್ ನವರಿಂದಾಗಿ ಪಕ್ಷದಲ್ಲಿ ಅವಮಾನ ಹಾಗೂ ಸ್ಥಾನಮಾನಕ್ಕೆ ಧಕ್ಕೆಯಾಗಲಿದೆ ಅಂತ ಅಸಮಧಾನಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಡಾ.ಅಶ್ವತ್ಥ ನಾರಾಯಣ್ ಸಿಡಿಮಿಡಿಗೊಂಡಿದ್ದು ಸುದ್ದಿಗೋಷ್ಟಿಯಲ್ಲಿ ಡಿಕೆಶಿ ವಿರುದ್ಧ ಕೆಂಡಕಾರಿದ್ದಾರೆ. ಮಾತ್ರವಲ್ಲ ತಮ್ಮ ಸಹಾಯಕ್ಕೆ ಧಾವಿಸುವಂತೆ ಇತರ ಸಚಿವರು ಹಾಗೂ ಶಾಸಕರ ಸಹಾಯ ಕೋರಿದ್ದಾರಂತೆ. ಅಲ್ಲದೇ ಡಿಕೆಶಿಗೂ ಖಡಕ್ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದು, ಡಿಕೆಶಿ ಬಂಡವಾಳ ಬಿಚ್ಚಿಡುವುದಾಗಿಯೂ ಸವಾಲು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರತಿ ಸವಾಲು ಹಾಕಿ ತೊಡೆ ತಟ್ಟಿದ ಅಶ್ವಥ್ ನಾರಾಯಣ್ ಮುಂದಿನ ದಿನಗಳಲ್ಲಿ ಅವ್ರ ಮೇಲಿನ ಭ್ರಷ್ಟಾಚಾರ ದಾಖಲೆ ಬಿಡುಗಡೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಅಮಿತ್ ಶಾ ಭೇಟಿ ವೇಳೆ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದ್ದು ಅಶ್ವತ್ಥ ನಾರಾಯಣ್ ಮತ್ತೊಮ್ಮೆ ಡಿಸಿಎಂ ಪಟ್ಟಕ್ಕೆ ಏರೋದು ಖಚಿತ ಎನ್ನಲಾಗಿತ್ತು. ಆದರೆ ಈಗ ಈ ಹಗರಣ ದಲ್ಲಿ ಹೆಸರು ಕೇಳಿಬಂದಿರೋದರು ಅಶ್ವತ್ಥ ನಾರಾಯಣ ಕನಸಿಗೆ ಕೊಳ್ಳಿ ಇಟ್ಟಿದ್ದು, ಅಮಿತ್ ‌ಶಾ ಅಶ್ವತ್ಥನಾರಾಯಣ್ ಪ್ರಕರಣವನ್ನು ಹೇಗೆ ಸ್ವೀಕರಿಸುತ್ತಾರೆ. ಹೈಕಮಾಂಡ್ ಏನು ಹೇಳುತ್ತೆ ಅನ್ನೋ ಕುತೂಹಲ ಬಿಜೆಪಿಗರಿಗೂ ಹಾಗೂ ಸ್ವತಃ ಅಶ್ವತ್ಥ ನಾರಾಯಣ್ ರಿಗೂ ಕಾಡ್ತಿದೆಯಂತೆ.

ಇದನ್ನೂ ಓದಿ : ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಚುನಾವಣಾ ಚಾಣಾಕ್ಷ ಪ್ರಶಾಂತ್​ ಕಿಶೋರ್​

ಇದನ್ನೂ ಓದಿ : ಸಿಎಂ ಬೊಮ್ಮಾಯಿ ಬದಲಾವಣೆ ? ಕುತೂಹಲ ಮೂಡಿಸಿದೆ ಬಿಜೆಪಿ ತ್ರಿಮೂರ್ತಿಗಳ ಸಭೆ

corruption allegations About Ashwath Narayan, Amit Shah visit Karnataka

Comments are closed.