ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಹೇರಿದ್ದ ಲಾಕ್ ಡೌನ್ ಆದೇಶವನ್ನು ಭಾಗಶಃ ಸಡಿಲಗೊಳಿಸಲಾಗಿದೆ. ಕಟೈಂನ್‍ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆಯಲ್ಲಿ ಮಾತ್ರವೇ ಲಾಕ್‍ಡೌನ್ ನಿಯಮ ಸಡಿಲಗೊಳ್ಳಲಿದೆ. ಅಗತ್ಯವಸ್ತುಗಳ ಕೈಗಾರಿಕೆ, ಸರಕಾರಿ ಕಚೇರಿ, ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ನ್ನು ಕಡ್ಡಾಯವಾಗಿ ಬಳಕೆ ಮಾಡಲು ಸೂಚನೆ ನೀಡಲಾಗಿದೆ. ಕೃಷಿ, ಮೀನುಗಾರಿಕೆ, ವೈದ್ಯಕೀಯ ಸೇವೆಗಳಿಗೆ ಅವಕಾಶ ನೀಡಲಾಗಿದ್ರೆ, ಮದ್ಯಮಾರಾಟದ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗಿದೆ.

ಯಾವುದಕ್ಕೆಲ್ಲಾ ಅವಕಾಶ ?

ಲಾಕ್ ಡೌನ್ ನಿಯಮ ಭಾಗಶಃ ಸಡಿಲವಾಗಿರೋದ್ರಿಂದಾಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್ಸ್, ಕ್ಲಿನಿಕ್ಗಳಲ್ಲಿ ಸೇರಿದಂತೆ ವೈದ್ಯಕೀಯ ಸೇವೆ ಲಭ್ಯವಾಗಲಿದೆ. ಮೆಡಿಕಲ್ ಶಾಪ್ಗಳು, ಲ್ಯಾಬೋರೇಟರಿಗಳೂ ಓಪನ್, ವೆಟರ್ನರಿ ಆಸ್ಪತ್ರೆಗಳು, ಡಿಸ್ಪೆನ್ಸರೀಸ್, ಪೆಥಾಲಜಿ ಸೇವೆಗಳು ಲಭ್ಯವಾಗಲಿದೆ. ಬ್ಯಾಂಕ್ಗಳು, ಎಟಿಎಂಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಕೃಷಿ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಕೃಷಿ ಉಪಕರಣಗಳ ಮಾರಾಟ, ಎಪಿಎಂಸಿ ಮಾರ್ಕೆಟ್ಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮೀನುಗಾರಿಕೆಗೂ ಅನುಮತಿ ನೀಡಲಾಗಿದ್ದು, ಸಾಂಪ್ರದಾಯಿಕವಾಗಿ ಮೀನುಗಾರಿಕೆಯನ್ನು ನಡೆಸಬಹುದಾಗಿದೆ. ದಿನಸಿ ಅಂಗಡಿ, ಮಾಂಸದ ಅಂಗಡಿ ತೆರೆಯಬಹುದಾಗಿದ್ದು, ಕೋರಿಯರ್, ಅಂಚೆ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.

ಆನ್ ಲೈನ್ ನಲ್ಲಿ ವಸ್ತುಗಳ ಖರೀದಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ವಿಮಾನ ನಿಲ್ದಾಣ, ರೇಲ್ವೆ ಸ್ಟೇಷನ್, ಕಂಟೇನರ್ ಡಿಪೋಗಳಲ್ಲಿ ಸಂಸ್ಕರಣಾ ಘಟಕ ಆರಂಭಿಸಲು ಅನುಮತಿ ನೀಡಲಾಗಿದೆ. ರಸ್ತೆ, ನೀರಾವರಿ ಯೋಜನೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ.

ಅಗತ್ಯ ವಸ್ತುಗಳ ಉತ್ಪಾದನೆ, ಔಷಧಿ ಉತ್ಪಾದನಾ, ಪ್ಯಾರಾಮೆಡಿಕಲ್ ಉಪಕರಣಗಳ ಉತ್ಪಾದನಾ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಮೆಟ್ರೋ ರೈಲು ಯೋಜನೆ ಕಾಮಗಾರಿ ನಡೆಸಬಹುದಾಗಿದೆ.
ಯಾವುದು ಇರಲ್ಲ..?

ಲಾಕ್ ಡೌನ್ ನಿಯಮಗಳಲ್ಲಿ ಭಾಗಶಃ ಸಡಿಲ ಮಾಡಲಾಗಿದ್ದರೂ ಕೂಡ, ಮದ್ಯ ಮಾರಾಟದ ಮೇಲಿನ ನಿರ್ಬಂಧವನ್ನು ಮುಂದುವರಿಸಲಾಗಿದೆ. ಆರೋಗ್ಯ ಇಲಾಖೆ ಸೂಚಿಸಿದವರು ಕ್ವಾರೆಂಟೈನ್ನಲ್ಲಿರೋದು ಕಡ್ಡಾಯ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಅವರ ಮೇಲೆ IPC ಸೆಕ್ಷನ್ 188ರಡಿ ಕೇಸ್. ಕೊರೊನಾ ಹಾಟ್ಸ್ಪಾಟ್ ಏರಿಯಾಗಳಲ್ಲಿ ಕೇಂದ್ರದ ಗೈಡ್ಲೈನ್ಸ್ ಎಂದಿನಂತೆ ಇರಲಿದೆ.

ಹಾಟ್ಸ್ಪಾಟ್ ಝೋನ್ಗಳಿಗೆ ಪರೀಕ್ಷೆ ಇಲ್ಲದೇ ಪ್ರವೇಶ ಇಲ್ಲ. ರೈಲು, ಬಸ್, ಮೆಟ್ರೋ ಸೇವೆಗಳಿಗೆ ನಿರ್ಬಂಧ ಹೇರಲಾಗಿದ್ದು, ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಲಭ್ಯವಾಗೋದಿಲ್ಲ.

ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಹೊರತು ಪಡಿಸಿ ಅಂತರ್ ರಾಜ್ಯ ಹಾಗೂ ಅಂತರ್ಜಿಲ್ಲಾ ಓಡಾಟಕ್ಕೆ ಅವಕಾಶವಿಲ್ಲ. ಸಾರ್ವಜನಿಕ ವಲಯಗಳಲ್ಲಿ ಕಾಫಿ, ಟೀ ಮಾರುವಂತಿಲ್ಲ.

ಸಿನಿಮಾ ಹಾಲ್, ಬಾರ್, ಪಾರ್ಕ್, ಸ್ವಿಮ್ಮಿಂಗ್ ಪೂಲ್, ಶಾಪಿಂಗ್ ಮಾಲ್ಗಳು ಎಂದಿನಂತೆ ಕ್ಲೋಸ್ ಆಗಿರಲಿದೆ. ಸಾರ್ವಜನಿಕ ಸಭೆ ಸಮಾರಂಭಗಳಿಗಿಲ್ಲ ಅವಕಾಶ, ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು 20 ಜನರಿಗಷ್ಟೇ ಅವಕಾಶ.