2014ರಲ್ಲಿ 1.6 ಬಿಲಿಯನ್, 2020ರಲ್ಲಿ 26 ಬಿಲಿಯನ್ ಡಾಲರ್ ! ಭಾರತ ಮಾರುಕಟ್ಟೆಯಲ್ಲಿ ಚೀನಾ ಹೂಡಿಕೆಯ ಮರ್ಮವೇನು ?

0

ನವದೆಹಲಿ : ಕೊರೊನಾ ಮಹಾಮಾರಿ ವೈರಸ್ ಮೂಲಕ ವಿಶ್ವವನ್ನೇ ನಡುಗಿಸಿರೋ ಚೀನಾ ವಿಶ್ವದ ದೊಡ್ಡಣ್ಣನಾಗೋದಕ್ಕೆ ಹೊರಟಿದೆ. ಭಾರತದ ಶತ್ರು ರಾಷ್ಟ್ರಗಳ ಸಾಲಿನಲ್ಲಿರೋ ಚೀನಾ ಭಾರತೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿದೆ. 2014ರಲ್ಲಿ ಭಾರತೀಯ ಮಾರುಕಟ್ಟೆಯ ವಿವಿಧ ಕಂಪೆನಿಗಳಲ್ಲಿ ಕೇವಲ 1.6 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಚೀನಾ, 2020ರಲ್ಲಿ ಬರೋಬ್ಬರಿ ಹೂಡಿಕೆಯ ಪ್ರಮಾಣವನ್ನು 26 ಬಿಲಿಯನ್ ಡಾಲರ್ ಗೆ ಏರಿಕೆ ಮಾಡಿಕೊಂಡಿದೆ. ಈ ಮೂಲಕ ಭಾರತದ ಮೇಲೂ ಹಿಡಿತ ಸಾಧಿಸೋದಕ್ಕೆ ಪಾಪಿ ಚೀನಾ ಹೊರಟಿದೆ ಅನ್ನೋದು ಆತಂಕವನ್ನು ಸೃಷ್ಟಿಸಿದೆ.

ಹೌದು, ಚೀನಾ ಕೊರೊನಾ ಅನ್ನೋ ವೈರಸ್ ಹುಟ್ಟಿಗೆ ಕಾರಣ ಅಂತಾ ವಿಶ್ವದ ಹಲವು ರಾಷ್ಟ್ರಗಳು ಗಂಭೀರ ಆರೋಪ ಮಾಡುತ್ತಿವೆ. ಚೀನಾ ವುವಾನ್ ನಲ್ಲಿರೋ ಲ್ಯಾಬೋರೇಟರಿಯಲ್ಲಿಯೇ ಕೊರೊನಾ ವೈರಸ್ ಸೃಷ್ಟಿಯಾಯ್ತು ಅನ್ನೋದಕ್ಕೆ ಹಲವು ಸಾಕ್ಷಿಗಳು ದೊರೆತಿವೆ. ವಿಶ್ವ ಆರೋಗ್ಯ ಸಂಸ್ಥೆಯ ಬಾಯಿಯನ್ನೂ ಮುಚ್ಚಿಸಿರೋ ಚೀನಾ ಕೊರೊನಾವನ್ನೇ ನೆಪವಾಗಿಟ್ಟುಕೊಂಡು ವಿಶ್ವದ ರಾಷ್ಟ್ರಗಳನ್ನು ತನ್ನತ್ತ ಸೆಳೆಯುತ್ತಿದೆ.

ಅದ್ರಲ್ಲೂ ದೊಡ್ಡಣ್ಣ ಅಮೇರಿಕಾ, ಸ್ಪೇನ್, ಇಟಲಿ, ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಕೊರೊನಾ ಮಹಾಮಾರಿಯಿಂದ ಬಚಾವ್ ಆಗೋದಕ್ಕೆ ಚೀನಾವನ್ನೇ ಆಶ್ರಯಿಸೋ ಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಕೊರೊನಾ ಆತಂಕದಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಚೀನಾದ ವಸ್ತುಗಳನ್ನು ನಿಷೇಧಿಸೋದಕ್ಕೆ ಹೊರಟು ನಿಂತಿವೆ. ಆದ್ರೆ ಭಾರತದಲ್ಲಿ ಚೀನಾ ಕಳೆದ 6 ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿರೋದು ಆತಂಕ ಮೂಡಿಸಿದೆ.

ಭಾರತದಲ್ಲಿರೋ ಝೊಮ್ಯಾಟೋ, ಬಿಗ್ ಬಾಸ್ಕೇಟ್, ಪೇಟಿಯಂ, ಪ್ಲಿಪ್ ಕಾರ್ಟ್, ಓಲಾ ಕಂಪೆನಿಗಳಲ್ಲಿಯೂ ಚೀನಾ ದಾಖಲೆಯ ಪ್ರಮಾಣದಲ್ಲಿ ಬಂಡವಾಳವನ್ನ ಹೂಡಿಕೆ ಮಾಡಿದೆ. ಈ ಮೂಲಕ ಈಗಾಗಲೇ ಇ ಕಾಮರ್ಸ್ ಕ್ಷೇತ್ರದಲ್ಲಿ ಸಾರ್ಮಭೌಮತ್ವನ್ನು ಸಾಧಿಸೋದಕ್ಕೆ ಹೊರಟು ನಿಂತಿದೆ. ಚೀನಾ ಮೂಲದ ವಿವಿಧ ಕಂಪೆನಿಗಳು ಹೂಡಿಕೆ ಮಾಡಿರೊ ಭಾರತೀಯ ಕಂಪೆನಿಗಳು ಕೂಡ ಲಾಭದಲ್ಲಿಯೇ ಮುನ್ನಡೆಯುತ್ತಿವೆ.

ಕೇವಲ ಇ – ಕಾಮರ್ಸ್ ಕ್ಷೇತ್ರವಷ್ಟೇ ಅಲ್ಲಾ, ಎಂಐ (ರೆಡ್ ಮಿ) ಮೊಬೈಲ್ ಮೂಲಕ ಭಾರತದ ಮೊಬೈಲ್ ಕ್ಷೇತ್ರಕ್ಕೂ ಕಾಲಿಸಿರಿಸಿದ ಚೀನಾ ನಂತರದಲ್ಲಿ ಹುವಾಹಿ, ಒಪ್ಪೋ, ಒನ್ ಪ್ಲಸ್, ವಿವೋ ಸೇರಿದಂತೆ ಹತ್ತಾರು ಚೀನಾ ಮೂಲದ ಕಂಪೆನಿಯ ಮೊಬೈಲ್ ಗಳಿಂದು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಅದ್ಯಾವಾಗಾ ಚೀನಾ ಕಂಪೆನಿಯ ಮೊಬೈಲ್ ಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿತೋ ಆವಾಗ್ಲೆ, ಭಾರತೀಯ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ಬೇರೂರಿದ್ದ ಭಾರತ ಮೂಲದ ಕಂಪೆನಿಗಳು ನಷ್ಟದ ಹಾದಿ ಹಿಡಿಯೋದಕ್ಕೆ ಹೊರಟು ನಿಂತಿವೆ. ಅದ್ರಲ್ಲೂ 2019ರ ಸಪ್ಟೆಂಬರ್ ನಲ್ಲಿ ಅಮೇರಿಕಾ, ಆಸ್ಟ್ರೇಲಿಯಾದ, ಜಪಾನ್ ದೇಶದ ಹುವಾಯಿ ಎಂಬ ಚೀನಾ ಕಂಪೆನಿ 5ಜಿ ಮೊಬೈಲ್ ಸೇವೆ ವಿಸ್ತರಿಸೋದಕ್ಕೆ ಅನುಮತಿ ನಿರಾಕರಿಸಿದ್ದವು. ಆದರೆ ಭಾರತ ಹುವಾಯಿ ಕಂಪೆನಿಗೆ 5ಜಿ ಆರಂಭಿಕ ಕಸರತ್ತಿಗೆ ಅನುಮತಿಯನ್ನು ನೀಡಿರೋದು ವರದಿಯಾಗಿದೆ.

ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಚೀನಾ ಪಾರುಪತ್ಯ ಮೆರೆಯೋದಕ್ಕೆ ಹೊರಟಂತಿದೆ. ದೇಶದ ಖಾಸಗಿ ಸ್ವಾಮ್ಯದ ಪ್ರಮುಖ ಬ್ಯಾಂಕ್ ಆಗಿರೋ ಎಚ್.ಡಿ.ಎಫ್.ಸಿ ಬ್ಯಾಂಕ್ ನ ಷೇರುಗಳನ್ನೂ ಖರೀದಿ ಮಾಡಿದೆ. ಫಾರ್ಮಾ ಹಾಗೂ ತಂತ್ರಜ್ಞಾನ ಆಧಾರಿತ ಕಂಪೆನಿಗಳಲ್ಲೂ ಚೀನಾ ಭಾರತದಲ್ಲಿ ಹೂಡಿಕೆ ಮಾಡಿದೆ. ಇನ್ನು ಭಾರತದ 90 ಸ್ಟಾರ್ಟ್ ಅಪ್ ಗಳಲ್ಲಿಯೂ ಬಂಡವಾಳ ಹೂಡಿಕೆ ಮಾಡಿರೋ ಚೀನಾದ ಕಂಪೆನಿಗಳು ಭಾರತೀಯ ಮಾರುಕಟ್ಟೆಯ ಮೇಲೆ ಹೆಚ್ಚೆಚ್ಚು ಒಲವು ತೋರುತ್ತಿವೆ. ವಿಶ್ವವನ್ನೇ ಆಳೋದಕ್ಕೆ ಹೊರಟಿರೋ ಚೀನಾ ತನ್ನ ದೇಶದ ಕಂಪೆನಿಗಳು ಎಲ್ಲೆಲ್ಲಿ ಹೂಡಿಕೆ ಮಾಡಿವೆ ಎಂಬುವುದಕ್ಕೆ ಚೀನಾದ ಸಚಿವಾಲಯ ಅಧಿಕೃತ ಅಂಕಿ ಸಂಖ್ಯೆಗಳನ್ನು ನಿಖರವಾಗಿ ಇಟ್ಟುಕೊಂಡು ಬರುತ್ತಿವೆ.

ಚೀನಾ ಮೂಲದ ಟಿಕ್ ಟಾಕ್ ಕಂಪೆನಿ ಈಗಾಗಲೇ ಭಾರತದ ಮೇಲೆ ಹಿಡಿತ ಸಾಧಿಸಿದೆ. ಭಾರತದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರೋ ಟಿಕ್ ಟಾಕ್ ಭಾರತೀಯ ಮೂಲದ ಕಂಪೆನಿಗಳಿಗೆ ಸೆಡ್ಡುಹೊಡೆದಿದೆ. ಆದರೆ ಟಿಕ್ ಟಾಕ್ ನಲ್ಲಿ ಯಾರ ಬಗ್ಗೆ ವಿಡಂಬನೆ ಮಾಡಿದ್ರೆ ಅದನ್ನು ಟಿಕ್ ಟಾಕ್ ಆ್ಯಪ್ ನಲ್ಲಿ ಪ್ರಕಟಿಸುತ್ತದೆ. ಆದರೆ ಚೀನಾದ ಕುರಿತು ಯಾರಾದ್ರೂ ವಿಡಂಬನೆ ಮಾಡಿದ್ರೆ ಅದನ್ನು ಪ್ರಕಟಿಸೋದಿಲ್ಲಾ. ಅಷ್ಟರ ಮಟ್ಟಿಗೆ ಚೀನಾ ಟಿಕ್ ಟಾಕ್ ಮೇಲೆ ತನ್ನ ನಿಯಂತ್ರಣವನ್ನು ಹೊಂದಿದೆ.

ಮಾತ್ರವಲ್ಲ ಚೀನಾದ ಖಾಸಗಿ ಕಂಪೆನಿಗಳ ಜೊತೆಗೆ ಚೀನಾ ಸರಕಾರ ನಿಕಟವಾಗಿ ಕೆಲಸ ಮಾಡುತ್ತಿರುವುದು ಬಂಡವಾಳ ಹೂಡಿಕೆಯ ಆತಂಕಕ್ಕೆ ಕಾರಣವಾಗುತ್ತಿದೆ. ಅದ್ರಲ್ಲೂ ಈ ಮೂಲಕ ಭಾರತದಲ್ಲಿರೋ ಸುಮಾರು 92 ಪ್ರಮುಖ ಕಂಪೆನಿಗಳಲ್ಲಿ ಚೀನಾ ಮೂಲದ ಕಂಪೆನಿಗಳು ಅಪಾರ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿರೋದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ.

ಭಾರತದಲ್ಲಿ 2014ರಲ್ಲಿ ಕೇವಲ 1.6 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಚೀನಾ ಕಂಪೆನಿಗಳು ಇದೀಗ 2020ರಲ್ಲಿ ಬರೋಬ್ಬರಿ 26 ಬಿಲಿಯನ್ ಡಾಲರ್ ಹೂಡಿಕೆ ಮಾಡಿರೋದ್ರ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಚೀನಾ ಕೋವಿಡ್ -19 ವಿಷಯದಲ್ಲಿ ಪ್ರಪಂಚದೊಂದಿಗೆ ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ಚೀನಾದ ಖಾಸಗಿ ಕಂಪೆನಿಗಳ ಹೂಡಿಕೆ ಬಗ್ಗೆ ಪರಿಶೀಲನೆ ನಡೆಸಬೇಕಾದ ಅಗತ್ಯತೆ ಬಹಳಷ್ಟಿದೆ. ದೇಶದ ಭದ್ರತೆಯ ದೃಷ್ಟಿಯಿಂದ ಬಂಡವಾಳ ಹೂಡಿಕೆಯನ್ನು ಪುನರ್ ಪರಿಶೀಲನೆ ನಡೆಯದಿದ್ದರೆ ಮುಂದೆ ಅನಾಹುತಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಿದ್ದಾರೆ ಹೂಡಿಕೆ ತಜ್ಞರು.

ಒಟ್ಟಿನಲ್ಲಿ ಕಳೆದ 5 ವರ್ಷಗಳಲ್ಲಿ 1.6 ಬಿಲಿಯನ್ ಡಾಲರ್ 26 ಬಿಲಿಯನ್ ಡಾಲರ್ ಹೂಡಿಕೆ ಏರಿಕೆಯಾಗಿದ್ದೆ ಈಗ ಭಾರತದಲ್ಲಿ ಸದ್ಯ ಚರ್ಚೆಯಲ್ಲಿರುವ ಬಹುದೊಡ್ಡ ಅಂಶ. ಕೊರೊನಾ ವಿಚಾರದಿಂದಲೇ ವಿಶ್ವದ ಬಹುತೇಕ ರಾಷ್ಟ್ರಗಳು ಚೀನಾವನ್ನು ನಂಬದ ಸ್ಥಿತಿಗೆ ತಲುಪಿರುವಾಗ ಭಾರತೀಯ ಮಾರುಕಟ್ಟೆಯಲ್ಲಿ ಚೀನಾದ ಕಂಪೆನಿಗಳು ಹೂಡಿಕೆ ಮಾಡುತ್ತಿರೋದು ಭವಿಷ್ಯದಲ್ಲಿ ಭಾರತಕ್ಕೆ ಮುಳುವಾಗೋ ಸಾಧ್ಯತೆಯಿದೆ.

Leave A Reply

Your email address will not be published.