Omicron Covid-19 :ಕೋವಿಡ್ 19 ಮೊದಲ ಹಾಗೂ ಎರಡನೆ ಅಲೆಗಳ ಸಂದರ್ಭದಲ್ಲಿ ಸೋಂಕಿಗೆ ಒಳಗಾದವರು ಸಾಮಾನ್ಯವಾಗಿ ವಾಸನೆ ಹಾಗೂ ರುಚಿ ಕಳೆದುಕೊಳ್ಳುವಂತಹ ಲಕ್ಷಣವನ್ನು ಹೊಂದಿದ್ದರು. ಈ ರೀತಿಯ ಲಕ್ಷಣ ಕಂಡು ಬಂತು ಅಂದರೆ ಸಾಕು ಕೊರೊನಾ ಸೋಂಕು ಅಂತಲೇ ಹೇಳಲಾಗುತ್ತಿತ್ತು. ಆದರೆ ಪ್ರಸ್ತುತ ಇರುವ ಓಮಿಕ್ರಾನ್ ರೂಪಾಂತರಿಯ ಸೋಂಕನ್ನು ಹೊಂದಿರುವವರಿಗೆ ರುಚಿ ಹಾಗೂ ವಾಸನೆಯನ್ನು ಕಳೆದುಕೊಳ್ಳುವ ಲಕ್ಷಣ ಪತ್ತೆಯಾಗಿಲ್ಲ ಎಂದು ವೈದ್ಯಕೀಯ ತಜ್ಞರು ಮಾಹಿತಿ ನೀಡಿದ್ದಾರೆ.
ಓಮಿಕ್ರಾನ್ ರೂಪಾಂತರಿಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಮಹಾರಾಷ್ಟ್ರದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ವೈರಸ್ ತನ್ನ ಗುಣಲಕ್ಷಣಗಳನ್ನು ಬದಲಾಯಿಸುತ್ತಾ ಹೋಗುತ್ತದೆ. ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ. ಯಾವುದೇ ಸಂದರ್ಭದಲ್ಲಿ ಯಾವುದೇ ಲಕ್ಷಣಗಳು ಗೋಚರವಾದರೂ ಸಹ ಶೀಘ್ರದಲ್ಲೇ ವೈದ್ಯರನ್ನು ಸಂಪರ್ಕಿಸಿ. ಅದನ್ನು ಹೊರತುಪಡಿಸಿ ನೀವೇ ಚಿಕಿತ್ಸೆಯನ್ನು ಮಾಡಿಕೊಳ್ಳಲು ಮುಂದಾಗುವುದು ಸುರಕ್ಷಿತವಲ್ಲ. ಮಾಸ್ಕ್ ಧರಿಸುವುದು , ಸಾಮಾಜಿಕ ಅಂತರ ಕಾಪಾಡುವುದು ಇವೆಲ್ಲವೂ ಅತ್ಯಂತ ಅವಶ್ಯಕವಾಗಿದೆ. ಇನ್ನೂ ಲಸಿಕೆಗೆ ಹಾಕಿಸಿಕೊಳ್ಳದವರು ಕೂಡಲೇ ನಿಮ್ಮ ಲಸಿಕೆ ಸ್ವೀಕರಿಸಿ ಎಂದು ಐಎಂಎ -ಎಂಎಸ್ ಅಧ್ಯಕ್ಷ ಡಾ. ಸುಹಾಸ್ ಪಿಂಗಳೆ ಹೇಳಿದ್ದಾರೆ.
ಮೊದಲ ಹಾಗೂ ಎರಡನೇ ಅಲೆಗಳಿಗೆ ಹೋಲಿಕೆ ಮಾಡಿದರೆ ಮೊದಲ ಅಲೆಯು ವಿಭಿನ್ನವಾಗಿ ಇರಲಿದೆ. ಡೆಲ್ಟಾ ರೂಪಾಂತರಿಯು ಎರಡನೇ ಅಲೆಯನ್ನು ಅತ್ಯಂತ ಭೀಕರಗೊಳಿಸಿತ್ತು. ಆದರೆ ಅದೃಷ್ಟವಶಾತ್ ಓಮಿಕ್ರಾನ್ ರೂಪಾಂತರಿಯು ಅತ್ಯಂತ ವೇಗವಾಗಿ ಹರಡುತ್ತಿದ್ದರೂ ಸಹ ಡೆಲ್ಟಾ ರೂಪಾಂತರಿಯಷ್ಟು ಭೀಕರತೆಯನ್ನು ತೋರುತ್ತಿಲ್ಲ. ಜ್ವರ, ಗಂಟಲು ನೋವು, ನೆಗಡಿ, ಸುಸ್ತು, ಆಯಾಸ, ಬೆನ್ನು ನೋವು, ತಲೆನೋವು ಓಮಿಕ್ರಾನ್ ರೂಪಾಂತರಿಯ ಲಕ್ಷಣವಾಗಿದೆ ಎಂದು ಐಎಂಎ-ಎಂಎಸ್ ಹೇಳಿದೆ.
ರುಚಿ ಹಾಗೂ ವಾಸನೆಯ ಗ್ರಹಿಕೆ ಕಳೆದುಕೊಳ್ಳುವುದು ಮೊದಲ ಹಾಗೂ ಎರಡನೆ ಅಲೆಯ ಸಂದರ್ಭದಲ್ಲಿ ಸಾಮಾನ್ಯ ಲಕ್ಷಣವೆಂದು ಪರಿಗಣಿಸಲಾಗಿತ್ತು. ಆದರೆ ಓಮಿಕ್ರಾನ್ ರೂಪಾಂತರಿಯಲ್ಲಿ ಇದು ಕಂಡುಬರುತ್ತಿಲ್ಲ. ಇದೊಂದು ಸೌಮ್ಯ ಸ್ವಭಾವದ ರೂಪಾಂತರಿ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಸಹ ನಾವಿದನ್ನು ಲಘುವಾಗಿ ಪರಿಗಣಿಸುವಂತಿಲ್ಲ. ವೈರಸ್ಗಳು ತಮ್ಮ ಗುಣಲಕ್ಷಣಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಹೀಗಾಗಿ ನಾವು ಆದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಐಎಂಎ ಎಂಎಸ್ ಮಾಹಿತಿ ನೀಡಿದೆ.
Loss of taste and smell not noted in Omicron Covid-19 cases: IMA
ಇದನ್ನು ಓದಿ : Vaishno Devi Stampede : ವೈಷ್ಣೋದೇವಿ ಭವನದ ಕಾಲ್ತುಳಿತದಲ್ಲಿ 12 ಮಂದಿ ಸಾವು
ಇದನ್ನೂ ಓದಿ : new Order : ಕೊರೊನಾ ಸೋಂಕಿನ ಲಕ್ಷಣವಿಲ್ಲದ ರೋಗಿಗಳನ್ನು ಡಿಸ್ಚಾರ್ಜ್ ಮಾಡಿ: ಸುಲಿಗೆ ತಡೆಯಲು ಆರೋಗ್ಯ ಇಲಾಖೆ ಆದೇಶ