Kajal Aggarwal : ಹೊಸವರ್ಷದಂದು ಶುಭಸುದ್ದಿ ಹಂಚಿಕೊಂಡ ಕಾಜಲ್​ ಅಗರ್ವಾಲ್​ ದಂಪತಿ

ನಟಿ ಕಾಜಲ್​​ ಅಗರ್ವಾಲ್ (Kajal Aggarwal)​​ ಹಾಗೂ ಅವರ ಪತಿ ಗೌತಮ್​ ಕಿಚ್ಲು ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಹೊಸ ವರ್ಷದ ಪ್ರಯುಕ್ತ ಪತ್ನಿಯ ಫೋಟೋವನ್ನು ಶೇರ್​ ಮಾಡಿದ್ದ ಗೌತಮ್​ ಕಿಚ್ಲು ಈ ಶುಭಸುದ್ದಿಯನ್ನು ಹಂಚಿಕೊಂಡಿದ್ದಾರೆ.


2022 ನಿನ್ನನ್ನು ನೋಡುತ್ತಿದ್ದೇವೆ ಎಂದು ಫೋಟೋಗೆ ಶೀರ್ಷಿಕೆ ನೀಡಿರುವ ಗೌತಮ್​ ಕಿಚ್ಲು ಶೀರ್ಷಿಕೆಯಲ್ಲಿ ಗರ್ಭಿಣಿಯ ಇಮೋಜಿಯನ್ನು ಹಾಕಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ದಂಪತಿ ಶುಭಸುದ್ದಿಯನ್ನು ನೀಡಿದೆ. ನಟಿ ಕಾಜಲ್ ಅಗರ್​ವಾಲ್​​ ಹಾಗೂ ಉದ್ಯಮಿ ಗೌತಮ್​ ಕಿಚ್ಲು ದಂಪತಿ ಕೆಲ ದಿನಗಳ ಹಿಂದಷ್ಟೇ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.


ಗೌತಮ್​ ಕಿಚ್ಲು ಅವರ ಈ ಪೋಸ್ಟ್​ ನೋಡುತ್ತಿದ್ದಂತೆಯೇ ಕಾಜಲ್​ ಅಭಿಮಾನಿಗಳು ಕಮೆಂಟ್​ ಬಾಕ್ಸಿನಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಫೋಟೋ ಪೋಸ್ಟ್​ ಮಾಡುವ ಮುನ್ನ ಗೌತಮ್​ ಪತ್ನಿ ಕಾಜಲ್​ ಜೊತೆ ನಿಂತಿರುವ ಅದ್ಭುತ ಫೋಟೋವೊಂದನ್ನು ಹಂಚಿಕೊಂಡು ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಎಲ್ಲರಿಗೂ ಆರೋಗ್ಯ, ಶಾಂತಿ ಹಾಗೂ ಪ್ರೀತಿ ಸಿಗಲೆಂದು ಶುಭ ಕೋರಿದ್ದಾರೆ.


ಆದರೆ ಈ ಶುಭಸುದ್ದಿಯ ಬಗ್ಗೆ ನಟಿ ಕಾಜಲ್​ ಅರ್ಗವಾಲ್​ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.ಕಾಜಲ್​ ತಮ್ಮ ಇನ್​ಸ್ಟಾಗ್ರಾಂ ಹ್ಯಾಂಡಲ್​ನಲ್ಲಿ ಪತಿಯೊಂದಿಗಿನ ಫೋಟೋ ಶೇರ್​ ಮಾಡಿ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ಗೌತಮ್​ ಕಿಚ್ಲು ಅವರ ಪೋಸ್ಟ್​ ಮಾತ್ರ ಅಭಿಮಾನಿಗಳಿಗೆ ಕಾಜಲ್​ ಗರ್ಭಿಣಿ ಇರಬಹುದು ಎಂಬುದನ್ನು ಊಹಿಸುವಂತೆ ಮಾಡಿದೆ.


ಬಹುಭಾಷಾ ನಟಿ ಕಾಜಲ್​ ಅಗರ್​ವಾಲ್​ ಹಾಗೂ ಉದ್ಯಮಿ ಗೌತಮ್​ ಕಿಚ್ಲು 2020ರ ಅಕ್ಟೋಬರ್​ 30ರಂದು ಮುಂಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

Kajal Aggarwal and husband Gautam Kitchlu set to become parents: ‘Here’s looking at you 2022’

ಇದನ್ನು ಓದಿ : Liger :ಲೈಗರ್ ಅವತಾರದಲ್ಲಿ ಗೀತಗೋವಿಂದಂ ಹೀರೋ : ಟೀಸರ್ ನಲ್ಲಿ ಮಿಂಚಿದ ವಿಜಯ್ ದೇವರಕೊಂಡ

ಇದನ್ನೂ ಓದಿ : Happy New Year 2022: ಶೇ. 90ರಷ್ಟು ಕನ್ನಡ ಚಿತ್ರಗಳಿಗೆ ಹಾಕಿದ ಹಣ ವಾಪಸ್; ಈವರ್ಷ ಕನ್ನಡ ಸಿನಿಮಾಗಳ ಭವಿಷ್ಯವೇನು?

Comments are closed.