Mask Rules Cancel : ಸದ್ಯದಲ್ಲೇ ರಾಜ್ಯದಲ್ಲಿ ರದ್ದಾಗುತ್ತಾ ಮಾಸ್ಕ್ ಕಡ್ಡಾಯ ಆದೇಶ : ಆರೋಗ್ಯ ಸಚಿವರು ಹೇಳಿದ್ದೇನು ?

ಬೆಂಗಳೂರು : ಕೊರೋನಾ ಮೂರನೇ ಅಲೆ ತಗ್ಗುತ್ತಿದ್ದಂತೆ ಜನರು ರೋಗದ ಆತಂಕವನ್ನೇ ಮರೆಯ ಮುನ್ನುಗ್ಗುತ್ತಿದ್ದಾರೆ. ಬಹುತೇಕರು ಮಾಸ್ಕ್ ಗೆ ಗುಡ್ ಬೈ ಹೇಳಿದ್ದಾರೆ. ಹಲವು ರಾಜ್ಯಗಳು ಈಗಾಗಲೇ ಮಾಸ್ಕ್ ಕೂಡ ರದ್ದು ಮಾಡಿದೆ. ಹೀಗಾಗಿ ರಾಜ್ಯದಲ್ಲೂ ಮಾಸ್ಕ್ ರದ್ದಾಗುತ್ತಾ (Mask Rules Cancel) ಅನ್ನೋ ಸುದ್ದಿ ಸದ್ದು ಮಾಡಲಾರಂಭಿಸಿದೆ. ಈ ಮಧ್ಯೆ ರಾಜ್ಯದಲ್ಲೂ ಮಾಸ್ಕ್ ರದ್ದು ಮಾಡೋ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದ್ದು, ಈ ಕುರಿತು ಆರೋಗ್ಯ ಇಲಾಖೆಯೊಂದಿಗೆ ಸಚಿವ ಡಾ. ಸುಧಾಕರ್ ಚರ್ಚೆ ನಡೆಸಿದ್ದಾರೆ.

Mask Rules Cancel in Karnataka, what Says Health Minister Dr.K.Sudhakar
ಸಾಂದರ್ಭಿಕ ಚಿತ್ರ

ಈಗಾಗಲೇ ಮಹಾರಾಷ್ಟ್ರ, ದೆಹಲಿ, ಹರಿಯಾಣದಲ್ಲಿ ಮಾಸ್ಕ್ ರದ್ದು ಮಾಡಲಾಗಿದೆ. ಪ್ರಸ್ತುತ ಕರ್ನಾಟಕದಲ್ಲೂ ಕೋವಿಡ್ ಇಳಿಮುಖವಾಗಿದೆ. ನಿನ್ನೆಗೆ ಕೇವಲ 50 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ರಾಜ್ಯದಲ್ಲಿ ಕೋವಿಡ್ ಇಳಿಮುಖವಾಗಿರೋ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ ಆದೇಶವನ್ನು ಹಿಂಪಡೆಯೋ ಸಾಧ್ಯತೆ ಇದೆ.

Mask Rules Cancel in Karnataka, what Says Health Minister Dr.K.Sudhakar
ಆರೋಗ್ಯ ಸಚಿವ ಡಾ..ಸುಧಾಕರ್‌

ಮಾಸ್ಕ್ ರದ್ದತಿಗೆ (Mask Rules Cancel) ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿಕೆ ನೀಡಿದ್ದು, ಮೂರು ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯ ರದ್ದು ಮಾಡಲಾಗಿದೆ. ವಿಶ್ವದಲ್ಲಿ ನಾಲ್ಕನೆ ಅಲೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ನಮ್ಮಲ್ಲಿ ಶೇ. 90 ರಷ್ಟು ಜನ ಮಾಸ್ಕ್ ಹಾಕ್ತಾನೆ ಇಲ್ಲ ನಾವೂ ಕೂಡ ಅವರುಗಳ ಮೇಲೆ ಕೇಸ್ ಹಾಕ್ತಾ ಇಲ್ಲ, ಮಾಸ್ಕ್ ರದ್ದು ಮಾಡಿರೋ ಬಗ್ಗೆ ನಾವೇನೂ ಅಧಿಕೃತ ಆದೇಶ ಮಾಡಿಲ್ಲ ಎಂದಿದ್ದಾರೆ ‌

Mask Rules Cancel in Karnataka, what Says Health Minister Dr.K.Sudhakar
ಪ್ರಾತಿನಿಧಿಕ ಚಿತ್ರ

ಅಲ್ಲದೇ ಕರ್ನಾಟಕದಲ್ಲೂ ಮಾಸ್ಕ್ ಕಡ್ಡಾಯ ರದ್ದು ವಿಚಾರವಾಗಿ ಸಮಾಲೋಚನೆ ನಡೆಸುತ್ತೆವೆ. ಟಾಸ್ಕ್ ಪೋರ್ಸ್ ಮತ್ತು ಸಿಎಂ ಜೊತೆ ಚರ್ಚೆ ನಡೆಸಿ ಸದ್ಯದಲ್ಲೆ ನಿರ್ಧಾರ ಕೈಗೊಳ್ಳ ಲಾಗುವುದು ಎಂದು ಡಾ.ಸುಧಾಕರ್ ಹೇಳಿದ್ದಾರೆ. ಈಗಾಗಲೇ ಒಮಿಕ್ರಾನ್ ಹೊಸತಳಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಈ ಬಗ್ಗೆ ನಾವು ಅನೇಕರ ಬಳಿ ಸಂಪರ್ಕದಲ್ಲಿ ಇದ್ದೇವೆ. ಜಿನೋಮಿಕ್ ಸ್ವೀಕ್ವೆನ್ಸ್ ಟೆಸ್ಟ್ ಬಗ್ಗೆ ಐಸಿಎಂಆರ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

Mask Rules Cancel in Karnataka, what Says Health Minister Dr.K.Sudhakar

ಹೀಗಾಗಿ ಸದ್ಯದಲ್ಲೇ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಮಾಸ್ಕ್ ಬ್ಯಾನ್ (Mask Rules Cancel) ಆಗಲಿದೆ ಎನ್ನಲಾಗುತ್ತಿದ್ದು, ಅಧಿಕೃತ ಆದೇಶಕ್ಕೆ ಕಾಯಲಾಗುತ್ತಿದೆ. ಮೂರನೇ ಅಲೆಯ ಬಳಿಕ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಕುಸಿತ ಕಂಡಿದ್ದು ಸದ್ಯ ರಾಜ್ಯದ ಒಟ್ಟು ಪ್ರಕರಣಗಳು ಗಡಿದಾಟಿಲ್ಲ. ಹೀಗಾಗಿ ಬಿರು ಬೇಸಿಗೆಯ ಈ ಹೊತ್ತಿನಲ್ಲಿ ಜನರಿಗೆ ಮಾಸ್ಕ್ ನಿಂದ ಮುಕ್ತಿ‌ ನೀಡಬೇಕೆಂಬ ಆಗ್ರಹವೂ ಜನ ರಿಂದಲೇ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : ಕೊರೋನಾ ಸಂತ್ತಸ್ಥ ಕುಟುಂಬಕ್ಕೆ ಸರ್ಕಾರದ ನೆರವು : ಪರಿಹಾರದ ಚೆಕ್ ನಿರಾಕರಿಸಿದ ಸಾವಿರಕ್ಕೂ ಅಧಿಕ ಕುಟುಂಬಸ್ಥರು

ಇದನ್ನೂ ಓದಿ : Wife Murder : ಪ್ರೀತಿಸಿ ಮದುವೆಯಾದ 4 ತಿಂಗಳಲ್ಲೇ ಪತ್ನಿಯ ಕೊಂದ ಪತಿ

Mask Rules Cancel in Karnataka, what Says Health Minister Dr.K.Sudhakar

Comments are closed.