ಸೋಮವಾರ, ಏಪ್ರಿಲ್ 28, 2025
HomeCorona UpdatesAnitha Kumaraswamy: ಶಾಸಕಿ ಅನಿತಾ ಕುಮಾರಸ್ವಾಮಿಗೆ ಕೊರೊನಾ ಸೋಂಕು ಧೃಡ

Anitha Kumaraswamy: ಶಾಸಕಿ ಅನಿತಾ ಕುಮಾರಸ್ವಾಮಿಗೆ ಕೊರೊನಾ ಸೋಂಕು ಧೃಡ

- Advertisement -

ಬೆಂಗಳೂರು : ಕೊರೊನಾ ಮೂರನೇ ಅಲೆಯ ಹೊಸ್ತಿಲಿನಲ್ಲಿ ಇರುವಾಗಲೇ ರಾಜ್ಯದಲ್ಲಿ ಕೊರೊನಾ ದೈನಂದಿನ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಸಾಕಷ್ಟು ಸಚಿವರು,ಶಾಸಕರು ಸಹ ಸೋಂಕಿಗೆ ಒಳಗಾಗಿದ್ದ ಐಸೋಲೇಷನ್​​ನಲ್ಲಿದ್ದಾರೆ ಇದೀಗ ಈ ಸಾಲಿಗೆ ಶಾಸಕಿ ಅನಿತಾ ಕುಮಾರ ಸ್ವಾಮಿ (Anitha Kumaraswamy) ಕೂಡ ಸೇರಿದ್ದು ಅವರ ಕೋವಿಡ್​ ವರದಿ ಪಾಸಿಟಿವ್​ ಬಂದಿದೆ.


ಶಾಸಕಿ ಅನಿತಾ ಕುಮಾರಸ್ವಾಮಿಯವರಿಗೆ ಕೊರೊನಾ ಸೋಂಕು ಧೃಡಪಡುತ್ತಿದ್ದಂತೆಯೇ ಮನೆಯಲ್ಲಿಯೇ ಅವರಿಗೆ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ನಿವಾಸದಲ್ಲಿಯೇ ಶಾಸಕಿ ಅನಿತಾ ಕುಮಾರಸ್ವಾಮಿ ಕೋವಿಡ್​ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.


ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 28,733 ಕೋವಿಡ್ ವರದಿಗಳು ಪಾಸಿಟಿವ್​ ಬಂದಿದೆ. ಇದರಲ್ಲಿ ಶೇಕಡಾ 70 ರಷ್ಟು ದೈನಂದಿನ ಪ್ರಕರಣವು ರಾಜ್ಯ ರಾಜಧಾನಿ ಬೆಂಗಳೂರಿನಿಂದಲೇ ವರದಿಯಾಗಿದೆ. ಕೊರೊನಾ ತಡೆಗೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರವು ಕೋವಿಡ್​ ಮಾರ್ಗಸೂಚಿಗಳು ಈ ತಿಂಗಳ ಅಂತ್ಯದವರೆಗೂ ಮುಂದೂಡಿಕೆಯಾಗಲಿದೆ ಎಂದು ಹೇಳಿದೆ.

ದೇಶದಲ್ಲಿ ಒಂದೇ ದಿನ 2.68 ಲಕ್ಷ ಮಂದಿಗೆ ಕೊರೊನಾ ಪಾಸಿಟಿವ್​

ದೇಶದಲ್ಲಿ ಕೊರೊನಾ ಆರ್ಭಟ ಮಿತಿಮೀರಿದೆ. ಒಂದೇ ದಿನದಲ್ಲಿ ದೇಶದಲ್ಲಿ 2,68,833 ಹೊಸ ಪ್ರಕರಣಗಳು ವರದಿಯಾಗಿವೆ. ಇದರ ಜೊತೆಯಲ್ಲಿ ಕಳೆದ 24 ಗಂಟೆಗಳಲ್ಲಿ 402 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ಮೂಲಕ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 4,85,752ಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಪಾಸಿಟಿವಿಟಿ ದರ 14.7 ಪ್ರತಿಶತದಿಂದ 16.66 ಪ್ರತಿಶತಕ್ಕೆ ಏರಿಕೆ ಕಂಡಿದೆ. ಕಳೆದ 24 ಗಂಟೆಗಳಲ್ಲಿ 1,22,684 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ದೇಶದಲ್ಲಿ ಪ್ರಸ್ತುತ 14,17,820 ಸಕ್ರಿಯ ಪ್ರಕರಣಗಳು ಇವೆ. ದೇಶದಲ್ಲಿ ಓಮಿಕ್ರಾನ್​ ಪ್ರಕರಣಗಳ ಸಂಖ್ಯೆ 6,041ಕ್ಕೆ ಏರಿಕೆ ಕಂಡಿದೆ.


ಇತ್ತ ಮುಂಬೈನಲ್ಲಿ ಶುಕ್ರವಾರ 11,317 ದೈನಂದಿನ ಪ್ರಕರಣಗಳು ವರದಿಯಾಗಿವೆ.ಈ ಮೂಲಕ ಪಾಸಿಟಿವಿಟಿ ದರದಲ್ಲಿ 21.7 ಶೇಕಡಾದಿಂದ 20 ಪ್ರತಿಶತಕ್ಕೆ ಇಳಿಕೆ ಕಂಡಿದೆ. ಶುಕ್ರವಾರ ಮುಂಬೈನಲ್ಲಿ 54,924 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಇನ್ನು ದೆಹಲಿಯಲ್ಲಿ ಶುಕ್ರವಾರ 24,383 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ.


ಈ ನಡುವೆ ಭಾರತವು ಕೋವಿಡ್​ 19 ಮೂರನೇ ಅಲೆ ಹೊಸ್ತಿಲಲ್ಲಿದೆ. ಏತನ್ಮಧ್ಯೆ ಕೇಂದ್ರ ಸರ್ಕಾರ ಬಜೆಟ್​ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್​ ಮಾಡಿದೆ. ಕೋವಿಡ್​ 19 ಮಾರ್ಗಸೂಚಿಗಳನ್ನು ಪಾಲಿಸುತ್ತಾ 24 ಸಾವಿರ ಜನರು ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

MLA Anitha Kumaraswamy tests corona positive

ಇದನ್ನು ಓದಿ : Covid-19 Updates : ಕರ್ನಾಟಕದಲ್ಲಿಂದು 28723 ಮಂದಿಗೆ ಕೊರೊನಾ : ಮೈಸೂರು, ದ.ಕ, ಉಡುಪಿಯಲ್ಲಿ ದಾಖಲೆಯ ಕೇಸ್‌

ಇದನ್ನೂ ಓದಿ : Karnataka extends Covid rules :ಕೋವಿಡ್​ ಮಾರ್ಗಸೂಚಿ ಪಾಲನೆ ಅವಧಿ ವಿಸ್ತರಿಸಿದ ರಾಜ್ಯ ಸರ್ಕಾರ

RELATED ARTICLES

Most Popular