New Plans for Better Lifestyle: 2022ರ ಪ್ಲಾನ್ ಏನು: ಇಲ್ಲಿವೆ ಸಿಂಪಲ್ ಆಗಿ ಮಾಡಬಹುದಾದ 8 ಟಿಪ್ಸ್

ಹೊಸ ವರ್ಷ 2022(New Year-2022)ಕ್ಕೆ ಕಾಲಿಟ್ಟು ಎರಡು ವಾರಗಳು ಕಳೆದವು. ಸಾಕಷ್ಟು ಮಂದಿ ಹೊಸ ವರ್ಷಕ್ಕೆ ಎಂದು ನೂರಾರು ಪ್ಲಾನ್ (New Plans for Better Lifestyle) ಮಾಡಿರುತ್ತಾರೆ. ಯಾವುದಾದರೂ ಒಳ್ಳೆ ಟೂರಿಸ್ಟ್ ಪ್ಲೇಸ್ ವಿಸಿಟ್ ಮಾಡುವುದು, ಜಾಬ್, ಫುಡ್, ವೇಯ್ಟ್ ಲಾಸ್, ಡಯೆಟ್, ಹೀಗೆ ಒಬ್ಬೊಬ್ಬರದ್ದು ಒಂದೊಂದು ರಿಸೊಲ್ಯೂಷನ್ ಇರುತ್ತದೆ. ಹೆಲ್ತ್ ಕೋಚ್ ಸಿಮ್ರನ್ ಚೋಪ್ರಾ “ಹೆಚ್ಚು ಒತ್ತಡವನ್ನು ಅನುಭವಿಸದೆ ನಿಮ್ಮ ದೊಡ್ಡ ಗುರಿಗಳ ಕಡೆಗೆ ಕೆಲಸ ಮಾಡಿ. ಮತ್ತು ಕಡಿಮೆ-ಒತ್ತಡದಲ್ಲಿ ನಿಮ್ಮ ಬಗ್ಗೆ ಹೊಸದನ್ನು ಕಲಿಯೀರಿ. ಇದು ನಿಜವಾಗಿಯೂ ನಿಮ್ಮನ್ನು ಗೆಲುವಿನ ಕಡೆ ಕೊಂಡೊಯ್ಯುತ್ತದೆ , ”ಎಂದು ಹೇಳಿದರು. ಜೊತೆಗೆ ಹೊಸ ವರ್ಷ 2022 ರಲ್ಲಿ ಸಂಯೋಜಿಸಲು 8 ಜೀವನಶೈಲಿ(Lifestyle) ಅಭ್ಯಾಸಗಳನ್ನು ಸೂಚಿಸಿದರು.

  1. ನಿಮ್ಮ ದೈನಂದಿನ ಆಹಾರದಲ್ಲಿ ತರಕಾರಿಗಳನ್ನು ಸೇರಿಸಿ – ಪ್ರತಿದಿನ ನಿಮ್ಮ ಊಟದಲ್ಲಿ ತರಕಾರಿಗಳನ್ನು ಸೇರಿಸುವುದು ಬಹಳ ಮುಖ್ಯ. ತರಕಾರಿಗಳು ಪೋಷಕಾಂಶಗಳು ಮತ್ತು ರೋಗ ನಿರೋಧಕಗಳಿಂದ ತುಂಬಿರುತ್ತವೆ, ಇದು ನಿಮಗೆ ಆರೋಗ್ಯಕರವಾಗಿರಲು ಮತ್ತು ರೋಗವನ್ನು ತಡೆಯಲು ಸಹಾಯ ಮಾಡುತ್ತದೆ. ಮತ್ತು ಅವುಗಳ ಕಡಿಮೆ ಕ್ಯಾಲೋರಿ ಅಂಶದಿಂದಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಪ್ರತಿದಿನ 2 ಕಪ್ ತರಕಾರಿಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.
  2. ಪ್ರತಿದಿನ 2-3 ಲೀಟರ್ ನೀರು ಕುಡಿಯಿರಿ – ನೀರಿನಂಶ ಕಡಿಮೆ ಆದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮ್ಮ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಒಟ್ಟಾರೆ ಆರೋಗ್ಯಕ್ಕಾಗಿ ನೀವು ಮಾಡಬಹುದಾದ ಅತ್ಯುತ್ತಮ ಕೆಲಸಗಳಲ್ಲಿ ಇದು ಒಂದಾಗಿದೆ. ಪ್ರತಿನಿತ್ಯ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯಿರಿ. ಹಾಗೆ ವೈದ್ಯರ ಪ್ರಕಾರ ಪ್ರತಿ ದಿನ ಮಿನಿಮಮ್ 8 ಗ್ಲಾಸ್ ನೀರು ಕುಡಿಯುವುದು ಅತಿ ಅಗತ್ಯವಾಗಿದೆ.
    3.ಉತ್ತಮ ನಿದ್ರೆಯ ಶೆಡ್ಯೂಲ್ ರೂಢಿಸಿ -ಸರಿಯಾದ ನಿದ್ರೆ ನಿಮ್ಮ ಹಸಿವು, ಮನಸ್ಥಿತಿ, ಹಾರ್ಮೋನುಗಳು ಮತ್ತು ಸಾಮಾನ್ಯ ಯೋಗಕ್ಷೇಮ ಸೇರಿದಂತೆ ನಿಮ್ಮ ಜೀವನದ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ದಿನಕ್ಕೆ 6ರಿಂದ 8 ಗಂಟೆಗಳ ನಿದ್ದೆ ಅತಿ ಅಗತ್ಯವಾಗಿದೆ. ಜೊತೆಗೆ ಅತಿ ನಿದ್ರೆಯೂ ಒಳ್ಳೆಯದಲ್ಲ.
  3. ನಿಮ್ಮ ಆಯ್ಕೆಯ 30 ನಿಮಿಷಗಳ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ – ದಿನಕ್ಕೆ 30 ನಿಮಿಷಗಳಷ್ಟು ಕಡಿಮೆ ಚಟುವಟಿಕೆಯು ಹೃದಯರಕ್ತನಾಳದ ಆರೋಗ್ಯ, ಹಾರ್ಮೋನ್ ಆರೋಗ್ಯ ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. ನೀವು ಎಕ್ಸರ್ಸೈಸ್ ಮಾಡಲು ಸಾಧ್ಯವಾಗದಿದ್ದರೆ ನೀವು ನೃತ್ಯ ಮಾಡಲು, ವಾಕ್ ಮಾಡಲು ಆಯ್ಕೆ ಮಾಡಬಹುದು.
  4. ಡಿ ಸ್ಟ್ರೆಸ್ ಮಾಡಿ: ಕೆಲಸದ ನಡುವೆ ಒತ್ತಡ ಇದ್ದೆ ಇರುತ್ತದೆ. ಇದು ಮಾನಸಿಕ ನೆಮ್ಮದಿ ಇಲ್ಲದಂತೆ ಮಾಡುತ್ತದೆ. ಹಾಗಾಗಿ ಪ್ರತಿ ನಿತ್ಯ 10 ನಿಮಿಷ ಧ್ಯಾನ ಮಾಡಿ. ಇದು ಶಾಂತಿ ಹಾಗೂ ನೆಮ್ಮದಿ ಸಿಗುವಂತೆ ಮಾಡುತ್ತದೆ.
  5. ಅಗತ್ಯವಿದ್ದಾಗ ಸಹಾಯಕ್ಕಾಗಿ ಕೇಳಿ – ಸಹಾಯ ಕೇಳುವುದು ದೌರ್ಬಲ್ಯದ ಸಂಕೇತವಲ್ಲ. ಇದು ಯಾರಿಗೂ ತೊಂದರೆ ಕೊಡುವುದಿಲ್ಲ. ಜನರು ಅದನ್ನು ಕೇಳಿದರೆ ಸಹಾಯವನ್ನು ನೀಡಲು ಸಿದ್ಧರಿರುತ್ತಾರೆ ಆದರೆ ನಾವು ಯಾರೊಬ್ಬರ ಸಹಾಯವನ್ನ ಕೇಳಲು ಹಿಂಜರಿಯುತ್ತೇವೆ. ಅದರ ಬದಲು ನಾವು ಅಗತ್ಯವಿದ್ದಾಗ ಸಹಾಯ ಪಡೆದು, ಇತರರಿಗೂ ಸಹಾಯ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು.
  6. ನಿಮ್ಮ ದಿನ ಅಥವಾ ವಾರದಲ್ಲಿ ನೀವು ಆನಂದಿಸುವ ಒಂದು ವಿಷಯವನ್ನು ಸೇರಿಸಿ – ನಿಮಗೆ ಸಂತೋಷವನ್ನುಂಟುಮಾಡುವ ಹೆಚ್ಚಿನ ಕೆಲಸಗಳನ್ನು ಮಾಡಿ. ಉದಾ: ಕೂಕಿಂಗ್, ಡ್ಯಾನ್ಸ್, ಡ್ರಾಯಿಂಗ್, ಓದುವುದು, ಹಾಡುವುದು ಇತ್ಯಾದಿ.
  7. ಮಲಗುವ ಸಮಯಕ್ಕೆ 30 ನಿಮಿಷಗಳ ಮೊದಲು, ಯಾವುದೇ ಗ್ಯಾಜೆಟ್‌ಗಳು ಬಳಸುವುದನ್ನು ತಪ್ಪಿಸಿ – ನಮ್ಮಲ್ಲಿ ಅನೇಕರಿಗೆ ಮಲಗುವ ಸಮಯದ ಮುನ್ನ ಮೊಬೈಲ್, ಟಿವಿ ಅಥವಾ ಲ್ಯಾಪ್ ಟಾಪ್ ನೋಡುವುದು ದಿನಚರಿಯಾಗಿದೆ. ಅಧ್ಯಯನಗಳ ಪ್ರಕಾರ ಈ ಸಾಧನಗಳು ಮೆಲಟೋನಿನ್ ಉತ್ಪಾದನೆಯನ್ನು ನಿಗ್ರಹಿಸುವ ಮೂಲಕ ನಿದ್ರೆಗೆ ಅಡ್ಡಿಯಾಗಬಹುದು ಎಂದು ಹೇಳುತ್ತದೆ.


ಇದನ್ನೂ ಓದಿ: Weight Gain : ಚಳಿಗಾಲದಲ್ಲಿ ತೂಕ ಹೆಚ್ಚಳವಾಗದಂತೆ ತಡೆಯಲು ಇಲ್ಲಿದೆ ನೋಡಿ ಟಿಪ್ಸ್​
(New Year, New Plans for Better Lifestyle)

Comments are closed.