ಸೋಮವಾರ, ಏಪ್ರಿಲ್ 28, 2025
HomeCorona UpdatesMekedatu Padayatra : ಮೇಕೆದಾಟು ಪಾದಯಾತ್ರೆ ನಿಲ್ಲಿಸಿ : ಡಿಕೆಶಿಗೆ ಸೂಚನೆ ಕೊಟ್ಟ ಹಿರಿಯ ನಾಯಕರು

Mekedatu Padayatra : ಮೇಕೆದಾಟು ಪಾದಯಾತ್ರೆ ನಿಲ್ಲಿಸಿ : ಡಿಕೆಶಿಗೆ ಸೂಚನೆ ಕೊಟ್ಟ ಹಿರಿಯ ನಾಯಕರು

- Advertisement -

Mekedatu Padayatra :ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕೋವಿಡ್​ ಸಂದರ್ಭದಲ್ಲಿ ಪಾದಯಾತ್ರೆ ಹೆಸರಿನಲ್ಲಿ ಜನದಟ್ಟಣೆ ಮಾಡುತ್ತಿರುವ ಕಾಂಗ್ರಸ್​ ನಡೆ ಹೈಕೋರ್ಟ್​ನ ಕಣ್ಣು ಕೆಂಪಗಾಗಿಸಿದೆ. ಅಲ್ಲದೇ ಇಂತಹ ಸಂದರ್ಭದಲ್ಲಿ ಪಾದಯಾತ್ರೆಗೆ ಹೇಗೆ ಅವಕಾಶ ನೀಡಿದಿರಿ ಎಂದು ಉತ್ತರ ನೀಡುವಂತೆ ಸೂಚಿಸಿ ಸರ್ಕಾರಕ್ಕೆ ನೋಟಿಸ್​ ಕಳುಹಿಸಿದ್ದು ಜನವರಿ 14ರ ಒಳಗಾಗಿ ಉತ್ತರ ನೀಡುವಂತೆ ಹೇಳಿದೆ. ಇದರ ಜೊತೆಯಲ್ಲಿ ರಾಮನಗರ ಜಿಲ್ಲಾಡಳಿತ, ಬಿಬಿಎಂಪಿ ಹಾಗೂ ಕೆಪಿಸಿಸಿಗೂ ನೋಟಿಸ್​ ಕಳುಹಿಸಿದೆ.

ಈ ಎಲ್ಲದರ ನಡುವೆ ಕಾಂಗ್ರೆಸ್​ ಕೂಡ ಮೇಕೆದಾಟು ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ಪಕ್ಷದ ಹಿರಿಯ ನಾಯಕರು ಮೇಕೆದಾಟು ಪಾದಯಾತ್ರೆ ಬಗ್ಗೆ ಅಸಮಾಧಾನ ತೋರಿರುವ ಹಿನ್ನೆಲೆಯಲ್ಲಿ ಇದು ಅರ್ಧಕ್ಕೆ ನಿಲ್ಲಲಿದೆ ಎನ್ನಲಾಗುತ್ತಿದೆ.

ಮೇಕೆದಾಟು ಯೋಜನೆ (Mekedatu Padayatra) ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್​ ನಡೆಸುತ್ತಿರುವ ಪಾದಯಾತ್ರೆಗೆ ಜನತೆ ಬೆಂಬಲವನ್ನೇನೋ ನೀಡುತ್ತಿದ್ದಾರೆ. ಆದರೆ ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಇಂತಹ ಪಾದಯಾತ್ರೆಗಳನ್ನು ಕೈಗೊಳ್ಳುವುದು ಸೂಕ್ತವಲ್ಲ. ಹೀಗಾಗಿ ಈ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಎಂದು ಪಕ್ಷದ ಹಿರಿಯ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ .

ಬಿಜೆಪಿ ಕೋವಿಡ್ ನಿರ್ವಹಣೆಯಲ್ಲಿ ಎಡವಿದೆ ಎಂದು ಕಾಂಗ್ರೆಸ್​ ರಾಷ್ಟ್ರಮಟ್ಟದಲ್ಲಿ ಕೇಸರಿ ಪಾಳಯಕ್ಕೆ ಛೀಮಾರಿ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ನಾವೇ ಪಾದಯಾತ್ರೆಗಳ ಹೆಸರಿನಲ್ಲಿ ಜನರನ್ನು ಒಂದೆಡೆ ಸೇರಿಸಿದರೆ ಪಕ್ಷಕ್ಕೆ ಇದರಿಂದ ಕೆಟ್ಟ ಹೆಸರು ಬರಬಹುದು. ಬಿಜೆಪಿಗೂ ನಮ್ಮ ವಿರುದ್ಧ ಮಾತನಾಡಲು ನಾವೇ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಅಲ್ಲದೇ ಜನತೆಯ ಆರೋಗ್ಯಕ್ಕೂ ಇದರಿಂದ ಹಾನಿ ಇದೆ. ಹೀಗಾಗಿ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಎಂದಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ : Bangalore Lockdown : ಬೆಂಗಳೂರಿನಲ್ಲಿ ಕರೋನಾ ರೌದ್ರ ನರ್ತನ : ಸೋಂಕಿನ ಪ್ರಮಾಣ ನಿಯಂತ್ರಿಸಲು ಅನಿವಾರ್ಯವಾಗುತ್ತಾ ಲಾಕ್ ಡೌನ್ ?

ಇದನ್ನೂ ಓದಿ : Bombay High Court : ಕೊರೊನಾ ಲಸಿಕೆ ಪಡೆಯದವರಿಗೆ ತಾರತಮ್ಯ ಮಾಡುವಂತಿಲ್ಲ : ಬಾಂಬೆ ಹೈಕೋರ್ಟ್

ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆ ವಿರುದ್ದ ಸರಕಾರಕ್ಕೆ ಹೈಕೋರ್ಟ್‌ ಚಾಟಿ : ಕೆಪಿಸಿಸಿಗೆ ಶೋಕಾಸ್‌ ನೋಟಿಸ್‌ ಜಾರಿ

news about d.k shivkumar led mekedatu padayatra

RELATED ARTICLES

Most Popular