Pig Heart Into Human Patient: ಅಮೆರಿಕದಲ್ಲಿ ಮನುಷ್ಯನಿಗೆ ಹಂದಿ ಹೃದಯದ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಷಿಕಾಗೊ: ಕಳೆದ ಅಕ್ಟೋಬರ್‌(October)ನಲ್ಲಿ ಮಾನವನಿಗೆ ಹಂದಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ( Transplantation of Pig kidney into Human) ಮಾಡಲಾಗಿದ್ದ ಅಮೆರಿಕದಲ್ಲಿ ಈಗ ಹಂದಿ ಹೃದಯ(Pig Heart Into Man)ವನ್ನು ಮನುಷ್ಯ(Human)ನಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ.

ಮಾರಣಾಂತಿಕ ಹೃದ್ರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ ಕುಲಾಂತರಿ ಹಂದಿ ಹೃದಯದ ಕಸಿ ಶಸ್ತ್ರಚಿಕಿತ್ಸೆಯನ್ನು ಯೂನಿವಸಿರ್ಟಿ ಆಫ್ ಮೆರಿಲ್ಯಾಂಡ್ ಮೆಡಿಸಿನ್‌ ಪರಿಣತರ ತಂಡ 9 ಗಂಟೆ ಕಾಲ ನೆರವೇರಿಸಿದೆ. ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಪ್ರಾಣಿಯೊಂದರ ಹೃದವನ್ನು ಮನುಷ್ಯನಿಗೆ ಕಸಿ ಮಾಡಿದ ಪ್ರಕರಣ ಇದಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯನ್ನು ಮೂರು ದಿನ ನಿಗಾದಲ್ಲಿ ಇರಿಸಲಾಗಿದ್ದು, ಆರೋಗ್ಯವಾಗಿರುವುದಾಗಿ ತಜ್ಞ ವೈದ್ಯರ ತಂಡ ಹೇಳಿದೆ.

ಅಂಗಾಂಗ ದಾನದ ಕೊರತೆ ಎದುರಿಸುತ್ತಿರುವ ಈ ದಿನಗಳಲ್ಲಿ ಹಂದಿ ಹೃದಯ ಕಸಿ, ಅಂಗಾಂಗವನ್ನು ಎದುರು ನೋಡುತ್ತಿರುವ ರೋಗಿಗಳಿಗೆ ಮತ್ತು ಅವರ ಕುಟುಂಬಕ್ಕೆ ಹೊಸ ಆಶಾಕಿರಣ ಆಗಿದೆ.ಭವಿಷ್ಯದಲ್ಲಿ ದಾನಿಗಳ ಕೊರತೆ ಇದ್ದರೂ ಹಂದಿಗಳ ಅಂಗಾಂಗಗಳನ್ನು ಮನುಷ್ಯರಿಗೆ ಬಳಸಬಹುದೆಂಬ ನಿರೀಕ್ಷೆಯನ್ನು ಈ ಶಸ್ತ್ರ ಚಿಕಿತ್ಸೆ ಹುಟ್ಟಿಸಿದೆ.

ಹೃದ್ರೋಗ ತೀವ್ರವಾಗಿ ಬದುಕುವ ಆಸೆಯನ್ನೆ ಬಿಟ್ಟಿದ್ದ ಮೆರಿಲ್ಯಾಂಡ್‌ನ ಡೇವಿಡ್ ಬೆನ್ನೆಟ್ (57) , ಕೊನೆಯ ಅವಕಾಶವೆಂದು ಹಂದಿ ಹೃದಯದ ಶಸ್ತ್ರಚಿಕಿತ್ಸೆ ಒಪ್ಪಿದ್ದರು ಎಂದು ಯೂನಿವಸಿರ್ಟಿ ಆಫ್ ಮೆರಿಲ್ಯಾಂಡ್ ಮೆಡಿಸಿನ್ ಸಂಸ್ಥೆಯ ಮುಖ್ಯಸ್ಥ ಡಾ.ಬಾಟ್ಲಿರ್ ಗ್ರಿಫಿತ್ ಹೇಳಿದ್ದಾರೆ. ಮನುಷ್ಯ ಹೃದಯ ಕಸಿ ಸಾಧ್ಯವಿಲ್ಲದ ವ್ಯಕ್ತಿಗೆ ಅಂತಿಮ ಅವಕಾಶ ಎಂಬಂತೆ ಪ್ರಯೋಗಾತ್ಮಕವಾಗಿ ಹಂದಿ ಹೃದಯ ಜೋಡಿಸಲಾಗಿದೆ. ಹಂದಿ ಹೃದಯ 267 ಗ್ರಾಂ ತೂಕವಿದ್ದರೆ, ಮನುಷ್ಯ ಹೃದಯ 303 ಗ್ರಾಂ ತೂಕವಿದೆ ಎಂದಿದ್ದಾರೆ.

ಹಂದಿಯ ಹೃದಯಕ್ಕೆ ಆರು ಮನುಷ್ಯ ವಂಶವಾಹಿಯನ್ನು ಸೇರಿಸಿ ಅದು ಮನುಷ್ಯ ಶರೀರದ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಮಾಡಲಾಯಿತು. ಹಂದಿ ಹೃದಯ ಎನ್ಲಾರ್ಜ್ (ವಿಸ್ತರಿಸುವುದನ್ನು) ಆಗುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಯಿತು ಎಂದವರು ಹೇಳಿದ್ದಾರೆ.

ಹಂದಿ ಕಿಡ್ನಿ ಕಸಿಯೂ ಆಗಿತ್ತು
ಕಳೆದ ಅಕ್ಟೋಬರ್‌ನಲ್ಲಿ ನ್ಯೂಯಾರ್ಕ್‌ನ ಎನ್ವೈಯು ಲ್ಯಾಂಗೋನ್ ಹೆಲ್ತ್ ಸೆಂಟರ್‌ನ ತಜ್ಞರು ಕುಲಾಂತರಿ ತಳಿಯ ಹಂದಿಯ ಕಿಡ್ನಿಯನ್ನು ಮಿದುಳು ನಿಷ್ಕ್ರಿಯವಾಗಿ ವಿವಿಧ ಅಂಗಾಂಗಗಳು ವಿಫಲವಾಗಿದ್ದ ವ್ಯಕ್ತಿಗೆ ಹಂದಿ ಮೂತ್ರಪಿಂಡ (ಕಿಡ್ನಿ)ವನ್ನು ಕಸಿ ಮಾಡಿದ್ದರು. ಈ ಪ್ರಯೋಗಾತ್ಮಕ ಶಸ್ತ್ರಚಿಕಿತ್ಸೆಯ ನಂತರ 54 ತಾಸು ರೋಗಿಯನ್ನು ನಿಗಾದಲ್ಲಿ ಇರಿಸಲಾಗಿತ್ತು. ಹಂದಿಯ ಕಿಡ್ನಿಯು ಮನುಷ್ಯರ ಕಿಡ್ನಿಯಂತೆಯೇ ಸಮರ್ಪಕವಾಗಿ ಕೆಲಸ ಮಾಡಿದ್ದನ್ನು ಖಚಿತ ಪಡಿಸಿಕೊಳ್ಳಲಾಯಿತು.

ಇದನ್ನೂ ಓದಿ: Quinoa Health Benefits : ಕ್ವಿನೋವಾ ಧಾನ್ಯದ ಪರಿಚಯವಿದೆಯೇ? ಆರೋಗ್ಯಕ್ಕಂತೂ ಇದು ಬಹಳ ಉಪಕಾರಿ

(US surgeons transplant pig heart into Human Patient)

Comments are closed.